AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಲಿಕೇಶಿನಗರ ಸ್ಫೋಟಕ್ಕೆ ಬಿಗ್ ಟ್ವಿಸ್ಟ್‌! ತಂಗಿಯ ಮದುವೆ ಮುರಿದಿದ್ದಕ್ಕೆ ಸೇಡು; ಸ್ಫೋಟಕ ಸಂಗತಿ ಬಿಚ್ಚಿಟ್ಟ ಕಮಿಷನರ್

ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣಕ್ಕೆ ಬಿಗ್​ ಟ್ವಿಸ್ಟ ಸಿಕ್ಕಿದೆ. ಪುಲಕೇಶಿನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಕೃತ್ಯದ ಹಿಂದಿನ ಅಸಲಿ ಸತ್ಯ ಕೂಡ ಬಯಲಾಗಿದೆ. ಸ್ಫೋಟದ ಕುರಿತಾಗಿ ಪೊಲೀಸ್ ಆಯುಕ್ತ ಸೀಮಂತ್​ಕುಮಾರ್ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ.

ಪುಲಿಕೇಶಿನಗರ ಸ್ಫೋಟಕ್ಕೆ ಬಿಗ್ ಟ್ವಿಸ್ಟ್‌! ತಂಗಿಯ ಮದುವೆ ಮುರಿದಿದ್ದಕ್ಕೆ ಸೇಡು; ಸ್ಫೋಟಕ ಸಂಗತಿ ಬಿಚ್ಚಿಟ್ಟ ಕಮಿಷನರ್
ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Oct 25, 2026 | 9:07 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ಪ್ರಕರಣ
  • ವೈಯಕ್ತಿಕ ಕಾರಣಕ್ಕಾಗಿ ಬ್ಲಾಸ್ಟ್ ಮಾಡಿರುವುದು ಪತ್ತೆ
  • ಮೂವರನ್ನು ಬಂಧಿಸಿದ ಪುಲಿಕೇಶಿನಗರ ಪೊಲೀಸರು

ಬೆಂಗಳೂರು, ಅಕ್ಟೋಬರ್​​ 25: ಇತ್ತೀಚೆಗೆ ದಸರಾ ಸಡಗರದ ವೇಳೆ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಐದಂತಸ್ತಿನ ಕಟ್ಟಡದಲ್ಲಿ ಬ್ಲಾಸ್ಟ್ ಆಗಿತ್ತು. IED ಬಾಂಬ್‌ಗೆ ಬಳಸುವ ವಸ್ತುಗಳು ಕೂಡ ಸ್ಥಳದಲ್ಲಿ ಪತ್ತೆಯಾಗಿದ್ದವು. ಸದ್ಯ ಪುಲಕೇಶಿನಗರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಲಾಲುದ್ದೀನ್, ಸೈದುಲಾ ಇಸ್ಲಾಂ, ಬುರ್ಹಾನ್ ಬಂಧಿತ ಆರೋಪಿಗಳು.  ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದಕ್ಕಾಗಿ ಐಇಡಿ ಬಾಂಬ್ ಸ್ಫೋಟಿಸಿ ಕೊಲೆಗೆ ಸಂಚು ರೂಪಿಸಿದ್ದು ಇದೀಗ ಬಯಲಾಗಿದೆ.

ಸ್ಫೋಟಕ್ಕೆ ವೈಯಕ್ತಿಕ ದ್ವೇಷವೇ ಕಾರಣ  

ಸ್ಫೋಟದ ಹಿಂದಿನ ಅಸಲಿ ಸತ್ಯ ಇದೀಗ ಬಯಲಾಗಿದೆ. ಜಲಾಲುದ್ದೀನ್​​, ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್​​ ಇಬ್ಬರು ಅಸ್ಸಾಂ ಮೂಲದವರಾಗಿದ್ದು, ದಾಯಾದಿ ಸಂಬಂಧಿಗಳು. ಜಮೀನು ಮತ್ತು ಹಣಕಾಸಿನ ವಿಚಾರವಾಗಿ ಇವರು ಮೊದಲಿನಿಂದಲೂ ವೈಷಮ್ಯ ಹೊಂದಿದ್ದರು. ಅಷ್ಟೇ ಅಲ್ಲದೆ, ಜಲಾಲುದ್ದೀನ್​​ ತಂಗಿಯ ಮದುವೆಯನ್ನು ಅಲ್ಲಾವುದ್ದೀನ್ ಮುರಿದಿದ್ದ ಎಂಬ ಆರೋಪವು ಸಹ ಇದೆ. ಹುಡುಗ ಸರಿಯಿಲ್ಲ ಎಂದು ಹುಡುಗಿ ಮನೆಯವರಿಗೆ ಹೇಳಿ ಮದುವೆ ನಿಲ್ಲಿಸಿದ್ದ. ಈ ದ್ವೇಷದ ಕಿಚ್ಚಿನಿಂದಲೇ ಅಲ್ಲಾವುದ್ದೀನ್‌ನನ್ನು ಮುಗಿಸಲು ಆರೋಪಿ ಸ್ಕೆಚ್ ಹಾಕಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ ಸೀಮಂತ್​ಕುಮಾರ್​ 

ಈ ಕುರಿತಾಗಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್​ಕುಮಾರ್​ ಪ್ರತಿಕ್ರಿಯಿಸಿದ್ದು, ‘ದಸರಾ ಹಿಂದಿನ ದಿನ ರಾತ್ರಿ ಈ ಘಟನೆ ನಡೆದಿತ್ತು. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗಿತ್ತು. ಪ್ರಕರಣದ ತನಿಖೆಗೆ 10ಕ್ಕೂ ಹೆಚ್ಚು ಪೊಲೀಸ್ ತಂಡ ರಚಿಸಲಾಗಿತ್ತು. ರಾಯಚೂರು, ಅಸ್ಸಾಂ ಪೊಲೀಸರು ತನಿಖಾ ಕೆಲಸ ಮಾಡಿದ್ದಾರೆ. ಪ್ರಕರಣ ಸಂಬಂಧ 1500 ಸಿಸಿಟಿವಿಗಳ ಪರಿಶೀಲನೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಜನರ ವಿಚಾರಣೆ ಸಹ ಮಾಡಲಾಗಿದೆ. ಇದು ವೈಯಕ್ತಿಕ ಕಾರಣಕ್ಕೆ ಬ್ಲಾಸ್ಟ್ ಮಾಡಿರುವುದು ಪತ್ತೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಬ್ಲಾಸ್ಟ್ ಕೇಸ್: ಮಹತ್ವದ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ!

‘ಸೆಕ್ಯೂರಿಟಿ ಗಾರ್ಡ್ ಟಾರ್ಗೆಟ್ ಮಾಡಿ ಸ್ಫೋಟಿಸುವ ಪ್ಲ್ಯಾನ್​ ಇತ್ತು. ಆದರೆ ಸೆಕ್ಯೂರಿಟಿ ಜೊತೆಗಿದ್ದ ಸೂರಜ್​ ಎಂಬಾತ ಬಾಕ್ಸ್ ಓಪನ್ ಮಾಡಿದ್ದ. ಆತನಿಗೆ ಹೆಚ್ಚಿನ ಗಾಯವಾಗಿದೆ. ಆರೋಪಿಗಳು ತಮ್ಮ ಮೊಬೈಲ್​ ಹಾಳಾಗಿದೆ ಎಂದು ಹೇಳಿ ಸಾರ್ವಜನಿಕರ ಮೊಬೈಲ್​ಗಳನ್ನು ಪಡೆದು ಬಳಸಿದ್ದಾರೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಿಗೆ ಮೊಬೈಲ್ ನೀಡುವ ಮೊದಲು ಎಚ್ಚರಿಕೆ ಇರಲಿ’ ಎಂದು ಕಮಿಷನರ್ ಕಿವಿ ಮಾತು ಹೇಳಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಗಲಾಟೆ

‘ಅಸ್ಸಾಂ ರಾಜ್ಯದ ಒಂದೇ ಊರಿನವರ ಜಗಳಕ್ಕೆ ಈ ಕೃತ್ಯ ಎಸಗಿದ್ದಾರೆ. ಹಣಕಾಸು ವ್ಯವಹಾರ ಹಾಗೂ ವೈಯಕ್ತಿಕ ವಿಚಾರಕ್ಕೆ ಗಲಾಟೆ ಇತ್ತು. ಆ ಕಾರಣಕ್ಕೆ ಪ್ಲ್ಯಾನ್​ ಮಾಡಿ ಈ ಕೆಲಸ ಮಾಡಿದ್ದಾರೆ. ತನಿಖಾ ತಂಡಕ್ಕೆ 3 ಲಕ್ಷ ರೂ ಬಹುಮಾನ ನೀಡಲಾಗುವುದು. ಆರೋಪಿಗಳು ಹೇಗೆ ಬಾಂಬ್ ತಯಾರು ಮಾಡಿದರು, ಖರೀದಿ ಮಾಡಿರುವ ಸ್ಥಳಕ್ಕೂ ಹೋಗಿ ಪರಿಶೀಲನೆ ಮಾಡಲಾಗಿದೆ. ಇಂಟರ್​ನೆಟ್​ ಮೂಲಕ ಆರೋಪಿ ಬಾಂಬ್​ ತಯಾರಿಸಿದ್ದಾನೆ. ಆರೋಪಿ 8ನೇ ತರಗತಿಯ ತನಕ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾನೆ. ಆದರೆ ಇಂಟರ್​ನೆಟ್​, ಎಐ, ಮೊಬೈಲ್​ ಬಳಕೆ ತಿಳಿದುಕೊಂಡಿದ್ದಾರೆ’ ಎಂದು ಅವರು ಸ್ಫೋಟಕ ಮಾಹಿತಿ ನೀಡಿದರು.

ಬಸ್​ನಲ್ಲಿ ಬಾಂಬ್​​ ಸಾಗಿದ್ದ ಆರೋಪಿಗಳು 

ಬುರ್ಹಾನ್ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬಾಂಬ್ ತಯಾರು ಮಾಡಿದ್ದ. ಬಳಿಕ ಸೈದುಲಾ ಇಸ್ಲಾಂ, ಜಲಾಲುದ್ದೀನ್​ ಮೂಲಕ ಬಾಂಬ್​ ಕೊಡಿಸಿದ್ದ. ಫ್ಯೂಸ್ ಅಳವಡಿಸದೆ ಮಸ್ಕಿಯಿಂದ ಬೆಂಗಳೂರಿಗೆ ಬಸ್​ ಮೂಲಕ ಬಾಂಬ್​ ತಂದಿದ್ದ. ಬಳಿಕ ಫ್ಯೂಸ್​ ಅಳವಡಿಸಿ ಬಾಂಬ್​ನ್ನು ಅಲ್ಲಾವುದ್ದೀನ್​ಗೆ ನೀಡಿದ್ದ. ಆದರೆ ಅಲ್ಲಾವುದ್ದೀನ್​ಗೆ ನೀಡಿದ್ದ ಬಾಕ್ಸ್​ ಅನ್ನು ಸೂರಜ್​ ಓಪನ್​​ ಮಾಡಿದ್ದ. ಸೂರಜ್ ಬಾಕ್ಸ್ ತೆರೆದು ಸ್ವಿಚ್​ ಆನ್ ಮಾಡಿದಾಗ ತಕ್ಷಣ ಬ್ಲಾಸ್ಟ್​ ಆಗಿದೆ.

ಎಐ ಮೂಲಕ ಬಾಂಬ್​ ತಯಾರಿಸುವುದು ಕಲಿತಿದ್ದ ಜಲಾಲುದ್ದೀನ್

ಇನ್ನು ಕೃತ್ಯವೆಸಗಿರುವ ಜಲಾಲುದ್ದೀನ್​ ಅಲಿಯಾಸ್​ ಜಾಹಿದ್​ವುಲ್ ಹುಸೇನ್​ ಎಲೆಕ್ಟ್ರಿಕಲ್ ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಆತನಿಗೆ ಸರ್ಕ್ಯೂಟ್ ಮತ್ತು ಬಾಂಬ್ ತಯಾರಿಸುವ ಮಾಹಿತಿ ಇತ್ತು. ಎಐ ಮೂಲಕ ಬಾಂಬ್​ ತಯಾರಿಸುವುದನ್ನು ಕಲಿತುಕೊಂಡಿದ್ದ. ಬಾಂಬ್​ನಲ್ಲಿ ಸರ್ಕ್ಯೂಟ್, ಪ್ಯೂಸ್, ಸ್ಫೋಟಕ ವಸ್ತು ಇಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:06 pm, Sun, 25 October 26

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು