AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧವನ್ನು ಬಾಂಬ್​ನಿಂದ ಉಡಾಯಿಸಿದಂತೆ ಎಐ ವೀಡಿಯೋ ಸೃಷ್ಟಿಸಿದ ಯುವಕ! ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಬೆಂಗಳೂರಿನ ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದಂತೆ ಎಐ (AI) ತಂತ್ರಜ್ಞಾನ ಬಳಸಿ ಎಡಿಟ್ ಮಾಡಿದ ನಕಲಿ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'Jnx king Hg' ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ಯುವಕ ತನ್ನನ್ನು ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದು, ಹಬ್ಬದ ದಿನಗಳಲ್ಲಿ ಆತಂಕ ಸೃಷ್ಟಿಸಿದ ಕಿಡಿಗೇಡಿಯ ವಿರುದ್ಧ ಕಾನೂನು ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧವನ್ನು ಬಾಂಬ್​ನಿಂದ ಉಡಾಯಿಸಿದಂತೆ ಎಐ ವೀಡಿಯೋ ಸೃಷ್ಟಿಸಿದ ಯುವಕ! ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
ವಿಧಾನಸೌಧವನ್ನು ಬಾಂಬ್​ ಹಾಕಿ ಉಡಾಯಿಸಿದಂತೆ ಎಐ ವೀಡಿಯೋ ಸೃಷ್ಟಿಸಿದ ಯುವಕ!
ವಿಕಾಸ್​ ಬಿಎಂ
| Edited By: |

Updated on:Oct 20, 2026 | 10:28 AM

Share

ಮುಖ್ಯಾಂಶಗಳು

  • ಎಐ ಬಳಸಿ ವಿಧಾನಸೌಧ ಉಡಾಯಿಸಿದಂತೆ ನಕಲಿ ವಿಡಿಯೋ ಹಂಚಿಕೊಂಡ ಯುವಕ.
  • 'Jnx king Hg' ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ಭಯೋತ್ಪಾದಕನಂತೆ ಪ್ರದರ್ಶನ.
  • ದಸರಾ ವೇಳೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಕಿಡಿಗೇಡಿಯ ವಿರುದ್ಧ ಆಕ್ರೋಶ.

ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನ ವಿಧಾನಸೌಧವನ್ನು ಬಾಂಬ್ ಇಟ್ಟು ಉಡಾಯಿಸಿದಂತೆ ಕೃತಕ ಬುದ್ಧಿಮತ್ತೆ ಬಳಸಿ ಎಡಿಟ್ ಮಾಡಿದ ವೀಡಿಯೊವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಇನ್ಸ್ಟಾಗ್ರಾಮ್​ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡಿಯೊದಲ್ಲಿ ಕಿಡಿಗೇಡಿ ಯುವಕ ತನ್ನನ್ನು ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದು, ದಸರಾ ವೇಳೆ ಆತಂಕ ಸೃಷ್ಟಿಸಲು ಯತ್ನಿಸಿದ್ದಾನೆ.

ಭಯೋತ್ಪಾದಕನಂತೆ ಬಿಂಬಿಸಿಕೊಂಡ ಯುವಕ

‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಅತ್ಯಂತ ನೈಜವಾಗಿ ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, “ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ” ಎಂಬ ಶೀರ್ಷಿಕೆಯನ್ನೂ ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಾನೊಬ್ಬ ಭಯೋತ್ಪಾದಕ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದಾನೆ.

ಯುವಕನ ಪೋಸ್ಟ್ ಇಲ್ಲಿದೆ

ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ ಹಲವರು

ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಈ ರೀತಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸುವ ವಿಡಿಯೋ ಹಂಚಿಕೊಂಡಿರುವ ಕಿಡಿಗೇಡಿಯ ಉದ್ದೇಶವೇನು ಎಂಬ ಬಗ್ಗೆ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಅತ್ಯುನ್ನತ ಭದ್ರತಾ ವಲಯವಾದ ವಿಧಾನಸೌಧಕ್ಕೆ ಈ ರೀತಿ ಬೆದರಿಕೆ ಒಡ್ಡುವ ವಿಡಿಯೋ ಪ್ರಸಾರ ಮಾಡಿರುವ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆತ ಪೋಸ್ಟ್ ಮಾಡಿರುವ ವೀಡಿಯೋಗೆ ಹಲವು ಕಾಮೆಂಟ್​ಗಳು ಬಂದಿವೆ. ಅವುಗಳಲ್ಲಿ ಹಲವರು ಬೆಂಗಳೂರು ಪೊಲೀಸರ ಇನ್ಸ್ಟಾಗ್ರಾಮ್​ ಐಡಿಯನ್ನು ಟ್ಯಾಗ್ ಮಾಡಿ ಈತನ ಮೇಲೆ ಕ್ರಮ ಕೈಗೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Tue, 20 October 26

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 5 ಕೆಜಿ ಡ್ರಗ್ಸ್ ವಶ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 5 ಕೆಜಿ ಡ್ರಗ್ಸ್ ವಶ
ಇಂದು ಈ ರಾಶಿಯವರಿಗೆ ಹಳೆಯ ಸ್ನೇಹಿತರ ಭೇಟಿಯ ಅವಕಾಶ
ಇಂದು ಈ ರಾಶಿಯವರಿಗೆ ಹಳೆಯ ಸ್ನೇಹಿತರ ಭೇಟಿಯ ಅವಕಾಶ
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ