AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ತವ್ಯದ ನಡುವೆಯೂ ಪೊಲೀಸರ ಮಾನವೀಯ ಕಾರ್ಯ: ತಾಯಿ-ಶಿಶುವಿನ ಆರೈಕೆ ಮಾಡಿ ಬಾಂಗ್ಲಾ ಮಹಿಳೆ ಗಡೀಪಾರು

ಬೆಂಗಳೂರಿನಲ್ಲಿ ಆಪರೇಷನ್ ಮುಕ್ತ ಕಾರ್ಯಾಚರಣೆಯಡಿ ವಶಕ್ಕೆ ಪಡೆಯಲಾಗಿದ್ದ ಬಾಂಗ್ಲಾದೇಶ ಮೂಲದ ಗರ್ಭಿಣಿಯ ಸುಸೂತ್ರ ಹೆರಿಗೆ ಹಾಗೂ ನವಜಾತ ಶಿಶುವಿನ ಆರೈಕೆ ಮಾಡಿ, ಪೊಲೀಸರು ಮಾನವೀಯತೆಯೊಂದಿಗೆ ಅವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದ್ದಾರೆ. ಬಂಧಿತ ವಲಸಿಗರ ಪ್ರಕರಣವನ್ನು ನಿರ್ವಹಿಸುತ್ತಿದ್ದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮತ್ತು ಸ್ವತಃ ಆರು ತಿಂಗಳ ಗರ್ಭಿಣಿಯಾಗಿರುವ ಮಹಿಳಾ ಅಧಿಕಾರಿಯೇ ತಾಯಿ-ಶಿಶುವಿನ ಆರೈಕೆಯ ಹೊಣೆ ಹೊತ್ತಿದ್ದು ವಿಶೇಷ.

ಕರ್ತವ್ಯದ ನಡುವೆಯೂ ಪೊಲೀಸರ ಮಾನವೀಯ ಕಾರ್ಯ: ತಾಯಿ-ಶಿಶುವಿನ ಆರೈಕೆ ಮಾಡಿ ಬಾಂಗ್ಲಾ ಮಹಿಳೆ ಗಡೀಪಾರು
ಕರ್ತವ್ಯದ ನಡುವೆಯೂ ಪೊಲೀಸರ ಮಾನವೀಯ ಕಾರ್ಯImage Credit source: Indian Express
ಪ್ರಸನ್ನ ಹೆಗಡೆ
|

Updated on:Sep 04, 2026 | 4:44 PM

Share

ಬೆಂಗಳೂರು, ಸೆಪ್ಟೆಂಬರ್​​ 04: ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿದ್ದ ಬಾಂಗ್ಲಾದೇಶದ 22 ವರ್ಷದ ಗರ್ಭಿಣಿ ಮಹಿಳೆಗೆ ಸುಸೂತ್ರ ಹೆರಿಗೆಗೆ ಅಗತ್ಯ ವ್ಯವಸ್ಥೆ ಜೊತೆಗೆ, ಗಡಿಪಾರು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಕೆಯ ನವಜಾತ ಹೆಣ್ಣು ಮಗುವಿನ ಆರೈಕೆಯನ್ನೂ ಮಾಡಿರುವ ಘಟನೆ ನಡೆದಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವರು ಅಕ್ರಮವಾಗಿ ವಾಸಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆ ರಬಿಬುಲ್ ಬಾದ್ಶಾ ಅವರ ಪತ್ನಿಯಾಗಿರುವ ಖತೂನ್ ಅವರನ್ನು ಜುಲೈ 17ರಂದು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲಾಗಿದ್ದು, ಅದರ ನಿರ್ದೇಶನದಂತೆ ಬಂಧನ ಕೇಂದ್ರದ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿತ್ತು.

ಇನ್ನು ಪ್ರಕರಣ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ವೈದ್ಯಕೀಯ ತಪಾಸಣೆಗಳಿಗೆ ಆಕೆಯೊಂದಿಗೆ ತೆರಳಿ, ಅಗತ್ಯ ವಸ್ತುಗಳನ್ನು ವ್ಯವಸ್ಥೆ ಮಾಡುತ್ತಿದ್ದರು. ಪ್ರಸವಪೂರ್ವ ಆರೈಕೆಯೂ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುತ್ತಿದ್ದರು. ಒಂದು ತಿಂಗಳಿಗೂ ಸ್ವಲ್ಪ ಹೆಚ್ಚು ಸಮಯದ ಬಳಿಕ, ಆಗಸ್ಟ್ 24ರಂದು ಖತೂನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಮ್ಮ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದಾಗಿ, ನಾಲ್ಕು ವರ್ಷದ ಮಗಳೊಂದಿಗೆ ಖತೂನ್ ಅವರನ್ನು ಗಡಿಪಾರು ಮಾಡುವ ಜವಾಬ್ದಾರಿಯ ಜೊತೆಗೆ, ನವಜಾತ ಶಿಶುವಿನ ಆರೈಕೆಯ ಜವಾಬ್ದಾರಿಯೂ ಪೊಲೀಸರ ಮೇಲಿತ್ತು.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಜೈಲು ಬಂಧಿಗಳ ಪುಂಡಾಟ: ವಾರ್ಡರ್​​ ಕೊಲೆಗೆ ಯತ್ನ

ಗರ್ಭಿಣಿ ಪೊಲೀಸ್ ಅಧಿಕಾರಿಯಿಂದ ಆರೈಕೆ

ಬಂಧಿತ ವಲಸಿಗರ ಪ್ರಕರಣವನ್ನು ನಿರ್ವಹಿಸುತ್ತಿದ್ದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮತ್ತು ಸ್ವತಃ ಆರು ತಿಂಗಳ ಗರ್ಭಿಣಿಯಾಗಿರುವ ಕಲಾವತಿ ಅವರಿಗೆ ಖತೂನ್ ಅಗತ್ಯ ಆರೈಕೆ ಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಖತೂನ್ ಅವರನ್ನು ಬಂಧನ ಕೇಂದ್ರದ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿ ಸರದಿಯಂತೆ ಆಕೆಯ ಆರೈಕೆ ಮಾಡುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಮಹಿಳೆ ಮತ್ತು ಮಗುವನ್ನು ಮತ್ತೆ ಕೇಂದ್ರಕ್ಕೆ ಕರೆತರಲಾಗಿತ್ತು. FRRO ಗಡಿಪಾರು ಆದೇಶ ಜಾರಿಯಾಗುವವರೆಗೆ ಪೊಲೀಸ್ ಸಿಬ್ಬಂದಿ ವ್ಯವಸ್ಥೆಗಳ ಮೇಲೆ ನಿಗಾ ಮುಂದುವರಿಸಿದ್ದರು.

ಅಂತಿಮವಾಗಿ ಅವರನ್ನು ಪಶ್ಚಿಮ ಬಂಗಾಳದ ಮಾಲ್ಡಾಗೆ ಕರೆದೊಯ್ದು, ಅಲ್ಲಿಂದ ಬಾಂಗ್ಲಾದೇಶಕ್ಕೆ ಕಳುಹಿಸಬೇಕಾಗಿದ್ದ ಹಿನ್ನೆಲೆ ಆಗಸ್ಟ್ 30ರಂದು ಅವರನ್ನು ರೈಲಿನ ಮೂಲಕ ಕರದೊಯ್ಯಲಾಗಿತ್ತು. ಮಗು ಕೇವಲ ಒಂಬತ್ತು ದಿನಗಳಾಗಿದ್ದರಿಂದ, ತಾಯಿ ಮತ್ತು ಮಗುವನ್ನು ಕರೆದೊಯ್ಯಲು ಹೆಚ್ಚುವರಿ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ತಾಯಿ ಮತ್ತು ಮಗು ಸುರಕ್ಷಿತವಾಗಿ ಮಾಲ್ಡಾ ತಲುಪಿದ್ದು, ಬಳಿಕ ಅವರನ್ನು ಪಶ್ಚಿಮ ಬಂಗಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:40 pm, Fri, 4 September 26

Follow Us
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ