ರಾಜ್ಯದಲ್ಲಿ ಕೊವಿಡ್-19 ಸಾವುಗಳಲ್ಲಿ ಇಳಿಮುಖ, ಹೊಸ ಪ್ರಕರಣಗಳು ಮತ್ತೆ ಏರಿಕೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಸಿಕ್ಕಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 23 ಜನ ಸತ್ತಿದ್ದು ಹೊಸದಾಗಿ 2,584 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,453 ಜನ ಮರಣಿಸಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 8,53,796ಕ್ಕೇರಿದೆ. ಸೋಂಕಿತರ ಪೈಕಿ 8,11,581 ಜನ ಗುಣಮುಖರಾಗಿದ್ದಾರೆ ಮಿಕ್ಕಿದ 30,743 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊವಿಡ್-19 ವ್ಯಾಧಿಗೆ 8 ಜನ ಬಲಿಯಾಗಿದ್ದಾರೆ ಮತ್ತು […]

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಸಿಕ್ಕಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 23 ಜನ ಸತ್ತಿದ್ದು ಹೊಸದಾಗಿ 2,584 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,453 ಜನ ಮರಣಿಸಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 8,53,796ಕ್ಕೇರಿದೆ.
ಸೋಂಕಿತರ ಪೈಕಿ 8,11,581 ಜನ ಗುಣಮುಖರಾಗಿದ್ದಾರೆ ಮಿಕ್ಕಿದ 30,743 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊವಿಡ್-19 ವ್ಯಾಧಿಗೆ 8 ಜನ ಬಲಿಯಾಗಿದ್ದಾರೆ ಮತ್ತು ಒಂದೇ ದಿನ 1,665 ಜನರಲ್ಲಿ ಸೋಂಕು ದೃಢಪಟ್ಟಿದೆ. ನಗರದಲ್ಲಿ ಕೊರೊನಾ ವೈರಸ್ ಈವರೆಗೆ 3,977 ಜನ ಆಹುತಿ ಪಡೆದಿದೆ ಮತ್ತು ಸೋಂಕು ಪೀಡಿತರ ಸಂಖ್ಯೆ 3,53,146 ತಲುಪಿದೆ.
ಸೋಂಕಿತರ ಪೈಕಿ 3,31,296 ಜನರು ಗುಣಮುಖರಾಗಿ ಮನೆಗಳಿಗೆ ವಾಪಸ್ಸು ಹೋಗಿದ್ದಾರೆ ಹಾಗೂ ಉಳಿದ17,872 ಜನರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.
Published On - 10:19 pm, Wed, 11 November 20




