AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mulgund Panchayath: ಗ್ರಾಮಸ್ಥರಿಂದ ಪಟ್ಟಣ ಪಂಚಾಯತ್​ ಕಚೇರಿ ಮುಂದೆ ಶವಸಂಸ್ಕಾರ ಮಾಡುವ ಎಚ್ಚರಿಕೆ!

last rites: ಗ್ರಾಮದ ಪಕ್ಕದಲ್ಲೆ ಸ್ಮಶಾನಕ್ಕಾಗಿ ಭೂಮಿ ಖರೀದಿಸಿ ಎಂದು ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ, ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಕೊಟ್ಟಿದ್ದು ಈ ವರೆಗೂ ಬೇಡಿಕೆಗೆ ಅವರು ಸ್ಪಂದಿಸಿಲ್ಲ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯತಿ ಮುಂದೆ ಶವ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಹೋನ್ನೇಶ ಜೋಗಿ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

Mulgund Panchayath: ಗ್ರಾಮಸ್ಥರಿಂದ ಪಟ್ಟಣ ಪಂಚಾಯತ್​ ಕಚೇರಿ ಮುಂದೆ ಶವಸಂಸ್ಕಾರ ಮಾಡುವ ಎಚ್ಚರಿಕೆ!
ಗ್ರಾಮಸ್ಥರಿಂದ ಪಟ್ಟಣ ಪಂಂಚಾಯತ್​ ಕಚೇರಿ ಮುಂದೆ ಶವಸಂಸ್ಕಾರ ಮಾಡುವ ಎಚ್ಚರಿಕೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 03, 2022 | 9:44 AM

ಗದಗ: ಗದಗ ತಾಲೂಕಿನ ಮುಳಗುಂದ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ (mulgund panchayath) ಬರುವ ವಾರ್ಡ ಸಂಖ್ಯೆ 18 ರ ಶೀತಾಲಹರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲ, ಹೀಗಾಗಿ ಮುಳ್ಳಿನ ಪೊದೆಯಲ್ಲಿ ಶವ ಸಂಸ್ಕಾರ ಮಾಡುವುದು ಅನಿವಾರ್ಯತೆ ಎದುರಾಗಿದೆ. ಮುಳಗುಂದ ಪಟ್ಟಣದಿಂದ 4 ಕಿ.ಮೀ. ದೂರದಲ್ಲಿರುವ ಈ ಪುಟ್ಟ ಗ್ರಾಮ 200ಕ್ಕೂ ಹೆಚ್ಚು ಮನೆಗಳನ್ನ ಹೊಂದಿದೆ. ಇಲ್ಲಿ ಯಾರಾದರೂ ನಿಧನರಾದ್ರೆ ಶವ ಸಂಸ್ಕಾರಕ್ಕೆ ( place for last rites) ನಿಗದಿತ ಜಾಗ ಮಾತ್ರ ಲಭ್ಯವಿಲ್ಲ. ಊರ ಪಕ್ಕದ ಗುಡ್ಡದ ಮುಳ್ಳಿನ ಕಂಟಿಗಳ ಪೊದೆಯಲ್ಲಿ ಶವಗಳನ್ನ ಸುಡಲಾಗುತ್ತಿದೆ. ಕೆಲವು ಸಮುದಾಯಗಳಲ್ಲಿ ಹೂಳುವ ಪದ್ದತಿ ಇದ್ದರೂ ಸಹ ಕಲ್ಲಿನ ಗುಡ್ಡದಲ್ಲಿ ಗುಣಿ ತೋಡಲು ಸಾಧ್ಯವಾಗದೆ ಸುಡುವುದು ಸಾಮಾನ್ಯವಾಗಿದೆ.

ಶೀತಾಲಹರಿ ಗ್ರಾಮದಲ್ಲಿ ಸ್ಮಶಾನಕ್ಕೆ ಇಲ್ಲ ಜಾಗ, ಮುಳ್ಳಿನ ಪೊದೆಯಲ್ಲಿ ಶವ ಸಂಸ್ಕಾರ: ಈ ಜಾಗ ಗಲೀಜು ಗಲೀಜಾಗಿದ್ದು, ಮುಳ್ಳು ಕಂಟಿಗಳಿಂದ ಕೂಡಿದೆ. ಶವ ತೆಗೆದುಕೊಂಡು ಹೋಗುವ ಮೊದಲು ಜೆಸಿಬಿ ಬಳಸಿ ದಾರಿ ಮಾಡಿದ ನಂತರವಷ್ಟೇ ಹೋಗಲು ಸಾಧ್ಯ. ಮಳೆಗಾಲದಲ್ಲಿ ಶವ ಸಂಸ್ಕಾರ ಮಾಡುವುದೇ ಸವಾಲಿನ ಕೆಲಸವಾಗಿದೆ. ನಮ್ಮ ಗ್ರಾಮದ ಪಕ್ಕದಲ್ಲೆ ಸ್ಮಶಾನಕ್ಕಾಗಿ ಭೂಮಿ ಖರೀದಿಸಿ ಎಂದು ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ, ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಕೊಟ್ಟಿದ್ದು ಈ ವರೆಗೂ ಬೇಡಿಕೆಗೆ ಅವರು ಸ್ಪಂದಿಸಿಲ್ಲ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯತಿ ಮುಂದೆ ಶವ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಹೋನ್ನೇಶ ಜೋಗಿ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

ಶೀತಾಲಹರಿ ಹತ್ತಿರ 2 ಎಕರೆ 35 ಗುಂಟೆ ಜಮೀನಿನ ಮಾಲೀಕರು ಸ್ಮಶಾನಕ್ಕಾಗಿ ತಮ್ಮ ಜಮೀನು ಮಾರಾಟ ಮಾಡುವುದಾಗಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಜನವರಿ 2021 ರಲ್ಲಿ ಗದಗ ತಹಶೀಲ್ದಾರರಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಅಲ್ಲದೇ ಈಗಿರುವ ಜಾಗ ಕಂದಾಯ ಇಲಾಖೆಯದ್ದಾಗಿದ್ದು ಅದಿನ್ನೂ ಪರಿಶೀಲನೆ ಹಂತದಲ್ಲಿದೆ. ಶೀಘ್ರದಲ್ಲೆ ಸ್ಮಶಾನ ಜಾಗ ಗುರುತಿಸಲಾಗುವದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ತಿಳಿಸಿದ್ದಾರೆ.

Also Read: MLA Preetham Gowda: ಕಲ್ಲಿನಿಂದ ಹೊಡೆದು ಶಾಸಕ ಪ್ರೀತಂಗೌಡ ಭಾವಚಿತ್ರ ಹಾನಿ

Published On - 9:43 am, Mon, 3 January 22

ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್