AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವೈರ್ ಕಟ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಚ್ಚರಿಯ ಕಾರಣ ಬಹಿರಂಗ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಣ ಏಪ್ರಿಲ್ 24 ರ ಪಂದ್ಯದ ವೇಳೆ ಸಿಸಿಟಿವಿ ಕೇಬಲ್ ಕಟ್ ಮಾಡಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರೋಪಿಗಳು ಆ ಕೃತ್ಯ ಎಸಗಲು ಕಾರಣ ಏನೆಂಬುದೂ ಪತ್ತೆಯಾಗಿದೆ. ಹಾಗಾದರೆ, ಭಾರಿ ಭದ್ರತಾ ಲೋಪ ಉಂಟಾಗಲು ಕಾರಣ ಏನು? ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದ್ದೇನು? ಇಲ್ಲಿದೆ ವಿವರ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವೈರ್ ಕಟ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಚ್ಚರಿಯ ಕಾರಣ ಬಹಿರಂಗ
ಸಾಂದರ್ಭಿಕ ಚಿತ್ರ (ಎಐ)Image Credit source: Google Gemini
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Apr 27, 2026 | 11:38 AM

Share

ಬೆಂಗಳೂರು, ಏಪ್ರಿಲ್ 27: ಆರ್​ಸಿಬಿ (RCB) ಹಾಗೂ ಗುಜರಾತ್ ಟೈಟನ್ಸ್ (RCB vs GT) ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಕೇಬಲ್ ಕಟ್ ಆಗಿರುವುದು ಪೊಲೀಸರಲ್ಲಿ ದೊಡ್ಡ ಆತಂಕ ಮೂಡಿಸಿತ್ತು. ಇದು ಯಾವುದೋ ವಿಧ್ವಂಸಕ ಕೃತ್ಯವಿರಬಹುದು ಎಂಬ ಅನುಮಾನದಲ್ಲಿ ತನಿಖೆ ಕೈಗೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ಈಗ ತೀರಾ ವೈಯಕ್ತಿಕ ಮತ್ತು ವಿಚಿತ್ರ ಕಾರಣವೊಂದು ತಿಳಿದುಬಂದಿದೆ.

ಸಂಬಳಕ್ಕಾಗಿ ಸಿಸಿಟಿವಿ ಕಟ್!

ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ನಿರ್ವಹಣೆಯ ಹೊಣೆಯನ್ನು ‘IVS ಡಿಜಿಟಲ್ ಸೊಲ್ಯೂಷನ್’ ಎಂಬ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಅಬ್ದುಲ್ ಕಲಾಂ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ. ಆರೋಪಿಗಳಿಬ್ಬರಿಗೂ ಕಂಪನಿಯಿಂದ ಬರಬೇಕಿದ್ದ ಸಂಬಳ ಬಾಕಿ ಇತ್ತು. ಎಷ್ಟು ಕೇಳಿದರೂ ಕಂಪನಿ ಸಂಬಳ ನೀಡದಿದ್ದಕ್ಕೆ ಕೋಪಗೊಂಡಿದ್ದ ಈ ಸಿಬ್ಬಂದಿಗಳು, ಸಂಸ್ಥೆಗೆ ಮತ್ತು ಪೊಲೀಸರಿಗೆ ಪಾಠ ಕಲಿಸಲು ನಿರ್ಧರಿಸಿ ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ್ದರು!

ಯಾರಿಗೂ ತಿಳಿಯದಂತೆ ಕೃತ್ಯ

ಪಂದ್ಯದ ವೇಳೆ ಭದ್ರತೆ ಎಷ್ಟು ಮುಖ್ಯವೋ ಈ ಆರೋಪಿಗಳಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ, ಯಾರಿಗೂ ಅನುಮಾನ ಬಾರದಂತೆ ಹೋಗಿ ಪ್ರಮುಖ ಕೇಬಲ್‌ಗಳನ್ನೇ ಕಟ್ ಮಾಡಿದ್ದರು. ಪಂದ್ಯದ ಸಂಜೆಯ ಹೊತ್ತಿಗೆ ಸಿಸಿಟಿವಿ ಫೀಡ್ ಸ್ಥಗಿತಗೊಂಡಾಗ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಂಗಾಲಾಗಿದ್ದರು. ಸಿಸಿಟಿವಿ ನಿಯಂತ್ರಣ ಕೊಠಡಿಯಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದಾಗ ಕೇಬಲ್ ಕಟ್ ಆಗಿರುವುದು ಪತ್ತೆಯಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಂತ್ರಿಕ ಆಧಾರದ ಮೇಲೆ ಮಂಜುನಾಥ್ ಮತ್ತು ಅಬ್ದುಲ್ ಕಲಾಂನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ vs ಜಿಟಿ ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ: ಕಂಗೆಟ್ಟು ಕುಳಿತಿದ್ದ ಪೊಲೀಸರು!

ಪಂದ್ಯದ ದಿನವೇ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಬಗ್ಗೆ ಭಾರಿ ಆತಂಕ ವ್ಯಕ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ಮಾಡಿದ್ದರು. ಭದ್ರತಾ ಲೋಪದ ನಡುವೆಯೂ ಪೊಲೀಸರು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ