ಗದಗ: ಬಡವರಿಗೆ ಕಸ ಮಿಶ್ರಿತ ಕಳಪೆ ಜೋಳದ ‘ಗ್ಯಾರಂಟಿ’, ಸಾರ್ವಜನಿಕರಿಂದ ಆಕ್ರೋಶ

ಗದಗ ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಜೋಳವನ್ನು ಪಡಿತರದಲ್ಲಿ ವಿತರಿಸಲಾಗುತ್ತಿದೆ ಎಂದು ಬಡವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೋಳದಲ್ಲಿ ಕಸ, ಕಡ್ಡಿ ಮತ್ತು ಹೊಟ್ಟು ಇದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವ ಭಯವಿದೆ. ಸರ್ಕಾರದ ಈ ಕ್ರಮಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುಣಮಟ್ಟದ ಜೋಳ ವಿತರಿಸುವಂತೆ ಆಗ್ರಹಿಸಿದ್ದಾರೆ.

ಗದಗ: ಬಡವರಿಗೆ ಕಸ ಮಿಶ್ರಿತ ಕಳಪೆ ಜೋಳದ ‘ಗ್ಯಾರಂಟಿ’, ಸಾರ್ವಜನಿಕರಿಂದ ಆಕ್ರೋಶ
ಗದಗ: ಬಡವರಿಗೆ ಕಸ ಮಿಶ್ರಿತ ಕಳಪೆ ಜೋಳದ ‘ಗ್ಯಾರಂಟಿ’, ಸಾರ್ವಜನಿಕರಿಂದ ಆಕ್ರೋಶ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Ganapathi Sharma

Updated on: Oct 26, 2024 | 10:48 AM

ಗದಗ, ಅಕ್ಟೋಬರ್ 26: ಉತ್ತರ ಕರ್ನಾಟಕದಲ್ಲಿ ರೊಟ್ಟಿ ತಿಂದರೆ ಗಟ್ಟಿ ಆಗುತ್ತಾರೆ ಎಂಬ ಮಾತಿದೆ. ಆದರೆ, ಸರ್ಕಾರ ಕೊಡುವ ಜೋಳದ ರೊಟ್ಟಿ ತಿಂದರೆ ಆಸ್ಪತ್ರೆ ಅಂತೂ ಗ್ಯಾರಂಟಿ. ದನಗಳು ಕೂಡ ತಿನ್ನದಂಥ ಕೆಟ್ಟ ಕಳಪೆ ಜೋಳವನ್ನು ಬಡವರಿಗೆ ಸರ್ಕಾರ ನೀಡುತ್ತಾ ಇದೆ ಎಂಬ ಆರೋಪ ಕೇಳಿಬಂದಿದೆ. ಇದು ಬಡವರಿಗಾಗಿ ಕಾಂಗ್ರೆಸ್ ಸರ್ಕಾರ ನೀಡಿದ ‘ಗ್ಯಾರಂಟಿ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಬೆಸ್ಟ್ ಕೆಲಸ ಎಂದು ಸರ್ಕಾರದ ವಿರುದ್ಧ ವೃದ್ಧೆಯೊಬ್ಬರು ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಡಿತರ ಅಂಗಡಿ ಮಾಲೀಕರು ದೂಳು, ಕಸ, ಜಿಡ್ಡು ಹಿಡಿದ ಜೋಳ ವಿತರಣೆ ಮಾಡುತ್ತಿದ್ದಾರೆ. ಕಳಪೆ ಜೋಳ ನೋಡಿ ಬಡ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ವಿದ್ಯಮಾನ ನಡೆದಿದೆ. ಜೋಳದ ಚೀಲದಲ್ಲಿ ಬರೀ ಕಸ, ಕಡ್ಡಿ, ಹೊಟ್ಟು ಭರ್ಜರಿಯಾಗಿದೆ. ತಿನ್ನಲು ಯೋಗ್ಯವಲ್ಲದ ಕಳಪೆ ಜೋಳ ವಿತರಣೆ ಮಾಡಲಾಗುತ್ತಿದೆ. ಕಳಪೆ ಜೋಳ ವಿತರಣೆ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಸಾರ್ವಜನಿಕರು ಆಹಾರ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನ್ಯಾಯಬೆಲೆ ಅಂಗಡಿ ಅವರನ್ನು ಪ್ರಶ್ನಿಸಿದಾಗ, ಸರ್ಕಾರ ಏನು ಕೊಟ್ಟಿದೆಯೋ ಅದನ್ನು ನಾವು ಕೊಡುತ್ತೇವೆ ಅಷ್ಟೆ ಎಂದಿದ್ದಾರೆ. ಮತ್ತೊಂದೆಡೆ, ಸರ್ಕಾರ ನೀಡಿದ ಜೋಳದ ರೊಟ್ಟಿ ತಿಂದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ ಅಂತ ಸರ್ಕಾರದ ವಿರುದ್ಧ ಬಡ ಮಹಿಳೆಯರು ಕಿಡಿಕಾರಿದ್ದಾರೆ.

ಪಡಿತರ ಧಾನ್ಯ ಇಲ್ಲದೇ ಬದುಕು ಇಲ್ಲ. ಬಡವರು ಹೇಗಾದರೂ ಖರೀದಿ ಮಾಡಲೇಬೇಕು. ಆದರೆ, ಸರ್ಕಾರ ಉಚಿತ ನೀಡುವ ಪಡಿತರ ಜೋಳವನ್ನು ಕಳಪೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಬಡವರ ಬಗ್ಗೆ ಇರುವ ಕಾಳಜಿ ಇದುವೆಯಾ ಎಂದು ಸರ್ಕಾರಕ್ಕೆ ಮಹಿಳೆಯರು ಖಡಕ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ದೀಪಾವಳಿಗೆ ಖಾಸಗಿ ಬಸ್‌ ದುಬಾರಿ: ಮಾಲೀಕರಿಗೆ ಸಾರಿಗೆ ಇಲಾಖೆಗೆ ಖಡಕ್ ಎಚ್ಚರಿಕೆ!

ಸರ್ಕಾರ ಕಳಪೆ ಜೋಳ ವಿತರಣೆ ಮಾಡಿದೆ. ಒಂದು ವೇಳೆ ಈ ಜೋಳದ ಜೊಟ್ಟಿ ತಿಂದು ಬಡವರ ಆರೋಗ್ಯದಲ್ಲಿ ಏರುಪೇರಾದರೆ ಸರ್ಕವೇ ಹೊಣೆ. ಹೊಟ್ಟು, ಕಸ ಮಿಶ್ರಿತ ಜೋಳ ವಿತರಣೆ ಕೂಡಲೇ ನಿಲ್ಲಿಸಬೇಕು ಎಂದು ಜನ ಆಗ್ರಹಿಸಿದ್ದಾರೆ. ಇನ್ನಾದರೂ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಕಳಪೆ ಜೋಳ ವಿತರಣೆ ಆಗಿದೆಯೋ ಅವೆಲ್ಲವನ್ನು ವಾಪಸ್ ಪಡೆದು ಗುಣಮಟ್ಟದ ಜೋಳ ವಿತರಣೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ