ಬಿಎಂಟಿಸಿ ಸಿಬ್ಬಂದಿಗಳಲ್ಲಿ ಹೃದಯಾಘಾತದಿಂದ ಸಾವು ಹೆಚ್ಚಳ: ಸಾವಿಗೆ ಕಾರಣವಾಯ್ತಾ ಡೇ ಆ್ಯಂಡ್​ ನೈಟ್ ಡ್ಯೂಟಿ?

ಇತ್ತೀಚಿನ ವರ್ಷಗಳಲ್ಲಿ ಹಲವು ಬಿಎಂಟಿಸಿ ನೌಕರರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ಅತಿಯಾದ ಕೆಲಸ ಮತ್ತು ಒತ್ತಡ ಕಾರಣ ಎನ್ನಲಾಗುತ್ತಿದೆ. ಸ್ಥಳದಲ್ಲೇ ಬಿಎಂಟಿಸಿಯ ಡ್ರೈವರ್ ಮೃತಪಟ್ಟಿದ್ದ, ಆದರೆ ಕಿರಣ್ ಸಾವಿಗೆ ಬಿಎಂಟಿಸಿ ಅಧಿಕಾರಿಗಳ ಒತ್ತಡವೇ ಕಾರಣ ಅನ್ನೋ ಆರೋಪ ಕೇಳಿ ಬಂದಿದೆ.

ಬಿಎಂಟಿಸಿ ಸಿಬ್ಬಂದಿಗಳಲ್ಲಿ ಹೃದಯಾಘಾತದಿಂದ ಸಾವು ಹೆಚ್ಚಳ: ಸಾವಿಗೆ ಕಾರಣವಾಯ್ತಾ ಡೇ ಆ್ಯಂಡ್​ ನೈಟ್ ಡ್ಯೂಟಿ?
ಬಿಎಂಟಿಸಿ ಸಿಬ್ಬಂದಿಗಳಲ್ಲಿ ಹೃದಯಾಘಾತದಿಂದ ಸಾವು ಹೆಚ್ಚಳ: ಸಾವಿಗೆ ಕಾರಣವಾಯ್ತಾ ಡೇ ಆ್ಯಂಡ್​ ನೈಟ್ ಡ್ಯೂಟಿ?
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2024 | 10:16 PM

ಬೆಂಗಳೂರು, ನವೆಂಬರ್​ 07: ಇತ್ತೀಚಿಗೆ ಬಿಎಂಟಿಸಿ (BMTC) ಡ್ರೈವರ್, ಕಂಡಕ್ಟರ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಬಸ್​ ಚಾಲನೆ ವೇಳೆ ಡ್ರೈವರ್​​ಗೆ ಹಾರ್ಟ್ ಅಟ್ಯಾಕ್ ಆಗಿ ಪ್ರಾಣ ಬಿಟ್ಟಿದ್ದರು. ಇದಕ್ಕೆ ಅಧಿಕಾರಿಗಳ ಕಿರುಕುಳವೇ ಕಾರಣ. ನಿರಂತರವಾಗಿ ಹಗಲು-ರಾತ್ರಿ ಕೆಲಸ ಮಾಡಿಸಿದ್ದಾರೆ. ಇದರಿಂದ ಕಿರಣ್ ಪ್ರಾಣ ಬಿಟ್ಟಿದ್ದಾನೆ ಎಂದು ಸಾರಿಗೆ ನೌಕರರ ಮುಖಂಡರು ಹೊಸ ಬಾಂಬ್ ಸಿಡಿಸಿದ್ದಾರೆ.

ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ನೂರು ಜನರಲ್ಲಿ 33% ರಷ್ಟು ಆಟೋ, ಕ್ಯಾಬ್, ಬಸ್ ಡ್ರೈವರ್​ಗಳು!

ನಿನ್ನೆ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ನೆಲಮಂಗಲ ಟೌನ್ ಬಸ್ ನಿಲ್ದಾಣದಿಂದ ಕೊನೆಯ ಟ್ರಿಪ್ ಮುಗಿಸಿ, ದಾಸನಪುರದಲ್ಲಿರುವ ಬಿಎಂಟಿಸಿ ಡಿಪೋ ಕಡೆ ಹೊರಟ್ಟಿದ್ದ ಬಿಎಂಟಿಸಿ ಬಸ್ ಚಾಲಕ 39 ವರ್ಷದ ಕಿರಣ್​ಗೆ ಡ್ರೈವಿಂಗ್ ಮಾಡುವ ವೇಳೆ ದಿಢೀರ್ ಹೃದಯಾಘಾತವಾಗಿದೆ. ಸ್ಥಳದಲ್ಲೇ ಬಿಎಂಟಿಸಿಯ ಡ್ರೈವರ್ ಮೃತಪಟ್ಟಿದ್ದ, ಆದರೆ ಕಿರಣ್ ಸಾವಿಗೆ ಬಿಎಂಟಿಸಿ ಅಧಿಕಾರಿಗಳ ಒತ್ತಡವೇ ಕಾರಣ ಅನ್ನೋ ಆರೋಪ ಕೇಳಿ ಬಂದಿದೆ.

ಬಿಎಂಟಿಸಿಯಲ್ಲಿ ನೌಕರರ ಕೊರತೆ ಉಂಟಾಗಿದೆಯಂತೆ. ಇದರಿಂದ ಇರುವಂತಹ ನೌಕರರಿಗೆ ಒಟಿ ಕೊಟ್ಟು ಒತ್ತಡಕ್ಕೆ ಸಿಲುಕಿಸುತ್ತಿದ್ದಾರಂತೆ. ನಿನ್ನೆ ಹೃದಯಾಘಾತದಿಂದ ಮೃತಪಟ್ಟ ಕಿರಣ್​ಗೆ ನಿರಂತರವಾಗಿ ಮೂರು ದಿನಗಳ ಕಾಲ ಡೇ ಅಂಡ್ ನೈಟ್ ಡ್ಯೂಟಿ ಮಾಡಿಸಿದ್ದಾರೆ. ಮೊನ್ನೆ ರಾತ್ರಿ ಕಿರಣ್​ಗೆ ಜ್ವರ ಬಂದಿತ್ತಂತೆ, ಆದರೂ ಅಧಿಕಾರಿಗಳ ಒತ್ತಡದಿಂದಾಗಿ ಡ್ಯೂಟಿ ಮಾಡಿದ್ದರಿಂದ ಹಾರ್ಟ್ ಅಟ್ಯಾಕ್ ಆಗಿ ನಿಧನ ಹೊಂದಿದ್ದಾನೆ ಅನ್ನೋದು ಸಾರಿಗೆ ಮುಖಂಡರ ಆರೋಪ.

ಇದನ್ನೂ ಓದಿ: BMTC ಬಸ್​ ಚಾಲನೆಯಲ್ಲಿ ಇರುವಾಗಲೇ ಡ್ರೈವರ್​ಗೆ ಹೃದಯಾಘಾತ

ಡ್ರೈವರ್, ಕಂಡಕ್ಟರ್​ಗಳು ಕೆಲಸ ಮುಗಿಸಿ ಬಂದ್ರು ಅಧಿಕಾರಿಗಳು ಮತ್ತೊಂದು ಶಿಫ್ಟ್ ಕೆಲಸ ಮಾಡಿಸಲು ಆರ್ಡರ್ ಮಾಡ್ತಾರಂತೆ. ಮೃತ ಕಿರಣ್ ಸೋಮವಾರ, ಮಂಗಳವಾರ, ಬುಧವಾರದವರೆಗೆ ಡೇ ಅಂಡ್ ನೈಟ್ ಡ್ಯೂಟಿ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಕಿರಣ್ ಬಳಿ ನಿರಂತರವಾಗಿ ಅಧಿಕಾರಿಗಳು ಒಟಿ ಡ್ಯೂಟಿ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಮತ್ತು ಜೊತೆಯಲ್ಲಿ ಕೆಲಸ ಮಾಡಿದ ಕಂಡಕ್ಟರ್​ಗಳು ಮಾಹಿತಿ ನೀಡ್ತಿದ್ದಾರೆ.

ಮೂರು ದಿನ ನಿರಂತರವಾಗಿ ಡ್ಯೂಟಿ ಮಾಡಿದ್ರಿಂದ ಈ ಘಟನೆ ನಡೆದಿದೆಯಂತೆ. ಕಿರಣ್ ಪ್ರತಿದಿನ ಹಾಸನದಿಂದ ಅಪ್ ಅಂಡ್ ಡೌನ್ ಮಾಡಿಕೊಂಡು ಡ್ಯೂಟಿ ಮಾಡ್ತಿದ್ದ ಇದನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಹೆದರಿಸಿ ಜನರಲ್ ಶಿಫ್ಟಸ್​ಗೆ ಬಾ, ಮಧ್ಯಾಹ್ನ ಶಿಫ್ಟ್​ಗೆ ಬಾ ಎಂದು ಕೆಲಸ ಮಾಡಿಸಿಕೊಂಡಿದ್ದಾರೆ. ಕಿರಣ್ ಸಾವಿಗೆ ಬಿಎಂಟಿಸಿಯ ಅಧಿಕಾರಿಗಳೇ ನೇರ ಹೊಣೆ, ಅಧಿಕಾರಿಗಳು ಕಿರಣ್ ನನ್ನ ಟಾರ್ಗೆಟ್ ಮಾಡಿ ನಿರಂತರವಾಗಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆರೋಪ ಮಾಡಿದ್ದಾರೆ.

ಬಿಎಂಟಿಸಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್​ನಿಂದ ಸಾವನ್ನಪ್ಪಿದವ ಅಂಕಿ-ಸಂಖ್ಯೆ

  • 2020- 21 ರಲ್ಲಿ 63- ನೌಕರರು
  • 2021-22 ರಲ್ಲಿ 65- ನೌಕರರು
  • 2022-23 ರಲ್ಲಿ 50- ನೌಕರರು
  • 2023-24 ರಲ್ಲಿ 35- ನೌಕರರು

ಇನ್ನೂ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪುತ್ತಿರುವ 100 ಜನರಲ್ಲಿ 33 ಜನ ಚಾಲಕರಿದ್ದಾರಂತೆ. ಆಟೋ, ಕ್ಯಾಬ್, ಸೇರಿದಂತೆ ಬಿಎಂಟಿಸಿಯ ಡ್ರೈವರ್​ಗಳು ಇದ್ದಾರಂತೆ. ಡ್ರೈವರ್​ಗಳು ನಿರಂತರವಾಗಿ ಹಗಲು-ರಾತ್ರಿ ಬೆಂಗಳೂರಿನ ಟ್ರಾಫಿಕ್​ನಲ್ಲಿ ಇದ್ದಾಗ, ಹೆಚ್ಚಿನ ಮಟ್ಟದಲ್ಲಿ ವಾಯುಮಾಲಿನ್ಯಕ್ಕೆ ತುತ್ತಾಗುತ್ತಾರೆ. ಇದರ ಜೊತೆಗೆ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ರಾತ್ರಿಯಿಡೀ ಡ್ಯೂಟಿ ಮಾಡಿದಾಗ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆಗಳಿವೆ. ನಿದ್ರೆ ಬರಬಾರದು ಎಂದು ಸಿಗರೆಟ್ ಸೇದುತ್ತಾರೆ, ಇದರಿಂದಲೂ ಸಮಸ್ಯೆ ಆಗುತ್ತದೆ ಎಂದು ಜಯದೇವ ಹೃದ್ರೋಗ ತಜ್ಞ ಡಾ. ರಾಹುಲ್ ಪಾಟೀಲ್​ ಹೇಳಿದ್ದಾರೆ.

ಒಟ್ಟಿನಲ್ಲಿ ಡ್ರೈವರ್ ಕಿರಣ್ ಸಾವಿಗೆ ಹಗಲು-ರಾತ್ರಿ ಡ್ಯೂಟಿ ಮಾಡಿದ್ದು, ಅಧಿಕಾರಿಗಳ ಒತ್ತಡವೇ ಕಾರಣ ಎಂದು ಸಾರಿಗೆ ನೌಕರರ ಮುಖಂಡರು ಆರೋಪ ಮಾಡ್ತಿದ್ದಾರೆ, ಆದರೆ ಸತ್ತ ಕಿರಣ್ ಕುಟುಂಬಕ್ಕೆ ಇದೀಗ ಆಸರೆ ಆಗೋದು ಯಾರು? ನ್ಯಾಯ ಕೊಡಿಸೋದು ಯಾರು? ಇದಕ್ಕೆ ಸಾರಿಗೆ ಇಲಾಖೆಯೇ ಉತ್ತರ ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.