AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಭಾರಿ ವಾಹನಗಳಿಗೆ ಹೊಸ ರೂಲ್ಸ್; ನಗರದ ಮೂಲಕ ಹಾದುಹೋಗುವ ಹೊರಜಿಲ್ಲೆಗಳ ಟ್ಯಾಂಕರ್‌ಗಳಿಗೆ ನಿರ್ಬಂಧ!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಹೊಸ ನಿಯಮ ಜಾರಿಗೊಳಿಸಿದ್ದಾರೆ. ದೇವರಗುಂದಿಯಿಂದ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ತೆರಳುವ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಟ್ಯಾಂಕರ್‌ಗಳ ನಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂತಹ ವಾಹನಗಳು ಇನ್ನು ಮುಂದೆ ನೈಸ್ ರಸ್ತೆ ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಮೂಲಕ ಸಂಚರಿಸಬೇಕು. ಆದರೆ, ನಗರದ ಪೆಟ್ರೋಲ್ ಬಂಕ್‌ಗಳಿಗೆ ಇಂಧನ ಪೂರೈಸುವ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಬೆಂಗಳೂರಿನಲ್ಲಿ ಭಾರಿ ವಾಹನಗಳಿಗೆ ಹೊಸ ರೂಲ್ಸ್; ನಗರದ ಮೂಲಕ ಹಾದುಹೋಗುವ ಹೊರಜಿಲ್ಲೆಗಳ ಟ್ಯಾಂಕರ್‌ಗಳಿಗೆ ನಿರ್ಬಂಧ!
ಸಾಂದರ್ಭಿಕ ಚಿತ್ರImage Credit source: IndiaMart
ಕಿರಣ್​ ಸೂರ್ಯ
| Edited By: |

Updated on: Nov 03, 2026 | 7:46 AM

Share

ಮುಖ್ಯಾಂಶಗಳು

  • ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಸಂಚಾರ ಪೊಲೀಸರಿಂದ ಹೊಸ ನಿಯಮ ಜಾರಿ.
  • ನಗರದ ಪ್ರವೇಶ ರದ್ದು; ನೈಸ್, ಎಸ್‌ಟಿಆರ್‌ಆರ್ ರಸ್ತೆ ಬಳಕೆಗೆ ಸೂಚನೆ.
  • ದೇವರಗುಂದಿಯಿಂದ ಹೊರಜಿಲ್ಲೆಗೆ ತೆರಳುವ ಸಾವಿರಕ್ಕೂ ಹೆಚ್ಚು ಟ್ಯಾಂಕರ್‌ಗಳಿಗೆ ನಿರ್ಬಂಧ.

ಬೆಂಗಳೂರು, ನವೆಂಬರ್ 3: ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಅದರಲ್ಲೂ ಬೆಂಗಳೂರು ಮೂಲಕ ಬೇರೆ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಸಂಚರಿಸುವ ಭಾರಿ ವಾಹನಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಾಗಿಸುವ ಟ್ಯಾಂಕರ್‌ಗಳ ಸಂಚಾರಕ್ಕೆ ಹೊಸ ನಿಯಮ ಜಾರಿಗೊಳಿಸಿದ್ದು, ನಗರದ ಮೂಲಕ ಹಾದುಹೋಗುವ ಹೊರಜಿಲ್ಲೆಗಳ ಟ್ಯಾಂಕರ್‌ಗಳಿಗೆ ನಿರ್ಬಂಧ ವಿಧಿಸಲಾಗಿದೆ.

ದೇವರಗುಂದಿಯಿಂದ ಪ್ರತಿದಿನ 1,000 ಟ್ಯಾಂಕರ್‌ಗಳ ಸಂಚಾರ!

2014ರಲ್ಲೇ ಬೆಂಗಳೂರಿನಲ್ಲಿ ಬೆಳಗಿನ ವೇಳೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯಂತಹ ಅಗತ್ಯ ಸೇವೆಗಳ ವಾಹನಗಳಿಗೆ ದಿನದ 24 ಗಂಟೆಯೂ ಸಂಚರಿಸಲು ವಿನಾಯಿತಿ ನೀಡಲಾಗಿತ್ತು. ಇದೀಗ ಈ ವಿನಾಯಿತಿಯನ್ನೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದಾಗ, ನಗರದ ಮೂಲಕ ಪ್ರತಿದಿನ ನೂರಾರು ಟ್ಯಾಂಕರ್‌ಗಳು ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ. ಹೊಸಕೋಟೆ ತಾಲೂಕಿನ ದೇವರಗುಂದಿಯಿಂದ ಪ್ರತಿದಿನ ಸುಮಾರು 800ರಿಂದ 1,000 ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಟ್ಯಾಂಕರ್‌ಗಳು ವಿವಿಧ ಜಿಲ್ಲೆಗಳಿಗೆ ತೆರಳುತ್ತಿವೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಹೊರಜಿಲ್ಲೆಗಳಿಗೆ ತೆರಳುವ ಇಂತಹ ಟ್ಯಾಂಕರ್‌ಗಳಿಗೆ ನಗರದ ಪ್ರವೇಶ ನಿರ್ಬಂಧಿಸಲಾಗಿದೆ.

ನೈಸ್ ರಸ್ತೆ, ರಿಂಗ್ ರೋಡ್ ಮೂಲಕ ಸಂಚಾರಕ್ಕೆ ಸೂಚನೆ

ಹೊಸ ನಿಯಮದ ಪ್ರಕಾರ, ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳು ಹಾಗೂ ಗ್ಯಾಸ್ ವಿತರಣಾ ಕೇಂದ್ರಗಳಿಗೆ ಇಂಧನ ಪೂರೈಸುವ ಟ್ಯಾಂಕರ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಬೇರೆ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಗೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಪೂರೈಸುವ ಟ್ಯಾಂಕರ್‌ಗಳು ಇನ್ನು ಮುಂದೆ ನಗರದೊಳಗೆ ಪ್ರವೇಶಿಸುವಂತಿಲ್ಲ. ಅಂತಹ ವಾಹನಗಳು NICE ರಸ್ತೆ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಮೂಲಕ ತಮ್ಮ ಗಮ್ಯಸ್ಥಾನ ತಲುಪುವಂತೆ ಸೂಚಿಸಲಾಗಿದೆ.

ಈ ಕ್ರಮದಿಂದ ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಭಾರಿ ವಾಹನಗಳ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಸುಗಮವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಹೊರಜಿಲ್ಲೆಗಳ ಟ್ಯಾಂಕರ್‌ಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸುವ ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಹೊಸ ನಿಯಮ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಇಂದು ಈ ರಾಶಿಯವರು ಅಗೋಚರ ಶತ್ರುಗಳ ಬಗ್ಗೆ ಜಾಗೃತೆವಹಿಸಿ!
ಇಂದು ಈ ರಾಶಿಯವರು ಅಗೋಚರ ಶತ್ರುಗಳ ಬಗ್ಗೆ ಜಾಗೃತೆವಹಿಸಿ!
ಶೀಘ್ರವೇ ರಾಜ್ಯದ ಜನತೆಗೆ ಬಸ್ ದರ ಏರಿಕೆ ಬಿಸಿ
ಶೀಘ್ರವೇ ರಾಜ್ಯದ ಜನತೆಗೆ ಬಸ್ ದರ ಏರಿಕೆ ಬಿಸಿ
ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾತ್ರಿಕರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾತ್ರಿಕರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ, ಮೊಸರಿನ ದರ ಇಳಿಕೆ
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ, ಮೊಸರಿನ ದರ ಇಳಿಕೆ
ರಾಜ್ಯದ ಬೆಲೆ ಏರಿಕೆ, ಆರ್ಥಿಕ ನಿರ್ಧಾರಗಳ ಬಗ್ಗೆ ಡಿಕೆಶಿ ಹೇಳಿದ್ದೇನು?
ರಾಜ್ಯದ ಬೆಲೆ ಏರಿಕೆ, ಆರ್ಥಿಕ ನಿರ್ಧಾರಗಳ ಬಗ್ಗೆ ಡಿಕೆಶಿ ಹೇಳಿದ್ದೇನು?
ಖಾಸಗಿ ಕೆಲಸ ಬಿಟ್ಟು ಬಂದ ಶಿಕ್ಷಕರಿಗೆ 15 ತಿಂಗಳಿಂದ ಸಂಬಳ ನೀಡದ ಸರ್ಕಾರ
ಖಾಸಗಿ ಕೆಲಸ ಬಿಟ್ಟು ಬಂದ ಶಿಕ್ಷಕರಿಗೆ 15 ತಿಂಗಳಿಂದ ಸಂಬಳ ನೀಡದ ಸರ್ಕಾರ
ಹೈದರಾಬಾದ್​ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಜೂಪಲ್ಲಿ ರಾಮೇಶ್ವರ ರಾವ್
ಹೈದರಾಬಾದ್​ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಜೂಪಲ್ಲಿ ರಾಮೇಶ್ವರ ರಾವ್
ಹಾಸನಾಂಬೆ ದರ್ಶನ 4ನೇ ದಿನ: ಭಕ್ತರ ದರ್ಶನ, ಆದಾಯದಲ್ಲೂ ದಾಖಲೆ!
ಹಾಸನಾಂಬೆ ದರ್ಶನ 4ನೇ ದಿನ: ಭಕ್ತರ ದರ್ಶನ, ಆದಾಯದಲ್ಲೂ ದಾಖಲೆ!
ಹಾಲು, ಮೊಸರು ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಹಾಲು, ಮೊಸರು ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ