AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರಿನ ಪಾರ್ಕ್ ಟೈಮಿಂಗ್ಸ್ ಜಟಾಪಟಿ, ಮಧ್ಯಾಹ್ನ ಓಪನ್ ಮಾಡುವಂತೆ ಒತ್ತಾಯ

ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ಯಾನವನಗಳ ಪ್ರವೇಶ ಸಮಯವನ್ನು ಕಡಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ ಸಂಜೆ ಮಾತ್ರ ಪಾರ್ಕ್‌ಗಳನ್ನು ತೆರೆಯಲು ಸಮಯ ನಿಗದಿ ಮಾಡಿಲಾಗಿತ್ತು. ಇದೀಗ ಮತ್ತೆ ಈ ಪಾರ್ಕ್ ಟೈಮಿಂಗ್ ಜಟಾಪಟಿ ಮತ್ತೆ ಮುನ್ನೆಲೆಗೆ ಬಂದಿದ್ದು, ಮಧ್ಯಾಹ್ನ ಸಹ ಪಾರ್ಕ್ ತೆರೆಯುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರಿನ ಪಾರ್ಕ್ ಟೈಮಿಂಗ್ಸ್ ಜಟಾಪಟಿ, ಮಧ್ಯಾಹ್ನ ಓಪನ್ ಮಾಡುವಂತೆ ಒತ್ತಾಯ
Park
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Sep 28, 2026 | 9:12 PM

Share

ಬೆಂಗಳೂರು, (ಸೆಪ್ಟೆಂಬರ್ 28): ಬೆಂಗಳೂರಿನಲ್ಲಿ ಜಿಬಿಎ ಅಥವಾ ಬಿಬಿಎಂಪಿ ಪಾರ್ಕ್ಗಳನ್ನ ನಿತ್ಯ ಸಾವಿರಾರು ಮಂದಿ ಅವಲಂಬಿಸುತ್ತಾರೆ. ಆದರೆ ಪಾರ್ಕ್ಗಳ ಟೈಮಿಂಗ್ಸ್ ಮಾತ್ರ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಇಲ್ಲ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಉದ್ಯಾನವನಗಳನ್ನ ತೆರೆಯಬೇಕು ಅಂತಾ ನಾಗರಿಕರು ಒತ್ತಾಯ ಮಾಡಿದ್ದಾರೆ. ಬೆಂಗಳೂರಿನಲ್ಲಿ GBA ಅಥವಾ ಬಿಬಿಎಂಪಿ ಅಡಿಯಲ್ಲಿನ ಎಲ್ಲಾ ಪಾರ್ಕ್ ಗಳ ಸಮಯವನ್ನು ವಿಸ್ತರಿಸುವಂತೆ ನಾಗರಿಕರು ಒತ್ತಾಯ ಮಾಡಿದ್ದಾರೆ. ಸದ್ಯ ನಗರದ ಹಲವು ಪಾರ್ಕ್ ಗಳು ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾತ್ರ ಓಪನ್ ಆಗಿದ್ದು, ಮಧ್ಯಾಹ್ನ ವೇಳೆಯಲ್ಲಿ ಕ್ಲೋಸ್ ಆಗಿರಲಿವೆ. ಇದು ಸಾಕಷ್ಟು ನಾಗರಿಕರ ಬೇಸರಕ್ಕೆ ಕಾರಣವಾಗಿದೆ.

ಬೆಳಗ್ಗೆ ಹಾಗೂ ಸಂಜೆ ವೇಳೆ ಮಾತ್ರವಲ್ಲದೆ ಮಧ್ಯಾಹ್ನದ ವೇಳೆಯೂ ಪಾರ್ಕ್ ನತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಿದೆ. ಬಿಸಿಲು ಹೆಚ್ಚಾಗಿರುವ ಈ ವೇಳೆ ಬಳಲುವ ನಾಗರಿಕರು ಒಂದಷ್ಟು ಸಮಯ ವಿಶ್ರಾಂತಿ ತೆಗೆದುಕೊಳ್ಳಲು ಪಾರ್ಕ್ ನತ್ತ ಬಂದರೆ ಕ್ಲೋಸ್ ಆಗಿರುವುದನ್ನು ಕಂಡು ನಿರಾಸೆಗೊಳ್ಳುತ್ತಿದ್ದಾರೆ. ಹೀಗಾಗಿ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಬೆಳಗ್ಗೆಯಿಂದ ಸಂಜೆ ವರೆಗೂ ಉದ್ಯಾನವನಗಳ ಲಭ್ಯತೆ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾರ್ಕ್‌ಗಳ ಸಮಯ ವಿಸ್ತರಣೆ, ಇಲ್ಲಿದೆ ಹೊಸ ಟೈಮಿಂಗ್ಸ್

ಈ ಮೊದಲು ಬೆಳಗ್ಗೆ 5ರಿಂದ ಬೆಳಗ್ಗೆ 10ರ ತನಕ ಪಾರ್ಕ್‍ಗಳು ತೆರೆದಿರುತ್ತಿತ್ತು. ಬಳಿಕ ಮಧ್ಯಾಹ್ನ 1:30ರಿಂದ ರಾತ್ರಿ 8ರ ತನಕ ಪಾರ್ಕ್‍ಗಳನ್ನು ತೆರೆಯಲು ಅವಕಾಶ ಇತ್ತು. ಆದ್ರೆ, ಇದಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗಿದ್ದವು. ಇದರಿಂದ ಎಚ್ಚೆತ್ತ ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರು, ಜಿಬಿಎ ಸರಹದ್ದಿನಲ್ಲಿರುವ ಎಲ್ಲಾ ಪಾರ್ಕ್ ಗಳ ಸಮಯವನ್ನು ವಿಸ್ತರಣೆ ಮಾಡಿದ್ದರು. ಪ್ರತಿದಿನ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಆದ್ರೆ, ಇದೀಗ ಮಧ್ಯಾಹ್ನವೂ ಸಹ ಪಾರ್ಕ್ ತೆರೆಯುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಒಟ್ಟಾರೆ ನಗರದ 5 ಪಾಲಿಕೆಗಳ ವ್ಯಾಪ್ತಿಯ ಪಾರ್ಕ್ ಗಳ ಸಮಯ ಏಕರೂಪವಾಗಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಪಾರ್ಕ್ ಗಳು ಓಪನ್ ಇದ್ದರೆ ಅನಧಿಕೃತ ಚಟುವಟಿಗಳು ನಡೆಯುವ ಸಾಧ್ಯತೆ ಕೂಡ ಇದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪಾರ್ಕ್ ಗಳ ಕಾರ್ಯನಿರ್ವಹಣೆ ಮಾಡುವತ್ತ GBA ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More