ಅಂತ್ಯಕ್ರಿಯೆಗೆ ಅಂತ ಬಂದವನು ಅಂತ್ಯವಾಗಿ ಹೋದ, ಚಾಕುವಿನಿಂದ ಇರಿದು ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ
ಕಲಬರಗಿ ಜಿಲ್ಲೆ ಕ್ರೈಂ ಜಿಲ್ಲೆಯಾಗ್ತಿದೆ. ದಿನಕ್ಕೊಂದರಂತೆ ಇಲ್ಲಿ ಹೆಣ ಬೀಳ್ತಿವೆ. ಹೀಗೆ ಶನಿವಾರ ರಾತ್ರಿಯೂ ಇಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿತ್ತು. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಪನೂರು ಗ್ರಾಮದ ಸಮೀರ್ ಮುಜಾವರ್ ಎಂಬಾತ ಹಂತಕರ ಏಟಿಗೆ ಪ್ರಾಣ ಬಿಟ್ಟಿದ್ದ.
ಕಲಬುರಗಿ: ಆತ ದೂರದೂರಿನಲ್ಲೇ ಬದುಕು ಕಟ್ಟಿಕೊಂಡಿದ್ದ. ಕಷ್ಟಪಟ್ಟು ದುಡಿಯುತ್ತಾ ಮನೆಗೆ ಆಧಾರವಾಗಿದ್ದ. ಆದ್ರೆ ಅಂತ್ಯಕ್ರಿಯೆಗೆ ಅಂತಾ ಊರಿಗೆ ವಾಪಸ್ ಆಗಿದ್ದವನು ಊರಲ್ಲೇ ಅಂತ್ಯವಾಗಿದ್ದಾನೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ನಡುಬೀದಿಯಲ್ಲೇ ಹೆಣವಾಗಿದ್ದಾನೆ.
ಕಲಬರಗಿ ಜಿಲ್ಲೆ ಕ್ರೈಂ ಜಿಲ್ಲೆಯಾಗ್ತಿದೆ. ದಿನಕ್ಕೊಂದರಂತೆ ಇಲ್ಲಿ ಹೆಣ ಬೀಳ್ತಿವೆ. ಹೀಗೆ ಶನಿವಾರ ರಾತ್ರಿಯೂ ಇಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿತ್ತು. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಪನೂರು ಗ್ರಾಮದ ಸಮೀರ್ ಮುಜಾವರ್ ಎಂಬಾತ ಹಂತಕರ ಏಟಿಗೆ ಪ್ರಾಣ ಬಿಟ್ಟಿದ್ದ. ಅಷ್ಟಕ್ಕೂ 23 ವರ್ಷದ ಸಮೀರ್ ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಹೀಗೆ ಹೈದ್ರಾಬಾದ್‌ನಲ್ಲೇ ಇದ್ದ ಸಮೀರ್, ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಅಂತಾ ಶನಿವಾರ ಊರಿಗೆ ಬಂದಿದ್ದ. ಹೀಗೆ ಅಂತ್ಯಕ್ರಿಯೆ ಮುಗಿಸಿಕೊಂಡು ಸಂಜೆ ಮನೆಗೆ ಬರ್ತಿದ್ದವನ ಮೇಲೆ ನಡು ಬೀದಿಯಲ್ಲೇ ಅಟ್ಯಾಕ್ ಆಗಿತ್ತು. ಮೂರ್ನಾಲ್ಕು ಜನ ದುಷ್ಕರ್ಮಿಗಳು, ಸಮೀರ್ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದು ಹಾಕಿದ್ರು. ಮನೆಯ ಹಿರಿ ಮಗನ ಸಾವು ಇಡೀ ಕುಟುಂಬವೇ ಕಣ್ಣೀರಾಗುವಂತೆ ಮಾಡಿದೆ.
ಸಮೀರ್ ಕೊಲೆ ಹಿಂದಿತ್ತು ಹೆಣ್ಣಿನ ನೆರಳು ಅಂತ್ಯಕ್ರಿಯೆಗೆ ಅಂತಾ ಬಂದಿದ್ದ ಸಮೀರ್‌ನನ್ನ ಕೊಂದಿದ್ಯಾಕೆ ಅಂತಾ ಕೆದಕಿದ್ರೆ ಒಂದು ಅನೈತಿಕ ಸಂಬಂಧದ ಸುಳಿವು ಸಿಕ್ಕಿದೆ. ಗ್ರಾಮದ ಮಹಿಳೆಯೊಬ್ಬರ ಜತೆ ಸಮೀರ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಂತೆ. ವಿಷ್ಯ ಅಂದ್ರೆ ಅದೇ ಮಹಿಳೆ ಜತೆ ಗ್ರಾಮದ ಕಾಶೀನಾಥ್ ಎಂಬಾತನಿಗೂ ಅಕ್ರಮ ಸಂಬಂಧ ಇತ್ತಂತೆ. ಆಕೆಗಾಗಿ ಇಬ್ಬರ ನಡುವೆ ಜಗಳವೂ ಆಗಿ ಸಮೀರ್ ಊರು ಬಿಟ್ಟು ಹೈದ್ರಾಬಾದ್ ಸೇರಿದ್ದ. ಆದ್ರೆ ಅಂತ್ಯಕ್ರಿಯೆಗೆ ಸಮೀರ್ ಬಂದಿದ್ದಾನೆ ಅನ್ನೋದು ಗೊತ್ತಾಗ್ತಿದ್ದಂತೆ ಕಾಶೀನಾಥ್, ವೀರೇಶ್ ಸೇರಿ ಸಮೀರ್‌ನ ಕತೆ ಮುಗಿಸಿದ್ದಾರೆ ಅನ್ನೋದು ಸಂಬಂಧಿಕರ ಆರೋಪ.
ಸದ್ಯ ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ವೀರೇಶ್ ಮತ್ತು ಕಾಶಿನಾಥ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಗೆ ಅಕ್ರಮ ಸಂಬಂಧವೇ ಕಾರಣನಾ..ಅಥವಾ ಬೇರೆ ರೀಸನ್ ಇದೆಯಾ ಅನ್ನೋದು ತನಿಖೆ ಬಳಕವೇ ಗೊತ್ತಾಗಲಿದೆ.
ವರದಿ: ಸಂಜಯ್, ಟಿವಿ9 ಕಲಬುರಗಿ
ಇದನ್ನೂ ಓದಿ: ಅಫ್ಘಾನಿಸ್ತಾನ: ತಾಲಿಬಾನಿಗಳಿಂದ ಪಾರಾಗಿ 4 ತಿಂಗಳ ಬಳಿಕ ಹೆತ್ತವರನ್ನು ಸೇರಿದ ಮಗು