ಸಭೆಗೆ ತಡವಾಗಿ ಬಂದಿದ್ದಕ್ಕೆ ದಂಡ; ಸಿಟ್ಟಿಗೆದ್ದು ಮಹಿಳೆ ಮನೆಗೆ ಕಲ್ಲೇಟು, ರಕ್ಷಣೆಗಾಗಿ ಮಹಿಳೆಯರ ದುಂಬಾಲು!

ಅವರಿಬ್ಬರು ಎದುರು-ಬದುರು ಮನೆಯ ನಿವಾಸಿಗಳು. ಏರಿಯಾದ ಮಹಿಳಾ ಮಣಿಗಳೆಲ್ಲರೂ ಸೇರಿ ಒಂದು ಸ್ವ-ಸಹಾಯ ಸಂಘವನ್ನು ಸಹ ರಚಿಸಿದ್ದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದ್ರೆ, ಸಭೆಗೆ ತಡವಾಗಿ ಬಂದಿರುವುದಕ್ಕೆ ಸಭಾದ್ಯಕ್ಷೆ ದಂಡ ಹಾಕಿದ್ದರು. ಅಷ್ಟೇ ಆದಾದ ಮೇಲೆ ಕೋಲಾಹಲವೇ ಸೃಷ್ಠಿಯಾಗಿದೆ. ಜಡೆ ಜಗಳವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ.

ಸಭೆಗೆ ತಡವಾಗಿ ಬಂದಿದ್ದಕ್ಕೆ ದಂಡ; ಸಿಟ್ಟಿಗೆದ್ದು ಮಹಿಳೆ ಮನೆಗೆ ಕಲ್ಲೇಟು, ರಕ್ಷಣೆಗಾಗಿ ಮಹಿಳೆಯರ ದುಂಬಾಲು!
ಗುಂಡ್ಲುಪೇಟೆ ತಾಲೂಕಿನಲ್ಲಿ ಮನೆಯ ಮೇಲೆ ಕಲ್ಲು ತೂರಾಟ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on:May 24, 2024 | 7:49 PM

ಚಾಮರಾಜನಗರ, ಮೇ.24: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ(Gundlupete)ತಾಲೂಕಿನ ಸುಣ್ಣದಕೇರಿ ಗ್ರಾಮದಲ್ಲಿ ಮಹಿಳೆಯರೆಲ್ಲರೂ ಸೇರಿಕೊಂಡು ಒಂದು ಸ್ವ-ಸಹಾಯ ಸಂಘವನ್ನು ಕಟ್ಟಿಕೊಂಡಿದ್ದರು. ಇದಕ್ಕೆ ಸುನೀತಾ ಎಂಬುವವರು ಅಧ್ಯಕ್ಷರಾಗಿದ್ದರು. ಹೀಗಿರುವಾಗ ಕಳೆದ ವಾರ ಸಂಘದ ಸಭೆಯಿತ್ತು. ನಿಗದಿತ ಸಮಯಕ್ಕೆ ಸದಸ್ಯೆಯರು ಬಾರದ ಕಾರಣ ದಂಡ ವಿಧಿಸಲಾಗಿತ್ತು. ಆದರೆ, ಈವೇಳೆ ಸುನೀತಾರನ್ನ ಬಿಟ್ಟು ಅವರ ಪಕ್ಕದ ಮನೆಯ ಪದ್ಮಾಳಿಗೆ ದಂಡ ಹಾಕಲಾಯ್ತು. ಇದರಿಂದ ರೊಚ್ಚಿಗೆದ್ದ ಪದ್ಮಾ, ಸುನಿತಾಳ ಜೊತೆ ಕಿರಿಕ್ ತೆಗೆದು ಗಲಾಟೆ ಮಾಡಿದ್ದಾರೆ.

ಪ್ರತಿನಿತ್ಯ ಮನೆಯ ಮೇಲೆ ಕಲ್ಲು ಎಸೆಯುತ್ತಿರುವ ಆರೋಪ

ಬಳಿಕ ಪದ್ಮಾಳ ಕುಟುಂಬಸ್ಥರು ಸುನೀತಾ ಮೇಲೆ ಹಲ್ಲೆಗೈದು, ಈಗ ಪ್ರತಿನಿತ್ಯ ಮನೆಯ ಮೇಲೆ ಕಲ್ಲು ಎಸೆಯುತ್ತಿದ್ದಾರೆಂಬ ಆರೋಪ ಮಾಡುತ್ತಿದ್ದಾರೆ. ಇನ್ನು ಪದ್ಮಾಳ ಕುಟುಂಬಸ್ಥರು ಬೀದಿಯಲ್ಲಿ ಸುನೀತಾ ಓಡಾಟ ನಡೆಸುವಾಗೆಲ್ಲ, ಪದೇ ಪದೇ ಕಿರಿಕ್ ತೆಗೆದು ಜಗಳ ಮಾಡುತ್ತಿದ್ದು, ಕೊಲೆ ಬೆದರಿಕೆ ಬೇರೆ ಹಾಕಿದ್ದಾರೆ. ಇನ್ನು ಸಾಲದು ಎಂದು ಮನೆ ಮೇಲೆ ಕಲ್ಲು ಎಸೆಯುತ್ತಿದ್ದು, ಹಂಚುಗಳೆಲ್ಲವೂ ಒಡೆದು ಚುರು ಚೂರಾಗಿ ಹೋಗಿದೆ.

ಇದನ್ನೂ ಓದಿ:ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ

ಜಿಲ್ಲಾಧಿಕಾರಿ ಕಚೇರಿ ಮೊರೆ

ಕೇವಲ ಗಲಾಟೆ ವಿಚಾರಕ್ಕೆ ಸಂಬಂಧಪಟ್ಟಂತೆ ಗುಂಡ್ಲುಪೇಟೆ ಪೊಲೀಸರು ಎಫ್​ಐಆರ್ ಮಾಡಿಕೊಂಡಿದ್ದು, ಕಲ್ಲು ಎಸೆಯುವ ವಿಚಾರ ತಿಳಿಸಿದರೂ ಕ್ರಮ ಕೈಗೊಂಡಿಲ್ಲವೆಂದು ಸುನೀತಾ ಕುಟುಂಬಸ್ಥರ ಆರೋಪವಾಗಿದೆ. ಪೊಲೀಸರಿಂದ ಭದ್ರತೆ ಸಿಗದ ಪರಿಣಾಮ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ದೂರು ನೀಡಲು ಮುಂದಾಗಿದ್ದಾರೆ.

ಅದೇನೆ ಇರಲಿ ದಂಡ ಹಾಕಿದ ವಿಚಾರಕ್ಕೆ ಶುರುವಾದ ಕಿರಿಕ್, ಈಗ ಬೇರೊಂದು ರೂಪಕ್ಕೆ ತಿರುಗಿದೆ. ಕಲ್ಲೆಟಿನಿಂದ ಮಹಿಳೆಯರು ಬೇಸತ್ತು ಹೋಗಿದ್ದು, ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಈಗಾಗಲೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Fri, 24 May 24

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ