ದೇಗುಲದಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬೇಡಿ- ಬಜರಂಗದಳ ಮನವಿ:
ದೇಗುಲದಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬೇಡಿ ಅಂತ ರಾಮದುರ್ಗ ತಹಶಿಲ್ದಾರ್‌ಗೆ ವಿಶ್ವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮನವಿ ಮಾಡಿವೆ. ರಾಮದುರ್ಗದ ವೆಂಕಟೇಶ್ವರ ದೇವಾಲಯದಲ್ಲಿ ಜಾತ್ರೆ ಹಿನ್ನೆಲೆ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ಏಪ್ರಿಲ್ 11ರಿಂದ 15ರವರೆಗೆ ವೆಂಕಟೇಶ್ವರ ಜಾತ್ರಾ ಮಹೋತ್ಸವ ನಡೆಲಿದೆ. ಇನ್ನು ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇಧಿಸುವಂತೆಯೂ ಆಗ್ರಹಿಸಿವೆ.
ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಆಂಜನೇಯನಿಗೆ ಪೂಜೆ:
ಕೊಪ್ಪಳ: ಹಿಂದೂಗಳು, ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಯಾರೋ ಮಾಡುವ ಕೆಲಸದಿಂದ ಕೆಟ್ಟ ಹೆಸರು ಬರುತ್ತಿದೆ. ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಧಾರ್ಮಿಕ ಮುಖಂಡರು ಈ ವಿವಾದವನ್ನು ಬಗೆಹರಿಸಿ ಅಂತ ಕೊಪ್ಪಳದ ಶಂಶುದ್ದೀನ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ನಾವು ಕಳೆದ 20 ವರ್ಷದಿಂದ ಆಂಜನೇಯ ಭಕ್ತರು. ಹೀಗಾಗಿ ಮನೆಯಲ್ಲಿ ಆಂಜನೇಯನ ಫೋಟೋ ಹಾಕಿದ್ದೇವೆ ಎಂದು ಹೇಳಿದ ಶಂಶುದ್ದೀನ್, ತಮ್ಮ ಮನೆಯ ಜಗಲಿಯಲ್ಲಿ ಹಿಂದೂ ದೇವರ ಫೊಟೋ ಇಟ್ಟು ಪೂಜೆ ಮಾಡುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ದೇಣಿಗೆ ನೀಡಿದ್ದರು.
ಇದನ್ನೂ ಓದಿ