ಗದಗ: ಮದವೇರಿದ ಆಕಳ ಡೆಡ್ಲಿ ಅಟ್ಯಾಕ್​ಗೆ 70 ವರ್ಷದ ವೃದ್ಧ ಬಲಿ!

ಗದಗ-ಬೆಟಗೇರಿ ಅವಳಿ ನಗರದಲ್ಲಿ ಆಕಳು-ಗೂಳಿಗಳ ಹಾವಳಿ ಮಿತಿಮೀರಿದೆ. ಹಾದಿ ಬೀದಿಯಲ್ಲಿ ಕಂಡ ಕಂಡವರ ಮೇಲೆ  ದಾಳಿ ಮಾಡುತ್ತಿದ್ದು, ಇಂದು ಓರ್ವ ವೃದ್ಧಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಈ ಘಟನೆಯಿಂದ ಅವಳಿ ನಗರದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ನಗರದಲ್ಲಿ ಅಡ್ಡಾಡಕ್ಕೂ ಭಯ ಪಡುತ್ತಿದ್ದಾರೆ. ಅದ್ರಲ್ಲೂ ಬೆಟಗೇರಿ ಪ್ರದೇಶದಲ್ಲಿ ಬಿಡಾಡಿ ದನಗಳ ಅಟ್ಟಹಾಸ ಮಿತಿಮೀರಿದೆ. ಮದವೇರಿದ ಆಕಳವೊಂದು ಅಜ್ಜನ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಒದ್ದಾಡಿ ವೃದ್ದ ಪ್ರಾಣ ಬಿಟ್ಟಿದ್ದಾನೆ.

Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 31, 2024 | 7:38 PM

ಗದಗ, ಜು.31: ಇಂದು(ಬುಧವಾರ) ಬೆಳಗ್ಗೆ ಬೆಟಗೇರಿ(Betageri)ಯಲ್ಲಿ ಘನಘೋರ ಘಟನೆ ನಡೆದಿದೆ. ವಾಯುವಿಹಾರಕ್ಕೆ ಆಗಮಿಸಿದ 70 ವೃದ್ಧ ಶಂಕ್ರಪ್ಪ ಎಂಬುವವರಿಗೆ ಮದವೇರಿದ ಆಕಳೊಂದು ತಿವಿದಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಇಡೀ ಗದಗ-ಬೆಟಗೇರಿ ಅವಳಿ ನಗರದ ಜನರನ್ನು ಬೆಚ್ಚಿಬಿಳಿಸಿದೆ. ವೃದ್ಧನ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಜನ ಜಮಾಯಿಸಿ, ನಗರಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘

ಬೆಟಗೇರಿ ಪ್ರದೇಶದಲ್ಲಿ ನೂರಾರು ಬಿಡಾಡಿ ದನಗಳು ನಡುರಸ್ತೆಯಲ್ಲೇ ಕುಳಿತುಕೊಳ್ಳುತ್ತವೆ. ಇದರಿಂದ ಸಂಚಾರಕ್ಕೆ ನಿತ್ಯವೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲ, ಪ್ರತಿನಿತ್ಯವೂ ಬಿಡಾಡಿ ದನಗಳ ದಾಳಿಗೆ ಜನ್ರು ಒಳಗಾಗುತ್ತಿದ್ದಾರೆ. ಈ ಹಿಂದೆಯು ಓರ್ವ ಗೂಳಿ ದಾಳಿಗೆ ಪ್ರಾಣ ಬಿಟ್ಟಿದ್ದ. ಆಗ ರೊಚ್ಚಿಗೆದ್ದ ಜನರು ನಗರಸಭೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಡಾಡಿ ದನಗಳ ಸಾಗಾಟ ಮಾಡಿ ಮುಕ್ತಿ ನೀಡಿ ಎಂದು ನಗರಸಭೆಗೆ ಸಾರ್ವಜನಿಕರು ಹತ್ತಾರು ಬಾರಿ ಮನವಿ ಮಾಡಿದ್ಧಾರೆ. ಆದ್ರೆ, ನಗರಸಭೆ ಆಡಳಿತವಾಗಲೀ, ಜಿಲ್ಲಾಡಳಿತವಾಗಲೀ ಕ್ಯಾರೇ ಎಂದಿಲ್ಲ. ಹೀಗಾಗಿ ಇವತ್ತು ಮತ್ತೊಂದು ಬಲಿಯಾಗಿದೆ. ಈ ಸಾವಿಗೆ ನಗರಸಭೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕ ಮಗುವನ್ನು ಕೂರಿಸಿಕೊಂಡು ಸ್ಟಂಟ್ ಮಾಡುವಾಗ ಬೈಕ್​ಗೆ ಅಡ್ಡಬಂದ ಗೂಳಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಘಟನೆ ಖಂಡಿಸಿ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ನಗರಸಭೆ ಆಯುಕ್ತ ಪ್ರಶಾಂತ್ ವರಗಪ್ಪನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಆಕಳು ತಿವಿದಾಗ ವೃದ್ಧ ಇನ್ನೂ ಜೀವಂತವಾಗಿದ್ದ. ಆದ್ರೆ, ಆ್ಯಂಬುಲೆನ್ಸ್ ಗೆ ಮಾಹಿತಿ ನೀಡಿದ್ರೂ ಒಂದೂವರೆ ಗಂಟೆ ತಡವಾಗಿ ಆಗಮಿಸಿದೆ. ಹೀಗಾಗಿ ಆ್ಯಂಬುಲೆನ್ಸ್ ಬರುಷ್ಟರಲ್ಲಿ ವೃದ್ಧ ಉಸಿರುಚೆಲ್ಲಿದ್ದಾನೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಅಥವಾ ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿ ಗೋಶಾಲೆ ಸ್ಥಾಪನೆ ಮಾಡಿ ಅಲ್ಲಿಯಾದರೂ ಬೀಡಾಡಿ ದನಗಳು ಬೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳ ಅಟ್ಯಾಕ್​ಗೆ ಓರ್ವ ವೃದ್ದ ಬಲಿಯಾಗಿದ್ದು, ಇನ್ನಾದರೂ ನಗರಸಭೆ ಎಚ್ಚೆತ್ತಗೊಂಡು ಬಿಡಾಡಿಗಳ ಹಾವಳಿಯಿಂದ ಜನರ ರಕ್ಷಣೆ ಮಾಡುತ್ತಾ ಕಾದುನೋಡಬೇಕಿದೆ‌‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ