ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ನೇಮಕಾತಿ: ಒಟ್ಟು 25 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ವತಿಯಿಂದ ವೈದ್ಯಕೀಯ ಮತ್ತು ಸಂಯೋಜಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ನೇಮಕಾತಿ ನಡೆಯುತ್ತಿದೆ. AB PMJAY – CM's ArK ಯೋಜನೆಗಳಡಿ, ಒಟ್ಟು 25 ಹುದ್ದೆಗಳಿಗೆ ನೇರ ಸಂದರ್ಶನವನ್ನು ನವೆಂಬರ್ 30 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಟ್ರಸ್ಟ್‌ನ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ (SAST) ಖಾಲಿ ಇರುವ ವಿವಿಧ ವೈದ್ಯಕೀಯ ಹಾಗೂ ಸಂಯೋಜಕ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ನೇರ ಸಂದರ್ಶನ ಪ್ರಕಟಿಸಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY – CM’s ArK) ಹಾಗೂ ಇತರೆ ಆರೋಗ್ಯ ಯೋಜನೆಗಳ ಅನುಷ್ಠಾನಕ್ಕಾಗಿ ಈ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ನವೆಂಬರ್ 30, 2026ರಂದು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ:
ಟ್ರಸ್ಟ್‌ನ ಪ್ರಕಟಣೆಯ ಪ್ರಕಾರ ಒಟ್ಟು 25 ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಇದರಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಡಾಕ್ಟರ್ ಇನ್-ಆಫೀಸ್ ಕ್ವಾಲಿಟಿ ಸೆಲ್ (01), ಸೀನಿಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್ (11), ಎಕ್ಸಿಕ್ಯೂಟಿವ್ ಡಾಕ್ಟರ್ 2ಎ ಕ್ಲೇಮ್ಸ್ (06), ರೀಜನಲ್ ಕನ್ಸಲ್ಟೆಂಟ್ – ಮೈಸೂರು ವಿಭಾಗ (01), ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ – ಮೈಸೂರು, ಬೆಂಗಳೂರು ಗ್ರಾಮಾಂತರ, ಗದಗ (03), ಟೀಮ್ ಲೀಡರ್-ಡಾಕ್ಟರ್ (ಪ್ರೀ-ಆಥ್) ಕೆಎಎಸ್‌ಎಸ್ ಯೋಜನೆ (01), ಟೀಮ್ ಲೀಡರ್-ಡಾಕ್ಟರ್ (ಕ್ಲೇಮ್ಸ್) ಕೆಎಎಸ್‌ಎಸ್ ಯೋಜನೆ (01) ಹಾಗೂ ಎಕ್ಸಿಕ್ಯೂಟಿವ್ ಡಾಕ್ಟರ್-ಎಂಆರ್‌ಸಿ (01) ಹುದ್ದೆಗಳು ಸೇರಿವೆ.
ನೇಮಕಾತಿ ಪ್ರಕ್ರಿಯೆ ಮತ್ತು ಗುತ್ತಿಗೆ ಅವಧಿ:
ಈ ಹುದ್ದೆಗಳು ಕಚೇರಿಯಿಂದ ಹಾಗೂ ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿವೆ. ಅಭ್ಯರ್ಥಿಗಳನ್ನು ಮೆರಿಟ್, ಶೈಕ್ಷಣಿಕ ಅರ್ಹತೆ, ರೋಸ್ಟರ್ ಮತ್ತು ಟ್ರಸ್ಟ್‌ನ ನಿಯಮಾವಳಿಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ. ಆರಂಭದಲ್ಲಿ ಗುತ್ತಿಗೆ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದ್ದು, ಅಗತ್ಯಕ್ಕನುಗುಣವಾಗಿ ಕಾರ್ಯಕ್ಷಮತೆಯ ಆಧಾರದ ಮೇಲೆ ವಿಸ್ತರಿಸುವ ಅವಕಾಶವಿದೆ.
ಇದನ್ನೂ ಓದಿ: ಮೊದಲ ಉದ್ಯೋಗ ಪಡೆಯುವುದು ಹೇಗೆ? ಫ್ರೆಶರ್‌ಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು
ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳ:
ನೇರ ಸಂದರ್ಶನವು ದಿನಾಂಕ 30-11-2026ರಂದು ಬೆಂಗಳೂರಿನ ಮಾಗಡಿ ರಸ್ತೆಯ ಆರೋಗ್ಯ ಸೌಧದ 7ನೇ ಮಹಡಿಯಲ್ಲಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಚೇರಿಯಲ್ಲಿ (ಪಿನ್ ಕೋಡ್: 560023) ನಡೆಯಲಿದೆ. ಅಭ್ಯರ್ಥಿಗಳಿಗೆ ನೋಂದಣಿಯು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ, ಕಂಪ್ಯೂಟರ್ ಪರೀಕ್ಷೆಯು ಬೆಳಗ್ಗೆ 10:45 ರಿಂದ ಮಧ್ಯಾಹ್ನ 01:30ರವರೆಗೆ ಹಾಗೂ ಸಂದರ್ಶನವು ಮಧ್ಯಾಹ್ನ 02:30 ರಿಂದ ಸಂಜೆ 05:30ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ ವಿವರ:
ಅರ್ಜಿ ನಮೂನೆ ಹಾಗೂ ಹುದ್ದೆಗಳ ಹೆಚ್ಚಿನ ವಿವರಗಳನ್ನು ಆಸಕ್ತ ಅಭ್ಯರ್ಥಿಗಳು ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್ sast.karnataka.gov.in/sast/ ನಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-222536200 ಅಥವಾ ಇ-ಮೇಲ್ directorsast@gmail.com ಸಂಪರ್ಕಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




