ಗದಗ ನಗರಸಭೆ ಸದಸ್ಯನಿಗೆ ಢವಢವ; ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯ್ಕೆ ಆರೋಪ

ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಗದಗ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಅನ್ನೋ ಆರೋಪ ಹೊತ್ತಿದ್ದ ನಗರದ 22ನೇ ವಾಡಿರ್ನ ಬಿಜೆಪಿ ನಗರಸಭೆ ಸದಸ್ಯ ಸಿದ್ದಲಿಂಗಪ್ಪ(ಅನಿಲ್) ಅಬ್ಬಿಗೇರಿ ಅವರ ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶಿಸಿದ್ದು, ಸದಸ್ಯತ್ವ ರದ್ದಾಗುವ ಭೀತಿ ಎದುರಾಗಿದೆ.

ಗದಗ ನಗರಸಭೆ ಸದಸ್ಯನಿಗೆ ಢವಢವ; ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯ್ಕೆ ಆರೋಪ
ಗದಗ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 07, 2023 | 9:44 PM

ಗದಗ, ಸೆ.07: ಬಿಜೆಪಿ ನಗರ ಮಂಡಳ ಅಧ್ಯಕ್ಷರೂ ಆಗಿರುವ ಅನಿಲ್ ಅಬ್ಬಿಗೇರಿ ಎಂಬುವವರು ಗದಗ ನಗರಸಭೆ (Gadag Muncipal Council) ಚುನಾವಣೆಯಲ್ಲಿ 22ನೇ ವಾಡಿರ್ನಿಂದ ಸ್ಪಧಿರ್ಸಿ, ಎದುರಾಳಿ ಪಕ್ಷೇತರ ಅಭ್ಯರ್ಥಿ ಮಹಾಲಕ್ಷ್ಮೀ ಡಂಬಳ ಎಂಬುವರ ವಿರುದ್ಧ 131 ಅಂತರದಿಂದ ಗೆಲವು ಸಾಧಿಸಿದ್ದರು. ಆದ್ರೆ, ಬಿಜೆಪಿ ಸದಸ್ಯ ಸಿದ್ದಲಿಂಗಪ್ಪ ಅಬ್ಬಿಗೇರಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಜಾತಿ ಪ್ರಮಾಣ ಪತ್ರದ ನೈಜತೆ ಕುರಿತು ಮಹಾಲಕ್ಷ್ಮೀ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಮೊರೆ ಹೋಗಿದ್ರು. ಆದ್ರೆ, ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಅರ್ಜಿ ವಜಾ ಮಾಡಿತ್ತು. ಬಳಿಕ ಮಹಾಲಕ್ಷ್ಮೀ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.

ಸಿದ್ದಲಿಂಗಪ್ಪ ಅಬ್ಬಿಗೇರಿ ಹಾಗೂ ಕುಟುಂಬದವರು 2ಎ (ಗಾಣಿಗ) ಜಾತಿಗೆ ಒಳಪಟ್ಟಿಲ್ಲ. ಅವರು ಹಿಂದೂ ಲಿಂಗಾಯತರು ಎಂದು ಮಹಾಲಕ್ಷ್ಮೀ ಅವರ ಆರೋಪವಾಗಿತ್ತು. ಕಳೆದ ಜು.7 ರಂದು ತಹಶೀಲ್ದಾರ್​ ನೇತೃತ್ವದಲ್ಲಿ ನಡೆದ ಜಂಟಿ ಸ್ಥಳ ತನಿಖಾ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿತ್ತು. ವರದಿ ಅನ್ವಯ ಸಿದ್ದಲಿಂಗಪ್ಪ (ಅನಿಲ) ಅಬ್ಬಿಗೇರಿ ಅವರ 2ಎ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ರದ್ದು ಮಾಡಿ ಆದೇಶಿಸಿದ್ದಾರೆ.

ಇದನ್ನೂ ಓದಿ:ಗದಗನಲ್ಲಿ ವೀರಭದ್ರೇಶ್ವರ ಜಾತ್ರೆಯ ಸಂಭ್ರಮ, ಸಡಗರ! ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿ ಪರಾಕಾಷ್ಟೆ ಮೆರೆದ ಭಕ್ತರು

ದಾಖಲೆ ಸಮೇತ ನ್ಯಾಯಾಲಯಕ್ಕೆ ಮೊರೆ; ಜಾತಿ ಪ್ರಮಾಣ ರದ್ದು ಮಾಡಿ ಡಿಸಿ ಆದೇಶ

ಮಹಾಲಕ್ಷ್ಮೀ ಡಂಬಳ ಸಿದ್ದಲಿಂಗಪ್ಪ ಅಬ್ಬಿಗೇರಿ ಖೊಟ್ಟಿ ಜಾತಿ ಪ್ರಮಾಣ ಪಡೆದಿದ್ದಾರೆ. ಇವರು ಮೂಲತಃ ಹಿಂದೂ ಲಿಂಗಾಯತರು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ಅಬ್ಬಿಗೇರಿ ಕುಟಂಬ ಸದಸ್ಯರ ಜಾತಿ ದಾಖಲೆಗಳು ಒದಗಿಸಿದ್ರು. ಸದಸ್ಯ ಸಿದ್ದಲಿಂಗಪ್ಪ ಅಬ್ಬಿಗೇರಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜ್ ಗಳಲ್ಲಿ ದಾಖಲಾದ ಜಾತಿ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಇದೆ ಎಂದು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದ್ರು. ಸುದೀರ್ಘ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣ ರದ್ದು ಮಾಡಿ ಆದೇಶ ಮಾಡಿದ್ದಾರೆ. ಹಿಂದೂ ಗಾಣಿಗ ಎಂದು ಸುಳ್ಳು ಪ್ರಮಾಣ ಪತ್ರ

ವಾರ್ಡ್ 28 “ಅ” ವರ್ಗಕ್ಕೆ ಮೀಸಲಾಗಿತ್ತು. ಆದ್ರೆ, ಸಿದ್ದಲಿಂಗಪ್ಪ ಅಬ್ಬಿಗೇರಿ‌ ಮೂಲಜಾತಿ ಹಿಂದೂ ಲಿಂಗಾಯತವಾಗಿದ್ದು, “3ಬಿ” ಅಲ್ಲಿ ಬರುತ್ತದೆ. ಸಿದ್ದಲಿಂಗಪ್ಪ ಅಬ್ಬಿಗೇರಿ‌ ಪ್ರಭಾವ ಬಳಸಿ ಹಿಂದೂ ಗಾಣಿಗ ಅಂತ ಸುಳ್ಳು ಜಾತಿ ಪ್ರಮಾಣ ಪಡೆದಿರುವ ಆರೋಪ ಇತ್ತು. ಪ್ರತಿಯೊಂದು ಪರಿಶೀಲನೆ ಮಾಡಿ ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಜಿಲ್ಲಾಧಿಕಾರಿಗಳು ಸೆಪ್ಟಂಬರ್ 7ರಂದು ಆದೇಶ ಮಾಡಿದ್ದಾರೆ.

ಇದನ್ನೂ ಓದಿ:ಗದಗ: ಮಳೆ ನಂಬಿ ಲಕ್ಷಾಂತರ ಖರ್ಚು ಮಾಡಿ ಬ್ಯಾಡಗಿ ಮೆಣಸು ಬೆಳೆದು ಗೋಳಾಡುತ್ತಿರುವ ರೈತ

ರಾಜಕೀಯ ಬದಲಾವಣೆ

ಆದೇಶಕ್ಕೆ ಪೂರಕವಾಗಿ ಮಹಾಲಕ್ಷ್ಮೀ ಡಂಬಳ ಅವರು ಅನಿಲ ಅಬ್ಬಿಗೇರಿ ಅವರ ನಗರಸಭೆ ಸದಸ್ಯತ್ವ ರದ್ದು ಕೋರಿ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ ಇದೆ. ಗದಗ ನಗರಸಭೆಯಲ್ಲಿ ಸಧ್ಯ 17 ಬಜೆಪಿ ಸದಸ್ಯರು, 16 ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಕಲಿ ಜಾತಿ ಪ್ರಮಾಣ ಪತ್ರದ ಪ್ರಕರಣ ಈಗ ನಗರಸಭೆಯಲ್ಲಿ ರಾಜಕೀಯ ಬದಲಾವಣೆಗೆ ಅನುವು ಮಾಡಿಕೊಟ್ಟಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ