ಕಾಂಗ್ರೆಸ್​ ಜನಾಂದೋಲನ, ಬಿಜೆಪಿ-ಜೆಡಿಎಸ್ ಸಮಾವೇಶ: ಅಪರೂಪದ ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾದ ಮೈಸೂರು

ರಾಜ್ಯ ರಾಜಕಾರಣದಲ್ಲಿ ಮೈಸೂರು ಚಲೋ Vs ಜನಾಂದೋಲ ಸಮರ ಜೋರಾಗಿದೆ. ಮುಡಾ ಕೇಸ್​ನಲ್ಲಿ ಸಿಎಂ ವಿರುದ್ಧ ಸಮರ ಸಾರಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆ. 10ರಂದು ಸಮಾರೋಪ ಮಾಡಲು ನಿರ್ಧರಿಸಿದರೆ, ನಾಳೆ ಕಾಂಗ್ರೆಸ್​ ಜನಾಂದೋಲ ಸಮಾರೋಪ ನಡೆಯಲಿದೆ. ಇಂತಹ ರಾಜಕೀಯ ವಿದ್ಯಮಾನಕ್ಕೆ ಮೈಸೂರು ಸಾಕ್ಷಿಯಾಗುತ್ತಿದೆ.

ಕಾಂಗ್ರೆಸ್​ ಜನಾಂದೋಲನ, ಬಿಜೆಪಿ-ಜೆಡಿಎಸ್ ಸಮಾವೇಶ: ಅಪರೂಪದ ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾದ ಮೈಸೂರು
ಕಾಂಗ್ರೆಸ್​ ಜನಾಂದೋಲನ, ಬಿಜೆಪಿ-ಜೆಡಿಎಸ್ ಸಮಾವೇಶ: ಅಪರೂಪದ ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾದ ಮೈಸೂರು
Edited By:

Updated on: Aug 08, 2024 | 8:23 PM

ಮೈಸೂರು, ಆಗಸ್ಟ್​ 08: ರಾಜ್ಯ ರಾಜಕಾರಣದಲ್ಲಿ ಹಗರಣಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿವೆ. ಅದರಲ್ಲೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜಪಾಲರಿಂದ ಶೋಕಾಸ್​ ನೋಟಿಸ್​ ನೀಡಿದ್ದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಮುಡಾ ಸೈಟ್​ ಹಂಚಿಕೆಯಲ್ಲಿ ಅಕ್ರಮ ಆಗಿದೆ ಅನ್ನೋದನ್ನೇ ಅಸ್ತ್ರವನ್ನಾಗಿಟ್ಟುಕೊಂಡಿರುವ ಬಿಜೆಪಿ-ಜೆಡಿಎಸ್ (bjp-jds)​ ಪಕ್ಷಗಳು ಬೆಂಗಳೂರು ಟು ಮೈಸೂರು ಪಾದಯಾತ್ರೆ ಈಗಾಗಲೇ ಆರಂಭಿಸಲಾಗಿದೆ. ಬಿಜೆಪಿ-ಜೆಡಿಎಸ್​ಗೆ ಟಾಂಗ್​ ಕೊಡಲು ಕಾಂಗ್ರೆಸ್​​ ಕೂಡ ಜನಾಂದೋಲನ ಕಾರ್ಯಕ್ರಮವನ್ನು ಮಾಡುತ್ತಿದೆ. ಇದೀಗ ಎಲ್ಲಾ ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ನಾಳೆ ಕಾಂಗ್ರೆಸ್, ನಾಡಿದ್ದು ಮೈತ್ರಿ ಸಮಾವೇಶ ನಡೆಯಲಿದೆ.

ಮೈಸೂರು ಅಪರೂಪದ ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಒಂದೇ ಊರು, ಒಂದೇ ಮೈದಾನ, ಒಂದೇ ವೇದಿಕೆಯಲ್ಲಿ ಎರಡೆರಡೆ ಕಾರ್ಯಕ್ರಮಗಳು ನಡೆಯಲಿದೆ. ನಾಳೆ ಕಾಂಗ್ರೆಸ್​ನಿಂದ ಬಿಜೆಪಿ ವಿರುದ್ಧ ಜನಾಂದೋಲನ ಸಮಾವೇಶ ನಡೆದರೆ, ಆಗಸ್ಟ್​ 10ರಂದು ಬಿಜೆಪಿ-ಜೆಡಿಎಸ್​ನಿಂದ ಮೈಸೂರು ಛಲೋ ಸಮಾರೋಪ ನಡೆಯಲಿದೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಯಲ್ಲೂ ಸುಳಿವಿಲ್ಲ: ರಾಜಕೀಯ ನೇಪಥ್ಯಕ್ಕೆ ಸರಿದ ಸುಮಲತಾ ಅಂಬರೀಶ್?

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಒಬ್ಬರೆ ಗುತ್ತಿಗೆದಾರರಿಂದ ವೇದಿಕೆ ನಿರ್ಮಿಸಲಾಗಿದೆ. ಕಾಂಗ್ರೆಸ್, ಮೈತ್ರಿಕೂಟಗಳಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ತಲಾ ಒಂದು ಲಕ್ಷ ಜನ ಸೇರಿಸಲು ಎರಡೂ ಪಕ್ಷಗಳು ಪ್ಲ್ಯಾನ್ ನಡೆಸಿದ್ದಾರೆ.

ಈಗಾಗಲೇ ಬಿಜೆಪಿ-ಜೆಡಿಎಸ್​​ ಪಾದಯಾತ್ರೆ ಶುರುವಾಗಿ ಇಂದಿಗೆ ಆರು ದಿನವಾಗಿದೆ. ಬಿಜೆಪಿ-ಜೆಡಿಎಸ್​ ಪಕ್ಷದ ಎಲ್ಲಾ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪಾದಯಾತ್ರೆ ಇಂದು ಭದ್ರಕೋಟೆ ಮಂಡ್ಯದಲ್ಲಿ ಪ್ರೀತಂಗೌಡ ಬೆಂಬಲಿಗರು, ಜೆಡಿಎಸ್​ ಕಾರ್ಯಕರ್ತರ ಮಧ್ಯೆ ತಳ್ಳಾಟ, ನೂಕಾಟವೂ ನಡೀತು. ಇದೀಗ ಶ್ರೀರಂಗಪಟ್ಟಣಕ್ಕೆ ಬಂದು ತಲುಪಿದ್ದು ಆ ಮೂಲಕ ಆರನೇ ದಿನದ ಪಾದಯಾತ್ರೆ ಅಂತ್ಯವಾಗಿದೆ.

ಇದನ್ನೂ ಓದಿ: ಎಲ್ಲವೂ 10ನೇ ತಾರೀಕಿನ ನಂತರ ನೋಡ್ತಿರಿ: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ

ಪಾದಯಾತ್ರೆ ಬರುವ ದಾರಿಯಲ್ಲೇ ಜನಾಂದೋಲನ ಸಮಾವೇಶ ನಡೆಸಿ ಕೌಂಟರ್ ಕೊಟ್ಟಿದ್ದ ಕಾಂಗ್ರೆಸ್, ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಶನಿವಾರ ಮೈಸೂರಿನಲ್ಲಿ ಬಿಜೆಪಿ ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯುತ್ತೆ. ಅದಕ್ಕೂ ಒಂದು ದಿನ ಮುಂಚಿತವಾಗಿ ಮೈಸೂರಿನಲ್ಲೇ ಸಿದ್ದರಾಮೋತ್ಸವ ಮಾದರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಸ್ಕೆಚ್ ಹಾಕಿದೆ.

ಕಾಂಗ್ರೆಸ್‌ನ ಎಲ್ಲಾ ಶಾಸಕರು, ಸಚಿವರಿಗೆ ಭಾಗವಹಿಸಲು ಸೂಚಿಸಲಾಗಿದೆ. ನಾಳೆ ಮೈಸೂರಿನಲ್ಲಿ ಸಮಾವೇಶ ನಡೆಯಲಿದ್ದು, ಬಿಜೆಪಿ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಲು ಕೈ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿಯೇ ಇಂದು ಮೈಸೂರಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us