ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ; ಡಾ.ಶಿವಮೂರ್ತಿ ಮುರುಘಾ ಶರಣರ ಬಳಿಕ ಪೀಠ ಅಲಂಕರಿಸಲಿದ್ದಾರೆ ಬಸವಾದಿತ್ಯ ಶ್ರೀ
ಮುರುಘಾಶ್ರೀಗಳ ಆಶಯದಂತೆ ಡಾ.ಶಿವಮೂರ್ತಿ ಮುರುಘಾ ಶರಣರ ಉತ್ತರಾಧಿಕಾರಿ ಆಗಿದ್ದೇನೆ. 21ನೇ ಶತಮಾನದ 21ನೇ ಪೀಠಾಧಿಪತಿ ಆಗುವಂಥ ದೊಡ್ಡ ಜವಬ್ದಾರಿ ನೀಡುತ್ತಿದ್ದಾರೆ. ಮುರುಘಾಮಠದ ಭಕ್ತರು ಹಾಗೂ ಮಠದ ಏಳ್ಗೆಗಾಗಿ ನಾನು ಶ್ರಮಿಸುತ್ತೇನೆ ಎಂದು ಬಸವಾದಿತ್ಯ ಶ್ರೀ ತಿಳಿಸಿದರು.
ಚಿತ್ರದುರ್ಗ: ಕೋಟೆನಾಡಿನ ಐತಿಹಾಸಿಕ ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಅವರನ್ನು ನೇಮಕ ಮಾಡಲಾಗಿದೆ. ಮುರುಘಾಮಠದ ಸಿರಸಂಗಿ ಮಹಾಲಿಂಗ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರುಘಾಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಉತ್ತರಾಧಿಕಾರಿ ಘೋಷಿಸಿದರು. ರುದ್ರಾಕ್ಷಿ ಮಾಲೆ ತೊಡಿಸಿ ಹೂವಿನ ಅಕ್ಷತೆ ಹಾಕುವ ಮೂಲಕ ನೂತನ ಉತ್ತರಾಧಿಕಾರಿಗೆ ಆಶೀರ್ವದಿಸಿದರು. ಡಾ.ಶಿವಮೂರ್ತಿ ಮುರುಘಾ ಶರಣರ ಬಳಿಕ ಬಸವಾದಿತ್ಯ ಶ್ರೀ ಮುರುಘಾಮಠದ ಪೀಠ ಅಲಂಕರಿಸಲಿದ್ದಾರೆ. ಸಮಾಜದ ಮುಖಂಡರು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಬಸವಾದಿತ್ಯ ಶ್ರೀ ಹಿನ್ನೆಲೆ ಚಿತ್ರದುರ್ಗದ ಹುಲ್ಲೂರು ಗ್ರಾಮ ಮೂಲದ ಚಂದ್ರಕಲಾ-ಶಿವಮೂರ್ತಿ ದಂಪತಿಯ ಎರಡನೇ ಪುತ್ರರು. ಮೊದಲ ಪುತ್ರಿ ಅಮೂಲ್ಯ ಎಮ್ಬಿಎ ಓದುತ್ತಿದ್ದಾಳೆ. ಎರಡನೇ ಪುತ್ರ ಬಸವಾದಿತ್ಯ ಮುರುಘಾಮಠದ ಎಸ್ಜೆಎಮ್ ಕಾಲೇಜಿನಲ್ಲಿ ಪಿಯುಸಿ ದ್ವೀತಿಯ ವರ್ಷದ ವಿದ್ಯಾರ್ಥಿ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಮಠದ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರು ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಹೆಚ್.ಡಿ.ಕೆ
ದೊಡ್ಡಮ್ಮನಿಂದ ಮಠದ ನಂಟು: ಬಸವಾದಿತ್ಯ ಅವರ ದೊಡ್ಡಮ್ಮ ದ್ರಾಕ್ಷಾಯಿಣಮ್ಮ ಮುರುಘಾಮಠದ ಪರಮ ಭಕ್ತರು. ಡಾ.ಶಿವಮೂರ್ತಿ ಮುರುಘಾ ಶರಣರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಮಠಕ್ಕೆ ಬರುವ ಸಂದರ್ಭದಲ್ಲಿ ಸಹೋದರಿಯ ಪುತ್ರ ಬಸವಾರಾಧ್ಯರನ್ನು ಜತೆಗೆ ಕರೆತರುತ್ತಿದ್ದರು. ಮಠದ ಸಂಪರ್ಕದಿಂದಾಗಿ ಬಸವಾದಿತ್ಯರಲ್ಲಿ ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚಿತ್ತು. ಮುರುಘಾಶ್ರೀಗಳು ಬಸವಾದಿತ್ಯರನ್ನು ಗಮನಿಸಿ ಗುರುಕುಲದಲ್ಲಿ ವಿದ್ಯಾಭ್ಯಾಸಕ್ಕೆ ಸೂಚಿಸಿದ್ದರು. ಮಠಕ್ಕೆ ಬಿಡುವಂತೆ ಪೋಷಕರಿಗೆ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ನಮ್ಮ ಒಂದು ಕುಟುಂಬದ ಮಗನಾಗುವುದಕ್ಕಿಂದ ಸಮಾಜದ ಮಗನಾಗಲಿ ನಿನ್ನೆಯಷ್ಟೇ ಮುರುಘಾಶ್ರೀಗಳು ಕರೆ ಮಾಡಿ ಬಸವಾದಿತ್ಯರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತೇವೆಂದು ತಿಳಿಸಿದರು. ನಾವು ಮತ್ತು ಬಸವಾದಿತ್ಯ ಖುಷಿಯಿಂದ ಒಪ್ಪಿಗೆ ಸೂಚಿಸಿದೆವು. ನಮ್ಮ ಒಂದು ಕುಟುಂಬದ ಮಗನಾಗುವುದಕ್ಕಿಂದ ಸಮಾಜದ ಮಗನಾಗಿ, ಪಾರಂಪರಿಕ ಮಠದ ಪೀಠದ ಮೂಲಕ ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ. ನಮಗೆ ಬಸವಾದಿತ್ಯ ಒಬ್ಬನೇ ಮಗ, ಒಬ್ಬಳು ಮಗಳಿದ್ದಾಳೆ. ಬಸವಾದಿತ್ಯ ಮುರುಘಾಶ್ರೀಗಳ ಆಶಯದಂತೆ ಅವರ ಉತ್ತಾರಾಧಿಕಾರಿಯಾಗಿರುವುದು ಸಂತಸದ ಸಂಗತಿ ಎಂದು ಬಸವಾದಿತ್ಯ ಅವರ ಪೋಷಕರಾದ ಚಂದ್ರಕಲಾ ಹಾಗೂ ಶಿವಮೂರ್ತಿ ದಂಪತಿ ಸಂತಸ ಹಂಚಿಕೊಂಡಿದ್ದಾರೆ.
ಮುರುಘಾಶ್ರೀ ಆಶೀರ್ವಚನ: ಮುರುಘಾಮಠ ಶೂನ್ಯಪೀಠವಾಗಿದ್ದು ಶ್ರದ್ಧಾ ಕೇಂದ್ರವಾಗಿದೆ. ನಮ್ಮನ್ನು ಸೇರಿ ಈವರೆಗೆ 20ಜನ ಪೀಠಾದ್ಯಕ್ಷಾಗಿದ್ದು ಬಸವಾದಿತ್ಯ 21ನೇ ಪೀಠಾದ್ಯಕ್ಷರಾಗಲಿದ್ದಾರೆ. ಮನುಷ್ಯನ ಬದುಕು ಅಸ್ಥಿರವಾಗಿದ್ದು ಅಪಘಾತ, ಆಘಾತದಿಂದ ನಿಧನವಾದರೆ ಮನೆಯಲ್ಲಿ ಬೇರೆಯವರು ಜವಬ್ದಾರಿ ತೆಗೆದುಕೊಳ್ಳುತ್ತಾರೆ. ಮಠ ಪೀಠಗಳಲ್ಲಿ ಶೂನ್ಯ ಆವರಿಸಬಾರದು. ಸ್ಪಷ್ಟತೆ ಇರಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ. ಇದನ್ನೂ ಓದಿ:ಬೆಂಬಲ ಬೇಕಿದ್ದರೆ ಈ ಷರತ್ತು ಒಪ್ಪಿಕೊಳ್ಳಬೇಕು: ಕಪಿಲ್ ಸಿಬಲ್ಗೆ ಟಿಎಂಸಿ ಬೆಂಬಲ ಸಿಗದಿರಲು ಮಮತಾ ವಿಧಿಸಿದ ಈ ಷರತ್ತು ಕಾರಣ
ಬಸವಾದಿತ್ಯ ಅವರಿಗೆ ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳು ಬರುತ್ತವೆ. ಉತ್ತಮ ವಿದ್ಯಭ್ಯಾಸ , ಸಂಸ್ಕಾರ ನೀಡಿ ಪೀಠಾಧಿಕಾರ ಮಾಡಲಾಗುವುದು. ಸಮಕಾಲೀನ ಸಂದರ್ಭದಲ್ಲಿ ಆಕಸ್ಮಿಕ ಮತ್ತು ಅರ್ಥಪೂರ್ಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುರುಘಾಶ್ರೀ ತಿಳಿಸಿದರು.
ಉತ್ತರಾಧಿಕಾರಿ ನುಡಿ: ಮುರುಘಾಶ್ರೀಗಳ ಆಶಯದಂತೆ ಡಾ.ಶಿವಮೂರ್ತಿ ಮುರುಘಾ ಶರಣರ ಉತ್ತರಾಧಿಕಾರಿ ಆಗಿದ್ದೇನೆ. 21ನೇ ಶತಮಾನದ 21ನೇ ಪೀಠಾಧಿಪತಿ ಆಗುವಂಥ ದೊಡ್ಡ ಜವಬ್ದಾರಿ ನೀಡುತ್ತಿದ್ದಾರೆ. ಮುರುಘಾಮಠದ ಭಕ್ತರು ಹಾಗೂ ಮಠದ ಏಳ್ಗೆಗಾಗಿ ನಾನು ಶ್ರಮಿಸುತ್ತೇನೆ ಎಂದು ಬಸವಾದಿತ್ಯ ಶ್ರೀ ತಿಳಿಸಿದರು.
ವರದಿ: ಬಸವರಾಜ ಮುದನೂರ್, ಚಿತ್ರದುರ್ಗ