Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾದಲ್ಲೂ ಕರೆಂಟ್ ಇರಲ್ವಾ? ಇಲ್ಲಿದೆ ವಿವರ!
ಬೆಸ್ಕಾಂ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಜುಲೈ 25 ಮತ್ತು 26 ರಂದು ಬೆಂಗಳೂರಿನ ಕೆಂಗೇರಿ, ಸಿಟಿ ಮಾರ್ಕೆಟ್, ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಬೆಸ್ಕಾಂ ಮನವಿ ಮಾಡಿದೆ.

ಸಾಂದರ್ಭಿಕ ಚಿತ್ರImage Credit source: gettyimages.com
ಮುಖ್ಯಾಂಶಗಳು
- ಬೆಸ್ಕಾಂ ವ್ಯಾಪ್ತಿಯಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ.
- ಜುಲೈ 25 ಮತ್ತು 26 ರಂದು ಪವರ್ ಕಟ್ ಇರಲಿದೆ.
- ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ.
ಬೆಂಗಳೂರು, ಜುಲೈ 25: ಬೆಸ್ಕಾಂ (BESCOM) ವ್ಯಾಪ್ತಿಯ ಪ್ರಮುಖ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವುದರಿಂದ, ಜುಲೈ 25 ಮತ್ತು 26 ರಂದು ನಗರದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 66/11 ಕೆ.ವಿ ಎಸ್‌ಆರ್‌ಟಿ, ವಿಕ್ಟೋರಿಯಾ, ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ಈ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಇಂದು (ಜುಲೈ 25) ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳು
- ವಿಕೆಟೋರಿಯಾ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿ: ಸಿಟಿ ಮಾರ್ಕೆಟ್, ಅವಿನ್ಯೂ ರಸ್ತೆ, ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ಆರ್‌ಟಿ ಸ್ಟ್ರೀಟ್, ಸಿಟಿ ಸ್ಟ್ರೀಟ್, ಚಿಕ್ಕಪೇಟೆ, ನಗರ್ಥಪೇಟೆ, ಎಸ್.ಪಿ. ರಸ್ತೆ, ಟೌನ್ ಹಾಲ್, ಜೆ.ಸಿ. ರಸ್ತೆ, ಮಿನರ್ವಾ ಸರ್ಕಲ್, ಕೆ.ಜಿ. ರಸ್ತೆ, ಗಾಂಧಿನಗರ, ಮೈಸೂರು ರಸ್ತೆ, ಪೊಲೀಸ್ ವಸತಿಗೃಹ, ಗೋರಿಪಾಳ್ಯ, ಬಿನ್ನಿಪೇಟೆ, ನ್ಯೂ ತರಗುಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಲಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್ ಮತ್ತು ಸುತ್ತಮುತ್ತಲಿನ ಭಾಗಗಳು.
- ಎಸ್‌ಆರ್‌ಟಿ ಹಾಗೂ ಇತರ ವ್ಯಾಪ್ತಿಯ ಪ್ರದೇಶಗಳು: ನ್ಯೂ ಕೆ.ಹೆಚ್.ಬಿ ಕಾಲೋನಿ, ಬಂಡೇಮಠ, ಕೆ.ಎಸ್.ಆರ್‌ಟಿ, ಕೆ.ಹೆಚ್.ಬಿ, ಅರುಂಧತಿನಗರ, ಶೀರ್ಕೆ, ಹೊಯ್ಸಳ ಸರ್ಕಲ್, ಸಚ್ಚಿದಾನಂದನಗರ, ವಲೇಗರಹಳ್ಳಿ, ಚಿಕ್ಕನಹಳ್ಳಿ, ಸರ್.ಎಂ.ವಿ. ಲೇಔಟ್, ಜ್ಞಾನಭಾರತಿ ಲೇಔಟ್, ಕೋಡಿಗೇಹಳ್ಳಿ, ಕೆನ್ನಹಳ್ಳಿ, ಸೀಗೇಹಳ್ಳಿ, ಬಿಎಎಮ್‌ಎಲ್ ಲೇಔಟ್, ಮಾಗಡಿ ಮೇನ್ ರೋಡ್, ಅಂಜನಾನಗರ, ಅಂಬೇಡ್ಕರ್ ನಗರ, ಮಾರುತಿನಗರ, ಚೊಕ್ಕಸಂದ್ರ, ನಗದೆವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ಭಾಗದಲ್ಲೂ ಕರೆಂಟ್ ಇರಲ್ಲ
- ತಾವರೆಕೆರೆ ವ್ಯಾಪ್ತಿ: ತಾವರೆಕೆರೆ, ಜಟ್ಟಿಕಾವಲು, ಚನ್ನೇನಹಳ್ಳಿ, ಯರಪ್ಪ ಇಂಡಸ್ಟ್ರಿಯಲ್ ಏರಿಯಾ, ಗಿಡ್ಡದಪಾಳ್ಯ, ಹುನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವಟೂರು, ಮೆಟಿಪಾಳ್ಯ ಹಾಗೂ ಗಂಗೇನಹಳ್ಳಿ.
- ಬ್ಯಾಡರಹಳ್ಳಿ ವ್ಯಾಪ್ತಿ: ಬ್ಯಾಡರಹಳ್ಳಿ, ಅಂಜನಾನಗರ, ಬಿಎಎಮ್‌ಎಲ್ ಲೇಔಟ್, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಹೆಗ್ಗಡದೇವನಪುರ, ಭವಾನಿ ಲೇಔಟ್, ಬಾಲಾಜಿ ಲೇಔಟ್, ಹೆಗ್ಗನಹಳ್ಳಿ, ತುಂಗಾನಗರ, ಕೆಂಪೇಗೌಡನಗರ, ಹೊಸಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ನಾಗರಹೊಳೆನಗರ ಹಾಗೂ ಸಂಜೀವಿನಿ ನಗರ. ಸಾರ್ವಜನಿಕರು ಹಾಗೂ ಗ್ರಾಹಕರು ಮುನ್ನೆಚ್ಚರಿಕೆಯಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆಸ್ಕಾಂ ವಿನಂತಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




