ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಕೇಂದ್ರ ಸಚಿವೆ ನಿರ್ಮಲಾ, ನಳಿನ್ ಕುಮಾರ್ ಕಟೀಲು ಸೇರಿದಂತೆ ಮತ್ತಿತರರ ವಿರುದ್ಧದ ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣದ ತೀರ್ಪನ್ನು ಹೈಕೋರ್ಟ್​ ಏಕಸದಸ್ಯ ಪೀಠ ಕಾಯ್ದಿರಿಸಿದೆ. ವಾದ-ಪ್ರತಿವಾದ ಹೇಗಿತ್ತು ಎನ್ನುವುದನ್ನು ನೋಡಿ.

ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on: Nov 20, 2024 | 4:53 PM

ಬೆಂಗಳೂರು, (ನವೆಂಬರ್ 20): ಕೇಂದ್ರ ಸಚಿವೆ ನಿರ್ಮಲಾ, ನಳಿನ್ ಕುಮಾರ್ ಕಟೀಲು ಸೇರಿದಂತೆ ಮತ್ತಿತರರ ವಿರುದ್ಧದ ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣದ ತೀರ್ಪನ್ನು ಹೈಕೋರ್ಟ್​ ಏಕಸದಸ್ಯ ಪೀಠ ಕಾಯ್ದಿರಿಸಿದೆ. ದೂರುದಾರ ಆದರ್ಶ್ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡಿದ್ದರೆ, ನಳಿನ್ ಕುಮಾರ್ ಕಟೀಲು ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಪ್ರತಿವಾದ ಮಾಡಿದರು. ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಕಾಯ್ದಿರಿಸಿದೆ. ಇನ್ನು ಪ್ರಕರಣದ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ವಿಸ್ತರಿಸಿದೆ.

ವಾದ-ಪ್ರತಿವಾದ ಹೇಗಿತ್ತು?

ಇಡಿಯನ್ನು ಬಳಸಿಕೊಂಡು ಚುನಾವಣಾ ಬಾಂಡ್‌ಗೆ ಹಣ ಸಂಗ್ರಹಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ವಿರುದ್ಧ ಈ ಆರೋಪವಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ದೂರು ದಾಖಲಿಸಲಾಗಿದೆ. ಆಡಳಿತ ಪಕ್ಷ ಸಿಬಿಐ, ಇಡಿಯನ್ನು ಬಳಸಿ ಹಣ ಸುಲಿಗೆ ಮಾಡುತ್ತಿದೆ. ಪ್ರತಿ ನಾಗರಿಕನೂ ಇದರಿಂದ ನೊಂದಿರುವುದರಿಂದ ದೂರು ದಾಖಲಿಸಬಹುದೆಂದು ವಾದಿಸಿದರು.

ಇದಕ್ಕೆ ನಳಿನ್ ಕುಮಾರ್ ಕಟೀಲು ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಪ್ರತಿಯಾಗಿ ವಾದ ಮಾಡಿದ್ದು, ಸುಲಿಗೆಗೊಳಗಾದ ಸಂತ್ರಸ್ತರು ಯಾರೂ ದೂರು ನೀಡಿಲ್ಲ. ದೂರುದಾರರು ಸಂತ್ರಸ್ತರಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಈ ಪ್ರಕರಣದಲ್ಲಿ ಸಂತ್ರಸ್ತರಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಆರೋಪಿಗಳು ಹಣ ಸ್ವೀಕರಿಸಿದ್ದಾರೆಂಬುವುದಕ್ಕೂ ದೂರಿನಲ್ಲಿ ಯಾವುದೇ ಚಕಾರವಿಲ್ಲ. ಹೀಗಾಗಿ ಸುಲಿಗೆ ವ್ಯಾಖ್ಯಾನಕ್ಕೆ ದೂರು ಒಳಪಡುವುದಿಲ್ಲವೆಂದು ಕೋರ್ಟ್​ಗೆ ತಿಳಿಸಿದರು.

ಇದನ್ನೂ ಓದಿ: ಚುನಾವಣಾ ಬಾಂಡ್ ಕೇಸ್: ನಳಿನ್ ಕುಮಾರ್ ಕಟೀಲ್​ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆಯಾಜ್ಞೆ

ಎರಡೂ ಕಡೆಯಿಂದಲೂ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ತೀರ್ಪು ಕಾಯ್ದಿರಿಸಿದೆ. ಇನ್ನು ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದೆ.

ಜಾರಿ ನಿರ್ದೇಶನಾಲಯದ ಮೂಲಕ ದಾಳಿ ಮಾಡಿಸುವುದಾಗಿ ಬೆದರಿಕೆಯೊಡ್ಡಿ ಪ್ರತಿಷ್ಠಿತ ಕಂಪೆನಿಗಳಿಂದ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿರುವ ಆರೋಪದಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಾರಿ ನಿರ್ದೇಶಾನಲಯ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ಹಾಗೂ ಇತರೆ ಬಿಜೆಪಿ ಮುಖಂಡರ ವಿರುದ್ಧ ಆರ್‌.ಅಯ್ಯರ್‌ ಎಂಬುವರು ತಿಲಕ್​ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಖಾಸಗಿ ದೂರು ಆಧರಿಸಿ ನ್ಯಾಯಾಲಯವು ಎಫ್‌ಐಆರ್‌ ದಾಖಲಿಸಲು ಸೂಚಿಸಿತ್ತು. ಅದರಂತೆ ತಿಲಕ್‌ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ನಿರ್ಮಲಾ ಸೀತಾರಾಮನ್‌ ಹಾಗೂ ಜಾರಿ ನಿರ್ದೇನಾಲಯದ ಅಧಿಕಾರಿಗಳು 2019 ರಿಂದ 2023 ರ ನವೆಂಬರ್‌ ಅವಧಿಯಲ್ಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಇತರೆ ಆರೋಪಿಗಳ ಜತೆ ಒಳಸಂಚು ನಡೆಸಿ ಎಂಎನ್‌ಸಿ ಹಾಗೂ ಟಿಎನ್‌ಸಿ ಕಾರ್ಪೋರೇಟ್‌ ಕಂಪೆನಿಗಳ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಹೆದರಿಸಿ ಚುನಾವಣಾ ಬಾಂಡ್‌ ಹೆಸರಿನಲ್ಲಿ 8,000 ಕೋಟಿ ರೂ.ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಸೂಚನೆಯಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾರ್ಪೊರೇಟ್‌ ಕಂಪೆನಿಗಳ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಈ ದಾಳಿಗಳಿಗೆ ಹೆದರಿದ ಕಂಪೆನಿಗಳ ಸಿಇಒಗಳು, ವ್ಯವಸ್ಥಾಪಕ ನಿರ್ದೇಶಕರುಗಳು ನೂರಾರು ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಿದ್ದರು. ಇದರಿಂದ ಬಿಜೆಪಿ ರಾಷ್ಟ್ರ ಘಟಕ ಹಾಗೂ ರಾಜ್ಯ ಘಟಕವು ಲಾಭ ಪಡೆದಿದೆ ಎಂದು ಆರೋಪಿಸಲಾಗಿದೆ.

ಅದೇ ರೀತಿ ಅರವಿಂದ ಫಾರ್ಮಾ ಕಂಪೆನಿಯು 49.5 ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. ಈ ಅಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಮತ್ತಿತರರು ಭಾಗಿಯಾಗಿದ್ದು ಕ್ರಿಮಿನಲ್‌ ಪ್ರಕರಣದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಆರ್‌.ಅಯ್ಯರ್‌ 42 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಬಳಿಕ ಕೋರ್ಟ್​ ಸಹ ಎಫ್​ಐಆರ್​ ದಾಖಲಿಸಲು ಪೊಲೀಸರಿಗೆ ಸೂಚಿಸಿತ್ತು. ಬಳಿಕ ಕಟೀಲ್ ಸೇರಿದಂತೆ ಇತರರು ಪ್ರಕರಣ ರದ್ದು ಕೋರ್ಟ್ ಹೈಕೋರ್ಟ್​  ಮೆಟ್ಟಿಲೇರಿದ್ದು. ಆದ್ರೆ, ಕೋರ್ಟ್ ಎಪ್​ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ದೆಹಲಿ: ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ
ದೆಹಲಿ: ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ
ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಯಾವುದೇ ನೋಟೀಸ್ ನೀಡದ ಇಲಾಖೆ
ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಯಾವುದೇ ನೋಟೀಸ್ ನೀಡದ ಇಲಾಖೆ
ರಸ್ತೆ ಬದಿ ವಾಲಿದ ​ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್
ರಸ್ತೆ ಬದಿ ವಾಲಿದ ​ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್
ಮುಖ್ಯಮಂತ್ರಿಯವರು ಜಾತಿಗಣತಿ ವರದಿಯ ಅಧ್ಯಯನ ಮಾಡುತ್ತಿದ್ದಾರೆ: ಪರಮೇಶ್ವರ್
ಮುಖ್ಯಮಂತ್ರಿಯವರು ಜಾತಿಗಣತಿ ವರದಿಯ ಅಧ್ಯಯನ ಮಾಡುತ್ತಿದ್ದಾರೆ: ಪರಮೇಶ್ವರ್
ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ
ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ
ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು
ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು
ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ
ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ