ದೇವನಹಳ್ಳಿಯಲ್ಲಿ ಯುವಕರ ಮೇಲೆ ಲಾಂಗ್ ಬೀಸಿದ ಪುಂಡರು; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಲ್ಕು ಜನ ಯುವಕರು ರಾತ್ರಿ ದೇವರ ದರ್ಶನಕ್ಕೆ ಹೋಗಿ ಬಂದು ಬಸ್ ಸ್ಟಾಂಡ್ನಲ್ಲಿ ನಿಂತಿದ್ದರು. ಈ ವೇಳೆ ಮೂರು ಬೈಕ್ನಲ್ಲಿ ಬಂದ 9 ಜನ ಪುಂಡರು ಯುವಕರನ್ನ ಅವಾಚ್ಯ ಶಬ್ದದಿಂದ ನಿಂದಿಸಿ ಅವರ ಮೇಲೆ ಮಚ್ಚು, ಲಾಂಗ್ ಬೀಸಿದ್ದಾರೆ.
ದೇವನಹಳ್ಳಿ: ದೇವರ ದರ್ಶನಕ್ಕೆ ಹೋಗಿ ಬಂದು ಬಸ್ ಸ್ಟಾಂಡ್ ಬಳಿ ನಿಂತಿದ್ದ ಯುವಕರ ಮೇಲೆ ಪುಂಡರು ಲಾಂಗ್ ಬೀಸಿದ್ದಾರೆ. ಮದ್ಯರಾತ್ರಿ ಲಾಂಗ್, ತಲ್ವಾರ್ ಹಿಡಿದು ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕಿಡಿಗೇಡಿಗಳು ಇನೋವಾ ಕಾರನ್ನ ಜಖಂಗೊಳಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಲ್ಕು ಜನ ಯುವಕರು ರಾತ್ರಿ ದೇವರ ದರ್ಶನಕ್ಕೆ ಹೋಗಿ ಬಂದು ಬಸ್ ಸ್ಟಾಂಡ್ನಲ್ಲಿ ನಿಂತಿದ್ದರು. ಈ ವೇಳೆ ಮೂರು ಬೈಕ್ನಲ್ಲಿ ಬಂದ 9 ಜನ ಪುಂಡರು ಯುವಕರನ್ನ ಅವಾಚ್ಯ ಶಬ್ದದಿಂದ ನಿಂದಿಸಿ ಅವರ ಮೇಲೆ ಮಚ್ಚು, ಲಾಂಗ್ ಬೀಸಿದ್ದಾರೆ. ಲಾಂಗ್ ಬೀಸುತ್ತಿದ್ದಂತೆ ಯುವಕರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಮೂರು ಜನ ಯುವಕರು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪುಂಡರು ಕೊಲೆಗೆ ಯತ್ನಿಸಿದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಅಕ್ರಮ ಚಿನ್ನ ಸಾಗಾಟ; ಆರೋಪಿ ಬಂಧನ ಜ್ಯೂಸರ್ ಯಂತ್ರದಲ್ಲಿ ಅಕ್ರಮವಾಗಿ ಚಿನ್ನ ಸಾಗುತ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಉತ್ತರಪ್ರದೇಶ ಮೂಲದ 33 ವರ್ಷದ ವ್ಯಕ್ತಿ ಬಂಧಿತ ಆರೋಪಿ. ಬಂಧಿತ ಆರೋಪಿ ಶಾರ್ಜಾದಿಂದ ದೇವನಹಳ್ಳಿ ಏರ್ಪೂರ್ಟ್ಗೆ ಬಂದಿದ್ದ. ಕಸ್ಟಮ್ಸ್ ವಿಭಾಗದ ಏರ್ ಇಂಟೆಲಿಜೆನ್ಸ್ ಯೂನಿಟ್ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. 930 ಗ್ರಾಂ ತೂಕದ ಸುಮಾರು 45,81,180 ರೂಪಾಯಿ ಮೌಲ್ಯದ ಚಿನ್ನ ಜಪ್ತಿಮಾಡಲಾಗಿದೆ.
ಇದನ್ನೂ ಓದಿ
Punjab: ಲುಧಿಯಾನಾ ಕೋರ್ಟ್ ಎರಡನೇ ಮಹಡಿಯಲ್ಲಿ ಸ್ಫೋಟ; ಇಬ್ಬರು ಸಾವು, ಹಲವರಿಗೆ ಗಾಯ