ಪುರಾತನ ಜಲಮಾರ್ಗ ಪುನರುಜ್ಜೀವನಕ್ಕೆ ಮುಂದಾದ ಸರ್ಕಾರ: ಬೀದರ್​ ಕರೇಜ್ ಸಂರಕ್ಷಣೆಗೆ 15 ಕೋಟಿ ರೂ. ಮೀಸಲು

ಬೀದರ್​ನ ಕರೇಜ್ ಪುನರುಜ್ಜೀವನಕ್ಕೆ ಸರಕಾರ ಮುಂದಾಗಿರುವುದು ಜಿಲ್ಲೆಯ ಜನರನ್ನ ಖುಷಿಗೊಳಿಸಿದೆ. ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿರುವ ಕರೇಜ್ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಈ ಸಾಲಿನ ಬಜೆಟ್​ನಲ್ಲಿ 15 ಕೋಟಿ ರೂ. ಅನುದಾನ ಮೀಸಲಿಲಾಗಿದೆ. ಈ ವಾಟರ್ ಕರೇಜ್​ದ ಇತಿಹಾಸ ಕೆದಕಿದರೇ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅಂದರೆ 14 ನೇಯ ಶತಮಾನದ ವಾಟರ್ ಕರೇಜ್ ಅದಾಗಿದೆ.

ಪುರಾತನ ಜಲಮಾರ್ಗ ಪುನರುಜ್ಜೀವನಕ್ಕೆ ಮುಂದಾದ ಸರ್ಕಾರ: ಬೀದರ್​ ಕರೇಜ್ ಸಂರಕ್ಷಣೆಗೆ 15 ಕೋಟಿ ರೂ. ಮೀಸಲು
ಪುರಾತನ ಜಲಮಾರ್ಗ
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 17, 2024 | 9:37 PM

ಬೀದರ್, ಫೆಬ್ರವರಿ 17: ಶತಮಾಗಳಿಂದ ಮಣ್ಣಲ್ಲಿ ಮುಚ್ಚಿಹೋಗಿದ್ದ ಐತಿಹಾಸಿಕ ಜಲಮಾರ್ಗವೊಂದು ಆ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇದರ ಮಹತ್ವವನ್ನರಿತ ಜಿಲ್ಲಾಡಳಿತ ಈ ಜಲಮಾರ್ಗದ ಸ್ವಚ್ಚತೆಗೆ ಮುಂದಾಯಿತು. ಆದರೆ ಕರೇಜ್​ನ ಸ್ವಚ್ಚತಾ ಕಾರ್ಯ ಅರ್ಧಕ್ಕೆ ಕೈ ಬಿಟ್ಟಿತ್ತು. ಈ ಬಜೆಟ್ (Budget) ​ನಲ್ಲಿ ಕರೇಜ್​ಗೆ ಅನುದಾನ ಮೀಸಲಿಡುವ ಮೂಲಕ ಸರಕಾರ ಕರೇಜ್​ನ ಪುನರುಜ್ಜೀವನಕ್ಕೆ ಮುಂದಾಗಿದೆ. ಇಡೀ ದೇಶದ ಮಟ್ಟಿಗೆ ಅಪರೂಪದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಲು ಅರ್ಹ ಎಂದು ಜಾಗತಿಕ ತಜ್ಜರಿಂದ ಬಣ್ಣಿಸಲ್ಪಟ್ಟ ಬೀದರ್​ನ ಕರೇಜ್ ಪುನರುಜ್ಜೀವನಕ್ಕೆ ಸರಕಾರ ಮುಂದಾಗಿರುವುದು ಜಿಲ್ಲೆಯ ಜನರನ್ನ ಖುಷಿಗೊಳಿಸಿದೆ. ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿರುವ ಕರೇಜ್ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಈ ಸಾಲಿನ ಬಜೆಟ್​ನಲ್ಲಿ 15 ಕೋಟಿ ರೂ. ಅನುದಾನ ಮೀಸಲಿಲಾಗಿದೆ. ಬೀದರ್​ನ ಬಹಮನಿ ಅರಸರ ಕಾಲದಲ್ಲಿ ನಿರ್ಮಿಸಲಾದ ಕರೇಜ್ ಅದು. ಇನ್ನೂ ಈ ವಾಟರ್ ಕರೇಜ್​ದ ಇತಿಹಾಸ ಕೆದಕಿದರೇ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅಂದರೆ 14 ನೇಯ ಶತಮಾನದ ವಾಟರ್ ಕರೇಜ್ ಅದು.

ಬಹಮನಿ ಸುಲ್ತಾನರ ಕಾಲದ ಸುರಂಗ 

ಬಹುಮನಿ ಸುಸ್ತಾನರ ಕಾಲದಲ್ಲಿ ಬೀದರ್ ಜನರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ವಿಶಿಷ್ಟ ತಂಜ್ಜಾನವನ್ನ ಬಳಿಸಿ ನೀರಿನ ಝರಿಗಳು, ಅಂತರಜಲದ ಮೂಲಗಳನ್ನ ಸೂರಂಗದೊಳಗೆ ಹರಿಸಿ ಸುರಂಗದೊಳಗೆ ನೀರು ಬರುವಂತೆ ಮಾಡೋದು ಇದೊಂದು ವಿಶಿಷ್ಟ ತಂತ್ರಜ್ಞಾನ. ಕಳೆದ 15ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಬಹಮನಿ ಸುಲ್ತಾನರ ಕಾಲದಲ್ಲಿ(1387-1518) ಅವದಿಯಲ್ಲಿ ಬೀದರ್​ನ ನೌಬಾದ್ ಬಳಿ ಸುರಂಗ ಮಾರ್ಗ ನಿರ್ಮಿಸಲಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ಮುಚ್ಚುವ ಹಂತಕ್ಕೆ ಬಂದ ಬೀದರ್ ‌ನಾಗರಿಕ ವಿಮಾನಯಾನ, ಸ್ಟಾರ್ ಏರ್ ಜೆಟ್ ವಿಮಾನ ಹಾರಾಟ ಸ್ಥಗಿತ

ಇಂದಿಗೂ ಈ ವ್ಯವಸ್ಥೆ ವಿಶ್ವದ 38 ದೇಶದಲ್ಲಿ ಈ ಕರೇಜ್ ವ್ಯವಸ್ಥೆ ಜಾರಿಯಲ್ಲಿದೆ. ವಿಶೇಷವಾಗಿ ಇರಾನ್ ದೇಶದಲ್ಲಿ ಸಾವಿರಾರು ಕರೇಜ್(ಸುರಂಗಮಾರ್ಗ)ಗಳಿವೆ. ಅಲ್ಲಿ ನೀರಿನ ಮೂಲ ಇಂದಿಗೂ ಕರೇಜ್ ಆಗಿದೆ. ಭಾರತದಲ್ಲಿ ಮುಸ್ಲಿಂ ರಾಜ್ಯರ ಆಳ್ವಿಕೆಯಲ್ಲಿ ಪರ್ಶಿಯಾದಿಂದ ತಂತ್ರಜ್ಞರನ್ನ ಕರೆಸಿ ಈ ಯೋಜನೆಯನ್ನ ಕೈಗೊಳ್ಳಲಾಗಿತ್ತು. ಆದರೆ ಇಂತಹ ಅಪರೂಪದ ವಾಟರ್ ಕರೇಜ್ ನಮ್ಮ ಕರ್ನಾಟದಲ್ಲಿ ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆಯಾಗಿದೆ.

ಈ ಕರೇಜ್ ಮರುಜೀವ ಪಡೆದರೆ ಪ್ರವಾಸಿಗರನ್ನ ಕೈಬಿಸಿ ಕರೆಯುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ಪ್ರವಾಸ್ಯೋಧ್ಯಮ ಅಭಿವೃದ್ದಿಗೆ ಇದು ಆಶಾಕಿರಣವಾಗಲಿದೆ. ಅಷ್ಟೆ ಅಲ್ಲದೇ ದೇಶ ವಿದೇಶದಿಂದ ಪ್ರವಾಸಿಗರನ್ನ ಸೆಳೆಯುವುದರಲ್ಲೂ ತನ್ನದೆಯಾದ ಮಹತ್ತರ ಪಾತ್ರ ವಹಿಸಲಿದೆ. ಬಜೆಟ್​ನಲ್ಲಿ ಕರೇಜ್​ನ ಅಭಿವೃದ್ಧಿಗೆ ಹಣ ಮೀಸಲಿಟ್ಟಿರುವುದು ಜಿಲ್ಲೆಯ ಜನರು ಖುಷಿ ವ್ಯಕ್ತಪಡಿಸಿದ್ದಾರೆ.

ಅಂದು ಇದೇ ವಾಟರ್ ಕರೇಜನ ಶುದ್ಧ ಕುಡಿಯುವ ನೀರು ಇಡೀ ಬೀದರ್ ನಗರದ ಜನರ ದಾಹ ಇಂಗಿಸುತ್ತಿತ್ತು. ಬೀದರ್ ನಗರದ ಸುತ್ತಮುತ್ತಲಿರುವ ಹತ್ತಾರು ಕೆರೆಗಳಿಗೆ, ಸಾವಿರಾರು ಬಾವಿಗಳಿಗೆ ಜಲಮೂಲವನ್ನ ಹೆಚ್ಚುವಂತೆ ಮಾಡಿದ್ದು ಇದೇ ವಾಟರ್ ಕರೇಜ. ಆದರೆ ಕಾಲ ಕಳೆದಂತೆ ವಾಟರ್ ಕರೇಜ ನಿರ್ವಹಣೆ ಇಲ್ಲದೆ ಸುರಂಗ ಮಾರ್ಗದಲ್ಲಿ ಮಣ್ಣು ತುಂಬಿಕೊಂಡು 2 ಶತಮಾನದಿಂದ ಮುಚ್ಚಲ್ಪಟ್ಟಿತ್ತು. ಬರೋಬ್ಬರಿ 10 ಕಿಲೋ ಮೀಟರ್ ಉದ್ದವಿರುವ ಈ ಸುರಂಗ ಮಾರ್ಗ ಕಾಲಾಂತರದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಅಷ್ಟೆ ಅಲ್ಲದೆ ಸುರಂಗ ಮಾರ್ಗ ಮಧ್ಯೆ ಮಣ್ಣು ತುಂಬಿಕೊಂಡು ಮುಚ್ಚಲ್ಪಟ್ಟಿತ್ತು.

ಯಾವುದೇ ಮೋಟರ್ ಇಲ್ಲದೆ, ವಿದ್ಯುತ್ ಇಲ್ಲದೆ ಬೀದರ್ ನಗರದ ಕೋಟೆಯವರೆಗೆ ಸರಾಗವಾಗಿ ಸುರಂಗ ಮಾರ್ಗದ ಮುಖಾಂತರ ನೀರನ್ನ ಅಂದು ಹರಿಸಲಾಗುತ್ತಿತ್ತು ಆದರೆ ಇದರ ಬಗ್ಗೆ ಕಾಲಾಂತರದಲ್ಲಿ ಮಾಹಿತಿ ಕೊರತೆ ಜನರ ನಿರ್ಲಕ್ಷದಿಂದಾಗಿ ಸಂಪೂರ್ಣ ಹಾಳಾಗಿ ಈ ರೀತಿ ಒಂದು ಕರೇಜ್ ಬೀದರ್ ನಗರದಲ್ಲಿ ಇದೆ ಅನ್ನೋದೆ ಜನರು ಮರೆತಿದ್ದರು ಅದನ್ನ ಬೆಳಕಿಗೆ ತಂದವರೆ ಅಂದು ಜಿಲ್ಲಾಧಿಕಾರಿಗಳಾಗಿದ್ದ ಪಿ.ಸಿ. ಜಾಫರ್ ಹಾಗೂ ದಿವಂಗತ ಅನುರಾಗ್ ತಿವಾರಿ. ಬೀದರ್ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ದಿವಂಗತ ಅನೂರಾಗ್ ತಿವಾರಿ ವಾಟರ್ ಕರೇಜಾದ ಮಣ್ಣು ತೆಗೆಸುವ ಕೆಲಸಕ್ಕೆ ಚಾಲನೇ ನೀಡಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸುಮಾರು 3 ಕಿಲೋ ಮೀಟರ್ ಜಲಮಾರ್ಗ ಸ್ವಚ್ಚಗೊಳಿಸಿಸಿದರು ಜಲಮಾರ್ಗದೊಳಗಿನ ಹತ್ತಾರು ಬಾವಿಗಳನ್ನ ಮಣ್ಣು ತೆಗೆಸಿ ಅದರಲ್ಲಿ ನೀರು ಬರುವಂತೆ ಮಾಡಿದರು.

ಇದನ್ನೂ ಓದಿ: ಬೀದರ್ ನಗರಸಭೆಯ ಆದಾಯ ಮೂಲವೇ ತೆರಿಗೆ ಹಣ, ಅದರೆ ಆಸ್ಪತ್ರೆಯೊಂದು 10 ವರ್ಷದಿಂದ ತೆರಿಗೆಯನ್ನೇ ಕಟ್ಟಿಲ್ಲ!

ಈ ಜಲಮಾರ್ಗ ನೋಡಲು ರಾಜ್ಯದ ಮೂಲೆ ಮೂಲೆಯಿಂದಾ ಹತ್ತಾರು ಜನರು, ಮಠಾಧೀಶರು ರಾಜಕಾರಣಿಗಳು, ವಿದೇಶಿ ಪ್ರಜೆಗಳು ಇಲ್ಲಿಗೆ ಬಂದು ಈ ವಾಟರ್ ಕರೇಜ್ ನೋಡಿ ಆಶ್ಚರ್ಯದಿಂದ ಫೋಟೋ ಕ್ಲಿಕ್ಕಿಸಿಕೊಂಡು ಹೋಗಿದ್ದರು. ಆದರೆ ಇಲ್ಲಿಂದ ಅಂದು ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಅನುರಾಗ್ ತಿವಾರಿ ಬೀದರ್ ನಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿದಂತೆ ಈ ಕೆಲಸಕ್ಕೆ ಬ್ರೇಕ್ ಬಿದ್ದು ವರ್ಷಗಳೆ ಉರುಳಿ ಹೋಗಿವೆ ಆದರೆ ಅದರ ಕಾಮಗಾರಿಯನ್ನ ಮಾತ್ರ ಇಂದಿಗೂ ಆರಂಭಿಸಿಲ್ಲ, ಆದರೆ ಈ ಸಲದ ಬಜೇಟ್ ನಲ್ಲಿ ಕರೇಜ್ ನ ಅಭಿವೃದ್ಧಿ ಹಾಗೂ ಅದರ ಸಂರಕ್ಷಣೆಗೆ ಹಣ ಮೋಸಲಿಟ್ಟಿದ್ದು ನವೆಂಬರ್ 2023 ರಂದು ಬೀದರ್ ಜಿಲ್ಲೆಗೆ ಪ್ರವಾಸೋಧ್ಯಮ ಸಚಿವ ಎಚ್.ಕೆ. ಪಾಟೀಲ್ ಬಂದು ಈ ಐತಿಹಾಸಿಕ ವಾಟರ್ ಕರೇಜ್ ಭೆಟಿಕೊಟ್ಟು ಇದರ ಮಹತ್ವವನ್ನ ಇದರ ಇತಿಹಾಸವನ್ನ ನೋಡಿ ಬೇರಗಾದರೂ ಇನ್ನೂ ಆದಷ್ಟು ಬೇಗ ವಾಟರ್ ಕರೇಜ್ ಕಾಮಗಾರಿ ಆರಂಭಿಸಿ ಹೂಳು ತೆಗೆಸಿ ಇದನ್ನ ಪ್ರವಾಸಿ ತಾಣವನ್ನಾಗಿ ಮಾಡುವ ವಾಗ್ದಾನ ಮಾಡಿದರು ಅದರಂತೆ ಈಗ ಸರಕಾರ ಹಣ ಮೀಸಲಿಟ್ಟಿದೆ.

ಜಿಲ್ಲಾಡಳಿತದ ಪ್ರಯತ್ನದಿಂದಾಗಿ ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಈ ಕರೇಜ್​ಗೆ ಮರುಜೀವ ನೀಡುವ ಕೆಲಸವನ್ನ ಅನುರಾಗ್ ತಿವಾರಿ ಮಾಡಿದ್ದರು. ಆದರೆ ಈಗ ಕರೇಜ್ ಮಣ್ಣು ತೆಗೆಯುವ ಕೆಲಸ ಸಂಪೂರ್ಣವಾಗಿ ನಿಂತೂ ಹೋಗಿತ್ತು. 3 ಕಿಲೋಮೀಟರ್ ಜಲಮಾರ್ಗದಲ್ಲಿರುವ ಮಣ್ಣು ಕ್ಲೀನ್ ಮಾಡಿದ್ದರಿಂದ ಈಗ ಅಲ್ಲಿ ನೀರು ಹರಿಯುತ್ತಿದೆ. ಹತ್ತಾರು ಬಾವಿಯಲ್ಲಿ ನೀರು ತುಂಬಿಕೊಂಡಿದೆ ಆದರೇ ಇನ್ನೂಳಿದ ಕರೇಜ್ ದಲ್ಲಿರುವ ಮಣ್ಣು ತೆಗೆದು ಉತ್ತಮ ಪ್ರವಾಸಿ ತಾನಮಾಡಬೇಕಾಗಿದೆ ಎಂದು ಇಲ್ಲಿನ ಜನರ ಆಶಯವಾಗಿತ್ತು, ಈಗ ಜನರ ಆಸೆ ಇಡೇರುವ ಕಾಲ ಕೂಡಿ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ