AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather: ಗೇರುಸೊಪ್ಪದಲ್ಲಿ ಮಳೆ, ಕರ್ನಾಟಕದಾದ್ಯಂತ ಒಣಹವೆ ಮುಂದುವರಿಕೆ

ಕರ್ನಾಟಕದಾದ್ಯಂತ ಒಣಹವೆ ಮುಂದುವರೆದಿದೆ, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚುತ್ತಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಹೆಚ್ಚಾಗಿ ಆಗದಿದ್ದರೂ ಕೆಲವೆಡೆ ಸಾಧಾರಣ ಮಳೆಯಾಗಿದೆ. ಗೇರುಸೊಪ್ಪದಲ್ಲಿ ಮಳೆಯಾಗಿದೆ. ಚಾಮರಾಜನಗರದಲ್ಲಿ 14.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 36.9 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

Karnataka Weather: ಗೇರುಸೊಪ್ಪದಲ್ಲಿ ಮಳೆ, ಕರ್ನಾಟಕದಾದ್ಯಂತ ಒಣಹವೆ ಮುಂದುವರಿಕೆ
ಬೇಸಿಗೆ Image Credit source: PTI
Follow us
ನಯನಾ ರಾಜೀವ್
|

Updated on: Feb 25, 2025 | 7:22 AM

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಹೆಚ್ಚಾಗಿ ಆಗದಿದ್ದರೂ ಕೆಲವೆಡೆ ಸಾಧಾರಣ ಮಳೆಯಾಗಿದೆ. ಗೇರುಸೊಪ್ಪದಲ್ಲಿ ಮಳೆಯಾಗಿದೆ. ಚಾಮರಾಜನಗರದಲ್ಲಿ 14.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 36.9 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಗರಿಷ್ಠ ತಾಪಮಾನವು ಕಾರವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಮಂಡ್ಯದಲ್ಲಿ ಕೂಡ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ ಗರಿಷ್ಠ ತಾಪಮಾನ 2.9 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗಿದೆ. ಗರಿಷ್ಠ ತಾಪಮಾನವು ಕರಾವಳಿಯಲ್ಲಿ 34-35 ಡಿಗ್ರಿ ಸೆಲ್ಸಿಯಸ್​ನಷ್ಟಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ ಮತ್ತು ಹಾವೇರಿಯಲ್ಲಿ 32-34 ಡಿಗ್ರಿ ಸೆಲ್ಸಿಯಸ್, ವಿಜಯಪುರ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಬಾಗಲಕೋಟೆಯಲ್ಲಿ 31-33 ಡಿಗ್ರಿ ಸೆಲ್ಸಿಯಸ್, ಆಗುಂಬೆ, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಮಂಡ್ಯ, ಶಿವಮೊಗ್ಗದಲ್ಲಿ 34-35 ಡಿಗ್ರಿ ಸೆಲ್ಸಿಯಸ್​ನಷ್ಟಿತ್ತು.

ಮತ್ತಷ್ಟು ಓದಿ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಇನ್ನು ಕನಿಷ್ಠ ತಾಪಮಾನವು ಕರಾವಳಿಯಲ್ಲಿ 23-24 ಡಿಗ್ರಿ ಸೆಲ್ಸಿಯಸ್​ನಷ್ಟಿತ್ತು, ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ರಾಯಚೂರು, ಹಾವೇರಿ, ಬಾಗಲಕೋಟೆ, ಗದಗದಲ್ಲಿ 17-18 ಡಿಗ್ರಿ ಸೆಲ್ಸಿಯಸ್, ಕಲಬುರಗಿ, ಕೊಪ್ಪಳದಲ್ಲಿ 19-21 ಡಿಗ್ರಿ ಸೆಲ್ಸಿಯಸ್, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಚಿಂತಾಮಣಿ, ಮಂಡ್ಯ ಮತ್ತು ಮಡಿಕೇರಿಯಲ್ಲಿ 13-18 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ.

ಎಚ್​ಎಎಲ್​ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 32.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಚಿತಾ ರಾಮ್ ವಿರುದ್ಧ ದೂರು, ನಟಿಯ ಕರೆಸಿ ವಿಚಾರಿಸುತ್ತೇವೆ: ಸಾರಾ ಗೋವಿಂದು
ರಚಿತಾ ರಾಮ್ ವಿರುದ್ಧ ದೂರು, ನಟಿಯ ಕರೆಸಿ ವಿಚಾರಿಸುತ್ತೇವೆ: ಸಾರಾ ಗೋವಿಂದು
ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!