AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

80ರ ದಶಕದ ಹಳೆಯ ಶೈಲಿಯ ಫೋಟೋವನ್ನು ಎಡಿಟಿಂಗ್‌ ಮಾಡಲು ನಕಲಿ ಆ್ಯಪ್ ಬಳಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಮೊಬೈಲ್ ಹ್ಯಾಕ್ ಮಾಡಿ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟ ವಂಚಕರು, ಬೆತ್ತಲೆ ಫೋಟೋ ಹರಿಬಿಟ್ಟು ಬ್ಲಾಕ್‌ಮೇಲ್ ಮಾಡಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು
ಸೈಬರ್​ ವಂಚನೆImage Credit source: Getty images
ಮಂಜುನಾಥ ಎಚ್​. ವಿ.
| Edited By: |

Updated on:Sep 18, 2026 | 8:46 PM

Share

ನೆಲಮಂಗಲ, ಸೆಪ್ಟೆಂಬರ್​​ 18: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲ ದಿನಗಳಿಂದ ಎಲ್ಲರ ವಾಟ್ಸಾಪ್ ಸ್ಟೇಟಸ್‌ನಲ್ಲಿ ರಾರಾಜಿಸುತ್ತಿದ್ದ ‘80ರ ದಶಕದ ಹಳೆಯ ಶೈಲಿಯ ಫೋಟೋ’ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಹೊಸ ವಂಚನೆಯ ಜಾಲ ಬೀಸಿದ್ದಾರೆ. 80ರ ದಶಕದ ಲುಕ್‌ನಲ್ಲಿ ಫೋಟೋ ಎಡಿಟ್ ಮಾಡಲು ಹೋದ ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಅಶ್ಲೀಲ ಫೋಟೋ ಕಳುಹಿಸಿ 50 ಸಾವಿರ ರೂ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ನಕಲಿ ಆ್ಯಪ್ ಇನ್‌ಸ್ಟಾಲ್: ಖಾತೆಗೆ ಕನ್ನ

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ ವಿನೋದ್ (45) ವಂಚನೆಗೊಳಗಾದ ದುರ್ದೈವಿ. ಮೂರು ದಿನಗಳ ಹಿಂದೆ ಚಾಟ್‌ ಜಿಪಿಟಿ ಮಾದರಿಯ ತಂತ್ರಜ್ಞಾನದ ಮೂಲಕ ತಮ್ಮ ಫೋಟೋವನ್ನು 80ರ ದಶಕದ ಶೈಲಿಗೆ ಬದಲಾಯಿಸಲು ಹೋಗಿ ನಕಲಿ ಆ್ಯಪ್ ಒಂದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ್ಯಪ್ ಇನ್‌ಸ್ಟಾಲ್ ಆದ ಬೆನ್ನಲ್ಲೇ ಅವರ ಮೊಬೈಲ್ ಹಾಗೂ ಖಾತೆ ಹ್ಯಾಕ್ ಆಗಿದೆ.

LIVE TV

ಹಣ ನೀಡದ್ದಕ್ಕೆ ಸ್ನೇಹಿತರ ಗ್ರೂಪ್‌ಗಳಿಗೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು 

ಮೊಬೈಲ್ ಹ್ಯಾಕ್ ಆದ ಕೇವಲ ಐದು ನಿಮಿಷಗಳಲ್ಲಿ ವಿನೋದ್​​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ 50 ಸಾವಿರ ರೂ ನೀಡುವಂತೆ ನೇರವಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ವಿನೋದ್ ಆತನಿಗೆ ಬೈದು ನಿರಾಕರಿಸಿದಾಗ, ‘ಹಣ ಕೊಡದಿದ್ದರೆ ನಿನ್ನ ಫೋಟೋವನ್ನು ಬೆತ್ತಲೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಆದರೂ ಹೆದರದ ವಿನೋದ್ ಕರೆಯನ್ನು ಕಟ್​ ಮಾಡಿದ್ದಾರೆ. ಆದರೆ, ಕಾಲ್ ಕಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಂಚಕರು ವಿನೋದ್ ಫೋಟೋವನ್ನು ಬೆತ್ತಲೆಯಾಗಿ ಎಡಿಟ್ ಮಾಡಿ, ಅವರ ಸ್ನೇಹಿತರ ವಾಟ್ಸಾಪ್ ಗ್ರೂಪ್‌ಗಳಿಗೆ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: ವೈರಲ್ ಆಗ್ತಿದೆ 80ರ ದಶಕದ ಟ್ರೆಂಡ್; ಚಾಟ್ ಜಿಪಿಟಿಯಲ್ಲಿ ನಿಮ್ಮ ಫೋಟೊವನ್ನು ರೆಟ್ರೋ ಲುಕ್‌ಗೆ ಹೀಗೆ ಬದಲಾಯಿಸಿ

ಇನ್ನು ಘಟನೆಯಿಂದ ಕಂಗಾಲಾದ ವಿನೋದ್​​ ತಕ್ಷಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಇಂತಹ ವಿಷಯಗಳ ಬೆನ್ನತ್ತಿ, ಅಪರಿಚಿತ ಹಾಗೂ ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಸಾರ್ವಜನಿಕರು ಎಚ್ಚರವಹಿಸುವುದು ಒಳ್ಳೆಯದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:41 pm, Fri, 18 September 26

Follow Us
ಮಂಜುನಾಥ ಎಚ್​. ವಿ.
ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್