ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ ಭರ್ತಿ, ಹೇಮಾವತಿ ಹಾಗೂ ಕೆಆರ್‌ಎಸ್‌ನಲ್ಲಿ ಕಡಿಮೆಯಾದ ನೀರು!
ರಾಜ್ಯದ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಳಿತ ಕಂಡುಬಂದಿದೆ. ವಿಜಯಪುರದ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೆ, ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 04) ನೀರಿನ ಮಟ್ಟ: ಕೆಆರ್‌ಎಸ್ ಮತ್ತು ಹೇಮಾವತಿ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇನ್ನೊಂದೆಡೆ, ಚಾಮರಾಜನಗರದಲ್ಲಿ ನಂಜನಗೂಡಿನ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಒಪ್ಪಂದದಂತೆ ಬೆಳೆದ ಕಬ್ಬನ್ನು ಕಟಾವು ಮಾಡದೆ ವಿಳಂಬ ಮಾಡುತ್ತಿರುವುದಕ್ಕೆ ನೊಂದ ರೈತ ಜಮೀನಿಗೆ ಬೆಂಕಿ ಹಚ್ಚುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ, ಹೇಮಾವತಿ ಹಾಗೂ ಕೆಆರ್‌ಎಸ್‌ನಲ್ಲಿ ಕುಸಿದ ನೀರು.
- ಒಪ್ಪಂದದಂತೆ ಕಬ್ಬು ಕಟಾವು ಮಾಡದ ಶುಗರ್ ಫ್ಯಾಕ್ಟರಿ ವಿರುದ್ಧ ರೈತನ ಆಕ್ರೋಶ.
- ಕಬ್ಬು ತೆಗೆದುಕೊಂಡು ಹೋಗದಿದ್ದರೆ ಜಮೀನಿಗೆ ಬೆಂಕಿ ಹಚ್ಚುವುದಾಗಿ ನೊಂದ ರೈತ ಎಚ್ಚರಿಕೆ.
ಬೆಂಗಳೂರು, ಸೆಪ್ಟೆಂಬರ್ 04: ರಾಜ್ಯಾದ್ಯಂತ ಮುಂಗಾರು ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿಯೂ ಹೆಚ್ಚು ಕಮ್ಮಿಯಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಜಲಾಶಯವು ಸಂಪೂರ್ಣ ಭರ್ತಿಯಾಗಿ ಗರಿಷ್ಠ ಮಟ್ಟ ತಲುಪಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಆದರೆ, ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ಕೆಆರ್‌ಎಸ್ ಹಾಗೂ ಹೇಮಾವತಿ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದೇ ವೇಳೆ, ಚಾಮರಾಜನಗರದಲ್ಲಿ ಒಪ್ಪಂದದಂತೆ ಕಬ್ಬು ಕಟಾವು ಮಾಡದ ನಂಜನಗೂಡಿನ ಸಕ್ಕರೆ ಕಾರ್ಖಾನೆ ವಿರುದ್ಧ ರೈತ ಆಕ್ರೋಶ ಹೊರಹಾಕಿದ್ದು, ಜಮೀನಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಸಿದ್ದಾರೆ.
1. ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 519.59 ಮೀಟರ್
- ಒಳಹರಿವು: 20,007 ಕ್ಯೂಸೆಕ್
- ಹೊರಹರಿವು: 20,007 ಕ್ಯೂಸೆಕ್
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
2. ಹೇಮಾವತಿ ಜಲಾಶಯ
- ಗರಿಷ್ಠ ಸಾಮರ್ಥ್ಯ: 2922 ಅಡಿ (37 TMC)
- ಇಂದಿನ ಮಟ್ಟ: 2910.48 ಅಡಿ (27.044 TMC)
- ಒಳಹರಿವು: 3,789 ಕ್ಯೂಸೆಕ್
- ಹೊರಹರಿವು: ನದಿಗೆ 4,500 ಕ್ಯೂಸೆಕ್, ಕಾಲುವೆಗೆ 5,650 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ: ನೀರಿನ ಮಟ್ಟ 2921.85 ಅಡಿ (36.958 TMC) ಇತ್ತು. ಒಳಹರಿವು 13,552 ಕ್ಯೂಸೆಕ್ ಹಾಗೂ ನದಿಗೆ 9,000 ಕ್ಯೂಸೆಕ್, ಕಾಲುವೆಗೆ 5,000 ಕ್ಯೂಸೆಕ್ ಹೊರಹರಿವಿತ್ತು.
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಳಹರಿವು ಮತ್ತು ನೀರು ಸಂಗ್ರಹ ಕಡಿಮೆಯಾಗಿದೆ.
3. ಕೆ.ಆರ್.ಎಸ್ ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ (49.452 TMC)
- ಇಂದಿನ ಮಟ್ಟ: 108.16 ಅಡಿ (29.911 TMC)
- ಒಳಹರಿವು: 2,666 ಕ್ಯೂಸೆಕ್
- ಹೊರಹರಿವು: 9,252 ಕ್ಯೂಸೆಕ್
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಡ್ಯಾಂನಲ್ಲಿ ನೀರಿನ ಸಂಗ್ರಹ ಕುಸಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Fri, 4 September 26




