ವಂಚಕ ಯುವರಾಜ್ ಆಪ್ತ ಗುರುದೇವ್​ ಸಿಸಿಬಿ ವಿಚಾರಣೆಗೆ ಹಾಜರ್​

ಗುರುದೇವ್, ವಂಚಕ ಯುವರಾಜ್​ನ ಆಪ್ತ. ಜೊತೆಗೆ ಅವನ ಹಲವು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇವರಿಬ್ಬರು ಸೇರಿಕೊಂಡು ಹಲವು ಮಂದಿಗೆ ವಂಚನೆ ಮಾಡಿದ್ದಾರೆ. ದೆಹಲಿಯ ಹಲವು ನಾಯಕರ ಪರಿಚಯ ಇದೆ ಎಂದು ರಾಜಕೀಯ ವ್ಯಕ್ತಿಗಳ ಹೆಸರು ಬಳಸಿ ಜನರಿಗೆ ಮೋಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುದೇವ್ ವಿಚಾರಣೆಗೆ ಸಿಸಿಬಿ ಬುಲಾವ್.

  • TV9 Web Team
  • Published On - 12:42 PM, 22 Jan 2021
ವಂಚಕ ಯುವರಾಜ್ ಆಪ್ತ ಗುರುದೇವ್​ ಸಿಸಿಬಿ ವಿಚಾರಣೆಗೆ ಹಾಜರ್​
ಕೇಂದ್ರ ಅಪರಾಧ ವಿಭಾಗ

ಬೆಂಗಳೂರು: ಸಿಸಿಬಿ ಕಸ್ಟಡಿಯಲ್ಲಿರುವ ವಂಚಕ ಯುವರಾಜ್ ಆಪ್ತ ಗುರುದೇವ್​ಗೆ ಸಿಸಿಬಿ ತನಿಖೆಗೆ ಕರೆದಿದೆ. ನೋಟಿಸ್ ಹಿನ್ನೆಲೆಯಲ್ಲಿ ಮಡಿವಾಳದ ಇಂಟರಾಗೇಷನ್ ಸೆಲ್​ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಗುರುದೇವ್, ವಂಚಕ ಯುವರಾಜ್​ನ ಆಪ್ತ. ಜೊತೆಗೆ ಅವನ ಹಲವು ವಂಚನೆ ಪ್ರಕರಣದಲ್ಲಿ ಭಾಗಿ ಎನ್ನಲಾಗಿದೆ. ಇವರಿಬ್ಬರೂ ಸೇರಿಕೊಂಡು ಹಲವು ಮಂದಿಗೆ ವಂಚನೆ ಮಾಡಿದ್ದಾರೆ. ದೆಹಲಿಯ ಹಲವು ನಾಯಕರ ಪರಿಚಯ ಇದೆ ಎಂದು ರಾಜಕೀಯ ವ್ಯಕ್ತಿಗಳ ಹೆಸರು ಬಳಸಿ ಜನರಿಗೆ ಮೋಸ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುದೇವ್ ವಿಚಾರಣೆಗೆ ಸಿಸಿಬಿ ಬುಲಾವ್ ಕೊಟ್ಟಿದೆ. ನಿನ್ನೆ ಸಿಸಿಬಿ ಎಸಿಪಿ ಎನ್. ಹನುಮಂತರಾಯ ಅವರು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಗುರುದೇವ್ ವಿಚಾರಣೆಗೆ ಹಾಜರಾಗಿದ್ದಾರೆ.

ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ