AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನಲ್ಲಿ ಆರಿಲ್ಲ ಭಿನ್ನಮತ ಬಿಸಿ! ಬಾಗಲಕೋಟೆಯಲ್ಲಿ ರಂಗೇರಿದ ಪ್ರಚಾರದ ಕಣ

ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯ ಕಣ ದಿನೇ ದಿನೇ ರೋಚಕ ತಿರುವು ಪಡೆಯುತ್ತಿದೆ. ದಾವಣಗೆರೆಯಲ್ಲಿ ಸಮರ್ಥ್‌ಗೆ ಟಿಕೆಟ್ ನೀಡಿದ್ದಕ್ಕೆ ಸಚಿವ ಜಮೀರ್ ಅಹ್ಮದ್ ಮುನಿಸಿಕೊಂಡು ಪ್ರಚಾರದಿಂದ ದೂರ ಉಳಿದು ಕೇರಳದಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ ಎಂಬ ಚರ್ಚೆ ಶುರುವಾಗಿದ್ದರೆ, ಅತ್ತ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟ ಘಟನೆ ನಡೆದಿದೆ. ಚುನಾವಣಾ ಕಣದಲ್ಲಿ ಏನೇನಾಯ್ತು ಎಂಬ ವಿವರ ಇಲ್ಲಿದೆ.

ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನಲ್ಲಿ ಆರಿಲ್ಲ ಭಿನ್ನಮತ ಬಿಸಿ! ಬಾಗಲಕೋಟೆಯಲ್ಲಿ ರಂಗೇರಿದ ಪ್ರಚಾರದ ಕಣ
ದಾವಣಗೆರೆಯಲ್ಲಿ ಸಚಿವ ಬೈರತಿ ಜತೆ ಸಾದಿಕ್ ಹಾಗೂ ಕೇಳದ ಕಲ್ಪೆಟ್ಟದಲ್ಲಿ ಪ್ರಚಾರ ನಿರತ ಜಮೀರ್ ಅಹ್ಮದ್ (ಬಲ ಚಿತ್ರ)Image Credit source: tv9
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Mar 30, 2026 | 6:55 AM

Share

ದಾವಣಗೆರೆ, ಬಾಗಲಕೋಟೆ, ಮಾರ್ಚ್ 30: ಕರ್ನಾಟಕದಲ್ಲಿ ಉಪಚುನಾವಣೆಯ (Karnataka By Election) ಅಖಾಡ ದಿನೇ ದಿನೇ ರಂಗೇರುತ್ತಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಭಾರೀ ಪೈಪೋಟಿ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಮತ್ತು ಮುನಿಸಿನ ಚರ್ಚೆಗಳು ಜೋರಾಗಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸಾಕಷ್ಟು ಒತ್ತಾಯಿಸಿದ್ದರು. ಮುಸ್ಲಿಂ ಮುಖಂಡ ಸಾಧಿಕ್ ಪೈಲ್ವಾನ್​​ಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದಲ್ಲದೇ, ಎಷ್ಟು ಖರ್ಚಾದರೂ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೂ ಟಿಕೆಟ್ ಸಿಕ್ಕಿಲ್ಲ.

ಕೊನೆಗೆ ಹೈಕಮಾಂಡ್ ಶಾಮನೂರು ಕುಟುಂಬದ ಸಮರ್ಥ್​​ಗೆ ಟಿಕೆಟ್ ನೀಡಿದ ಬಳಿಕ ಜಮೀರ್ ಅಹ್ಮದ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿಯೇ ಜಮೀರ್ ಅಹ್ಮದ್ ದಾವಣಗೆರೆ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇರಳ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾದ ಜಮೀರ್

ಇದೀಗ ಜಮೀರ್ ಕೇರಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದು, ವಯನಾಡಿನ ಕಲ್ಪೆಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಿಕ್ ಪರ ಮತಯಾಚನೆ ನಡೆಸುತ್ತಿದ್ದಾರೆ. ಅಲ್ಲಿಯೂ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ಪ್ರಚಾರ ನಡೆಸುತ್ತಿದ್ದಾರೆ.

ಮುಸ್ಲಿಮರಿಗೆ ಟಿಕೆಟ್ ನೀಡದೆ ಕಾಂಗ್ರೆಸ್​ನಿಂದ ಮೋಸ: ಬಿಜೆಪಿ

ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಮುಸ್ಲಿಮರಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಪಕ್ಷದಲ್ಲಿ ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬದಲ್ಲೇ ಸಚಿವರು ಹಾಗೂ ಸಂಸದರು ಇದ್ದಾರೆ. ಇಷ್ಟೆಲ್ಲಾ ಅಧಿಕಾರ ಇದ್ದರೂ ಮತ್ತೆ ಅಧಿಕಾರ ಬೇಕೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿ, ಬಿಜೆಪಿಯವರದ್ದೇನು ವಂಶವಾಹಿನಿ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ನೂರಾರು ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ. ರಾಜೀವ್ ಗಾಂಧಿ ಬಡಾವಣೆ, ಎಸ್.ಎಂ. ಕೃಷ್ಣನಗರ ಹಾಗೂ ಎಸ್‌ಪಿಎಸ್ ನಗರ ಪ್ರದೇಶಗಳಲ್ಲಿ ಮತದಾರರನ್ನು ಭೇಟಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ರಂಗೇರಿದ ಚುನಾವಣಾ ಕಣ

ಅತ್ತ ಬಾಗಲಕೋಟೆ ಕ್ಷೇತ್ರದಲ್ಲೂ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮತ್ತು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಾರ್ಚ್ 30, 31 ಹಾಗೂ ಏಪ್ರಿಲ್ 3, 4, 6ರಂದು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಈ ನಡುವೆ ದಿವಂಗತ ಶಾಸಕ ಹೆಚ್.ವೈ. ಮೇಟಿ ಪುತ್ರಿ ಬಾಯಕ್ಕ, ತಮ್ಮ ಸಹೋದರ ಉಮೇಶ್ ಮೇಟಿ ಪರ ಪ್ರಚಾರ ನಡೆಸುವ ವೇಳೆ ತಂದೆಯನ್ನು ನೆನೆದು ಕಣ್ಣೀರಿಟ್ಟ ಘಟನೆ ಕೂಡ ಗಮನ ಸೆಳೆಯಿತು.

ಇದನ್ನೂ ಓದಿ: ‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!

ಇದಲ್ಲದೆ ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಪರ ತಿಮ್ಮಾಪುರ ಮತ್ತು ಬಿಜೆಪಿ ಪರ ರಾಮುಲು ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ‘ಗೋ ಬ್ಯಾಕ್ ರಾಮುಲು’ ಎಂದು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಕೈಕೈ ವಿಲಾಯಿಸುವ ತಲುಪಿತ್ತು.

ವರದಿ: ದಾವಣಗೆರೆಯಿಂದ ಬಸವರಾಜ ದೊಡ್ಮನಿ ಜೊತೆ ರವಿ ಮೂಕಿ, ಟಿವಿ9 ಬಾಗಲಕೋಟೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ
ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ