ಒಂದೇ ತಿಂಗಳಲ್ಲಿ 5 ಹತ್ಯೆ, ಬೆಚ್ಚಿಬಿದ್ದ ಕಡಲ ನಗರಿ
ಮಂಗಳೂರು: ಕಡಲತಡಿ ಮಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ರಕ್ತಚರಿತ್ರೆಗಳ ಅಲೆ ಅಪ್ಪಳಿಸ್ತಿದೆ. ಕ್ರೈಂ.. ಕೊಲೆ.. ಸುಲಿಗೆ.. ದರೋಡೆ ಅನ್ನೋದು ಜನರನ್ನ ಗಡ ಗಡ ನಡುಗಿಸ್ತಿದೆ.. ಪೊಲೀಸ್ರು ಕೂಡ ಶಾಕ್ ಆಗಿದ್ದಾರೆ.. ಕರಾವಳಿಯಲ್ಲಿ ದಿನೇ ದಿನೆ ಹೆಚ್ಚಾಗ್ತಿದೆ ಕ್ರೈಂ ರೇಟ್! ಯೆಸ್.. ರಾಜ್ಯದ ಅತ್ಯಂತ ಸೂಕ್ಷ್ಮ ಪ್ರದೇಶ ಮಂಗಳೂರಿಗೆ ರಕ್ತಪಾತ ಅನ್ನೋದು ಥೇಟ್ ಉಡದಂತೆ ಹಿಡಿದಿದೆ. ಅದ್ರಲ್ಲೂ ಕಳೆದ ನವೆಂಬರ್ ಅನ್ನೋದು ಕರಾವಳಿ ನಗರದ ಪಾಲಿಗೆ ಕರಾಳ ದಿನ. ಯಾಕಂದ್ರೆ, ಇದೇ ತಿಂಗಳಲ್ಲಿ ನೆತ್ತರಿಗೆ ನೆತ್ತರೇ […]
ಮಂಗಳೂರು: ಕಡಲತಡಿ ಮಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ರಕ್ತಚರಿತ್ರೆಗಳ ಅಲೆ ಅಪ್ಪಳಿಸ್ತಿದೆ. ಕ್ರೈಂ.. ಕೊಲೆ.. ಸುಲಿಗೆ.. ದರೋಡೆ ಅನ್ನೋದು ಜನರನ್ನ ಗಡ ಗಡ ನಡುಗಿಸ್ತಿದೆ.. ಪೊಲೀಸ್ರು ಕೂಡ ಶಾಕ್ ಆಗಿದ್ದಾರೆ..
ಕರಾವಳಿಯಲ್ಲಿ ದಿನೇ ದಿನೆ ಹೆಚ್ಚಾಗ್ತಿದೆ ಕ್ರೈಂ ರೇಟ್! ಯೆಸ್.. ರಾಜ್ಯದ ಅತ್ಯಂತ ಸೂಕ್ಷ್ಮ ಪ್ರದೇಶ ಮಂಗಳೂರಿಗೆ ರಕ್ತಪಾತ ಅನ್ನೋದು ಥೇಟ್ ಉಡದಂತೆ ಹಿಡಿದಿದೆ. ಅದ್ರಲ್ಲೂ ಕಳೆದ ನವೆಂಬರ್ ಅನ್ನೋದು ಕರಾವಳಿ ನಗರದ ಪಾಲಿಗೆ ಕರಾಳ ದಿನ. ಯಾಕಂದ್ರೆ, ಇದೇ ತಿಂಗಳಲ್ಲಿ ನೆತ್ತರಿಗೆ ನೆತ್ತರೇ ಹರಿದೋಗಿದೆ. ಮಾದಕ ವ್ಯಸನ, ಕುಡಿದು ಗಲಾಟೆ, ಸಣ್ಣ ಪುಟ್ಟ ಹಣಕಾಸು ವಿಚಾರ, ಹುಡುಗಿ ವಿಚಾರ, ಒಂಟಿ ಮನೆ ದರೋಡೆ ಸೇರಿ ಹತ್ತು ಹಲವು ಕ್ರೈಂ ನಡೆದೋಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಮಾಣಿ, ಮುಡಿಪು, ಬಂಟ್ವಾಳ, ಬಿ.ಸಿ.ರಸ್ತೆ ಭಾಗಗಳಲ್ಲಿ ಅಪರಾಧ ಪ್ರಕರಣಗಳು ವ್ಯಾಪಿಸ್ತಿದೆ.
ಕರಾವಳಿಯಲ್ಲಿ ಕ್ರೈಂ ರೇಟ್! ನವೆಂಬರ್ ಒಂದೇ ತಿಂಗಳಲ್ಲಿ ಮಂಗಳೂರಲ್ಲಿ ಒಟ್ಟು 5 ಕೊಲೆಗಳು ನಡೆದೋಗಿದೆ. ನವೆಂಬರ್ 17 ರಂದು ಪುತ್ತೂರಿನ ಕುರಿಯ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದೆ. ನವೆಂಬರ್ 26 ರಂದು ಪುತ್ತೂರಿನ ಕಬಕದಲ್ಲಿ ಹಣಕಾಸು ವಿಚಾರಕ್ಕೆ ಕಲ್ಲು ಕ್ವಾರಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಲ್ಲದೇ ನವೆಂಬರ್ 28 ಬಂಟ್ವಾಳ ಗ್ರಾಮಾಂತರ ಠಾಣೆ ಸಜೀಪನಡುವಿನಲ್ಲಿ ದನಗಳ ಕಳ್ಳತನವಾಗಿದೆ. ಇಷ್ಟೇ ಅಲ್ಲ, ನವೆಂಬರ್ 29 ಬಂಟ್ವಾಳ ಠಾಣಾ ವ್ಯಾಪ್ತಿಯ ಮೇರೆಮಜರುವಿನಲ್ಲಿ ಗ್ರಾ.ಪಂ ಸದಸ್ಯ ಯೋಗಿಶ್ ಪ್ರಭು ಹಲ್ಲೆ ಕೊಲೆ ಯತ್ನ ಕೂಡ ನಡೆದಿತ್ತು.
ಇನ್ನು, ನವೆಂಬರ್ 30 ಬಂಟ್ವಾಳದ ಮಂಚಿಕಟ್ಟೆಯಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಜಾಕ್ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ನಡೆಸಲಾಗಿದೆ. ಇದು ನವೆಂಬರ್ ತಿಂಗಳಿನ ಕಥೆಯಾದ್ರೆ, ಡಿಸೆಂಬರ್4 ರಂದು ಪುತ್ತೂರಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿದೆ. ಜೊತೆಗೆ ಡಿ.17ರಂದು ಬೆಳ್ತಂಗಡಿಯಲ್ಲಿ ಗಂಡನಿಂದಲೇ ಹೆಂಡತಿಯ ಹತ್ಯೆ ನಡೆದಿದೆ.
ಪದೇ ಪದೇ ನರಭಕ್ಷರ ಅಟ್ಟಹಾಸ ಮೆರೀತಿರೋದು ಜನರ ನಿದ್ದೆಗೆಡಿಸಿದೆ. ಪೊಲೀಸ್ ಇಲಾಖೆ ಏನ್ಮಾಡ್ತಿದೆ ಅಂತ ಸ್ಥಳೀಯರು ಪ್ರಶ್ನೆ ಮಾಡ್ತಿದ್ದಾರೆ. ಇನ್ನು, ಈ ಬಗ್ಗೆ ಎಸ್ಪಿ ಅವರನ್ನ ಕೇಳಿದ್ರೆ ಕ್ರೈಂ ರೇಟ್ ಕಡಿಮೆ ಮಾಡ್ತೀವಿ ಅಂತಿದ್ದಾರೆ. ಇನ್ನು ಗಾಂಜಾ ವಿರುದ್ಧ ನಾವು ನಿರಂತರ ಸಮರ ಸಾರುತ್ತಿದ್ದೇವೆ.
ಗಾಂಜಾ ಸ್ಮಗ್ಲರ್ ಮತ್ತು ಡೀಲರ್ಗಳನ್ನ ಸುಲಭವಾಗಿ ಬಂಧಿಸಬಹುದು. ಆದ್ರೆ, ಕೆಲ ಪೋಷಕರು ತಮ್ಮ ಮಕ್ಕಳೇ ಗಾಂಜಾ ಸೇವನೆ ದಾಸರಾಗಿದ್ರೂ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಕ್ರೈಂ ರೇಟ್ ನಿಲ್ಲಿಸಲು ನಿರಂತರ ಪ್ರಯತ್ನ ನಮ್ಮದಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ. ಒಟ್ನಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರೋ ಜಿಲ್ಲೆಯಲ್ಲಿ ಅಪರಾಧಗಳು ಹೆಚ್ಚಾಗ್ತಿರೋದು ಜನರನ್ನ ದಂಗು ಬಡಿಸಿದೆ.