AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಬ್ರೇಕ್: ಆನ್‌ಲೈನ್‌ನಲ್ಲಿ ಭರ್ಜರಿ ಮಾರಾಟ; ವ್ಯಾಪಾರಿಗಳು ಆಕ್ರೋಶ

ಹುಬ್ಬಳ್ಳಿಯಲ್ಲಿ ಮಾಂಜಾದಾರದಿಂದ ಸರಣಿ ಅವಘಡಗಳು ಸಂಭವಿಸಿದ್ದು, ಓರ್ವ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಮಾಂಜಾ ಮಾರಾಟ ಮತ್ತು ಬಳಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಇದು ಗಾಳಿಪಟ ವ್ಯಾಪಾರಕ್ಕೆ ಭಾರಿ ಹೊಡೆತ ನೀಡಿದೆ. ಆದರೂ, ಆನ್‌ಲೈನ್‌ನಲ್ಲಿ ಮಾಂಜಾ ಸುಲಭವಾಗಿ ಲಭ್ಯವಿರುವುದು ಹೊಸ ಆತಂಕಕ್ಕೆ ಕಾರಣವಾಗಿದ್ದು, ಆನ್‌ಲೈನ್ ಮಾರಾಟಕ್ಕೂ ಬ್ರೇಕ್ ಹಾಕುವಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಬ್ರೇಕ್: ಆನ್‌ಲೈನ್‌ನಲ್ಲಿ ಭರ್ಜರಿ ಮಾರಾಟ; ವ್ಯಾಪಾರಿಗಳು ಆಕ್ರೋಶ
ಮಾಂಜಾ ದಾರ
ಸಂಜಯ್ಯಾ ಚಿಕ್ಕಮಠ
| Edited By: |

Updated on: Oct 24, 2026 | 9:43 PM

Share

ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲಿ ಮಾಂಜಾ ದಾರದಿಂದ ಸಾಲು ಸಾಲು ಅವಘಡ
  • ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಬ್ರೇಕ್ ಹಾಕಿದ ಪೊಲೀಸರು
  • ಆನಲೈನ್​ನಲ್ಲಿ ಸಿಗುತ್ತಿರುವ ಮಾಂಜಾ ದಾರ, ವ್ಯಾಪಾರಿಗಳು ಆಕ್ರೋಶ

ಹುಬ್ಬಳ್ಳಿ, ಅಕ್ಟೋಬರ್​​ 24: ನಗರದಲ್ಲಿ ಮಾಂಜಾ ದಾರದಿಂದ ಸಾಲು ಸಾಲು ಅವಘಡಗಳು ಸಂಭವಿಸಿದ ಬೆನ್ನಲ್ಲೇ ಪೊಲೀಸರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಮಾಂಜಾ ಮಾರಾಟ ಮಾಡುವವರು ಮತ್ತು ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ. ಆದರೆ ಇದೇ ಮಾಂಜಾ ದಾರ ಇದೀಗ ಗಾಳಿಪಟ ವ್ಯಾಪರಕ್ಕೆ ಹೊಡೆತ ನೀಡಿದೆ. ಇನ್ನೊಂದೆಡೆ ಆನಲೈನ್​ನಲ್ಲಿ ಮಾಂಜಾ ಸಿಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕ್ರಿಮಿನಲ್ ಕೇಸ್​​ ಹಾಕುವ ಎಚ್ಚರಿಕೆ ನೀಡಿದ ಪೊಲೀಸ್​ 

ಹುಬ್ಬಳ್ಳಿಯಲ್ಲಿ ಮೊನ್ನೆಯಷ್ಟೇ ಮಾಂಜಾದಾರಕ್ಕೆ ಸಿಲುಕಿ ವಿದ್ಯಾ ಗೌಡರ ಎನ್ನುವ 38 ವರ್ಷದ ಮಹಿಳೆ ಮೃತಪಟ್ಟಿದ್ದರು. ಇನ್ನು ಹುಬ್ಬಳ್ಳಿಯಲ್ಲಿ ಮಾಂಜಾದಾರದಿಂದ ಸಾಲು ಸಾಲು ಅವಘಡಗಳು ಸಂಭವಿಸಿವೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಮಾಂಜಾ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಮಾಂಜಾ ಜಪ್ತಿ ಮಾಡಿದ್ದಾರೆ. ಯಾರು ಮಾಂಜಾದಾರ ಮಾರಾಟ ಮಾಡುತ್ತಾರೋ, ಯಾರು ಬಳಕೆ ಮಾಡುತ್ತಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಇದೀಗ ಮಾಂಜಾಕ್ಕೆ ಬ್ರೇಕ್ ಬಿದ್ದಂತಾಗಿದೆ.

ಗಾಳಿಪಟ ವ್ಯಾಪಾರಕ್ಕೆ ಹೊಡೆತ

ಇದೇ ಮಾಂಜಾ ಇದೀಗ ಗಾಳಿಪಟ ವ್ಯಾಪಾರಕ್ಕೆ ಹೊಡೆತ ನೀಡಿದೆ. ಸೀಗೆ ಹುಣ್ಣಿಮೆ ಸಮಯದಲ್ಲಿ ಹೆಚ್ಚಿನ ಗಾಳಿಪಟಗಳು ಮಾರಾಟವಾಗುತ್ತಿದ್ದವು. ಅನೇಕ ಜನರು ಗಾಳಿಪಟ ಖರೀದಿಸಿ ತಮ್ಮ ಜಮೀನಿನಲ್ಲಿ ಹಾರಿಸುತ್ತಿದ್ದರು. ಆದರೆ ಮಾಂಜಾದಿಂದಾಗಿ ಹೆಚ್ಚಿನ ಜನರು ಗಾಳಿಪಟ ಖರೀದಿಸಲು ಹಿಂದೇಟು ಹಾಕ್ತಿದ್ದಾರೆ. ಮತ್ತೊಂದಡೆ ಪೊಲೀಸರು ಕೂಡ ಕೆಲ ದಿನಗಳ ಮಟ್ಟಿಗೆ ಗಾಳಿಪಟಗಳನ್ನು ಮಾರಾಟ ಮಾಡದಂತೆ ವ್ಯಾಪರಸ್ಥರಿಗೆ ಸೂಚನೆ ನೀಡಿದ್ದಾರಂತೆ. ಹೀಗಾಗಿ ವ್ಯಾಪರವಾಗುತ್ತದೆ ಅಂತ ತಯಾರಿಸಿದ್ದ ಸಾವಿರಾರು ಗಾಳಿಪಟ ಹಾಗೆ ಉಳಿದಿವೆ. ಗಾಳಿಪಟಗಳನ್ನೇ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದ ಅನೇಕರು ಇದೀಗ ಕಂಗಾಲಾಗಿದ್ದಾರೆ.

ಆನ್ಲೈನ್​ನಲ್ಲಿ ಎಗ್ಗಿಲ್ಲದೆ ಮಾಂಜಾ ದಾರ ಮಾರಾಟ 

ಇತ್ತ ಪೊಲೀಸರ ಕಠಿಣ ಕ್ರಮದಿಂದಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಾಂಜಾ ದಾರಕ್ಕೆ ಬ್ರೇಕ್ ಬಿದ್ದಿದೆ. ವ್ಯಾಪರಸ್ಥರು ಕೇಸ್ ಭಯದಿಂದ ಮಾಂಜಾ ಮಾರಾಟ ಮಾಡುಲು ಹಿಂದೇಟು ಹಾಕ್ತಿದ್ದಾರೆ. ಬದಲಾಗಿ ಹತ್ತಿ ದಾರವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಇದೇ ಮಾಂಜಾ ಆನಲೈನ್​ನಲ್ಲಿ ಸಿಗುತ್ತಿದೆ. ಸಾವಿರ ರೂ. ನೀಡಿದರೆ ಅನೇಕ ಆನ್ಲೈನ್ ಮಾರ್ಕೆಟ್​ನಲ್ಲಿ ಸುಲಭವಾಗಿ ಮಾಂಜಾ ದಾರ ಸಿಗುತ್ತಿದ್ದು, ಕೆಲವರು ಆನಲೈನ್ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದಾರೆ.

ಆನಲೈನ್ ಮಾರಾಟಕ್ಕೂ ಬ್ರೇಕ್ ಹಾಕುವಂತೆ ವ್ಯಾಪಾರಸ್ಥರ ಆಗ್ರಹ 

ರಾಜ್ಯದಲ್ಲಿ ಮಾಂಜಾ ದಾರ ಮಾರಾಟ ಮತ್ತು ಬಳಕೆಗೆ ಸರ್ಕಾರ ಸಂಪೂರ್ಣವಾಗಿ ನಿಷೇಧ ಹಾಕಿದೆ. ಆದರೆ ಆನಲೈನ್ ಮಾರಾಟಕ್ಕೆ ಯಾವುದೇ ಬ್ರೇಕ್ ಹಾಕಿಲ್ಲ. ಹೀಗಾಗಿ ‘ಆನಲೈನ್ ಮಾರಾಟಕ್ಕೂ ಬ್ರೇಕ್ ಹಾಕಬೇಕು. ಎಲ್ಲೇ ಮಾಂಜಾ ಸಿಕ್ಕರೂ ಸ್ಥಳೀಯ ವ್ಯಾಪರಸ್ಥರು ಮಾರಾಟ ಮಾಡಿದ್ದಾರೆ ಅಂತ ತಿಳಿದುಕೊಳ್ಳುತ್ತಾರೆ. ನಾವು ಮಾಂಜಾ ಮಾರಾಟ ನಿಲ್ಲಿಸಿ ಅನೇಕ ತಿಂಗಳುಗಳೇ ಆಗಿವೆ. ಆದರೂ ಆನಲೈನ್​ನಲ್ಲಿ ಸಿಗುತ್ತಿರುವುದರಿಂದ  ಹುಬ್ಬಳ್ಳಿ-ಧಾರವಾಡದಲ್ಲಿ ಮಾಂಜಾ ಸಿಗುತ್ತಿದೆ. ಈ ಬಗ್ಗೆ ಸರ್ಕಾರ ಮತ್ತು ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ವ್ಯಾಪಾರಸ್ಥರಾದ ತೌಸೀಪ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಾಂಜಾ ದಾರಕ್ಕೆ ಹುಬ್ಬಳ್ಳಿಯಲ್ಲಿ ಮಹಿಳೆ ಬಲಿ: ಸ್ಕೂಟಿಯಲ್ಲಿ ಹೋಗ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಕುತ್ತಿಗೆ ಕಟ್

ಇನ್ನು ಹುಬ್ಬಳ್ಳಿಯಲ್ಲಿ ಇಂದು ಕೂಡ ಅನೇಕ ಕಡೆ ಮಾಂಜಾ ದಾರ ಮತ್ತು ಗಾಳಿಪಟವನ್ನು ಸಂಗ್ರಹಿಸಿ ಯುವಕರು ಬೆಂಕಿ ಹಚ್ಚಿದ್ದಾರೆ. ಆ ಮೂಲಕ ಜೀವ ತೆಗೆಯುವ ಮಾಂಜಾ ಬಳಕೆ ಮಾಡಲ್ಲಾ ಅಂತ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಆನಲೈನ್​ನಲ್ಲಿ ಮಾಂಜಾ ಸಿಗುತ್ತಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ