POCSO Act No Bail: ಪೋಕ್ಸೋ ಆರೋಪಿಯಿಂದ ಲಂಚ ಪಡೆಯುತ್ತಿದ್ದ ಅಭಿಯೋಜಕಿ ರೇಖಾ ಅರೆಸ್ಟ್, ಜಾಮೀನು ಕೊಡೋಲ್ಲ ಎಂದ ಕೋರ್ಟ್
ರೇಖಾ ಕೊಟ್ರಗೌಡ ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಎಸ್ಪಿಪಿ ರೇಖಾ ಕೊಟ್ರಗೌಡರವರು ದಾವಣಗೆರೆ ಜಿಲ್ಲಾ ಸೆಷನ್ಸ್ ಹಾಗೂ ವಿಶೇಷ ಲೋಕಾಯುಕ್ತ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ದಾವಣಗೆರೆ: ಲಂಚ (bribe) ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಅರೆಸ್ಟ್ ಆಗಿದ್ದ ಸರ್ಕಾರಿ ವಿಶೇಷ ಅಭಿಯೋಜಕಿಯಾಗಿರುವ (Special public prosecutor) ರೇಖಾ ಕೊಟ್ರಗೌಡ ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಎಸ್ಪಿಪಿ ರೇಖಾ ಕೊಟ್ರಗೌಡರವರು ದಾವಣಗೆರೆ ಜಿಲ್ಲಾ ಸೆಷನ್ಸ್ ಹಾಗೂ ವಿಶೇಷ ಲೋಕಾಯುಕ್ತ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಅವರು ಎಸ್ಪಿಪಿ ರೇಖಾ ಕೊಟ್ರಗೌಡರಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ. ಸರ್ಕಾರದ ಪರ ಲೋಕಾಯುಕ್ತ ಎಸ್ಪಿಪಿ ಪಿ.ವೈ.ಹಾದಿಮನಿ ವಾದ ಮಂಡಿಸಿದ್ದಾರೆ.
ಪೋಕ್ಸೋ ಪ್ರಕರಣದ ಆರೋಪಿಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿ ಆರೋಪಿಯಿಂದ 3 ಲಕ್ಷಕ್ಕೆ ಬೇಡಿಕೆ ಇಟ್ಟು ಫೆಬ್ರವರಿ ಐದರಂದು 1.87 ಲಕ್ಷ ಲಂಚ ಸ್ವೀಕರಿಸುವಾಗ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ದಾವಣಗೆರೆಯ ಪಿಜೆ ಬಡಾವಣೆ ನಿವಾಸದಲ್ಲಿ ಎಸ್ಪಿಪಿ ರೇಖಾ ಬಂಧನವಾಗಿತ್ತು. ಸದ್ಯ ಇವರ ಜಾಮೀನು ಅರ್ಜಿ ವಜಾಗೊಂಡಿದೆ.
ಇದನ್ನೂ ಓದಿ: ಪೋಕ್ಸೋ ಪ್ರಕರಣದ ಆರೋಪಿಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ
Published On - 11:28 am, Sat, 18 February 23