Karnataka Weather: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Weather: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಮಳೆ
Follow us
|

Updated on: Jul 18, 2023 | 6:59 AM

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಕರಾವಳಿ (Coastal) ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshin Kannada), ಉಡುಪಿ (Udupi) ಮತ್ತು ಉತ್ತರ ಕನ್ನಡ (Uttar Kannada) ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ (ಜು.18, 19) ರಂದು ಭಾರಿ ಮಳೆಯಾಗಲಿದ್ದು (Rain) ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿಯಲ್ಲಿ ಬಿರುಗಾಳಿಯು 40 ರಿಂದ 45 ಕಿಮೀ ವೇಗದಲ್ಲಿ ಬೀಸಲಿದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

ಒತ್ತರ ಒಳನಾಡು ಪ್ರದೇಶಗಳಾದ ಬಾಗಲಕೋಟೆ, ಬೆಳಗಾವಿ, ಬೀದರ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹಾಗೇ ಮುಂದಿನ ಮೂರು ದಿನ ಅಂದರೆ 19, 20, 21 ರಂದು ಬಾಗಲಕೋಟೆ, ಬೆಳಗಾವಿ, ಬೀದರ, ಕಲಬುರ್ಗಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸೇವಿಸಬಹುದಾದ ಗಿಡಮೂಲಿಕೆಗಳು

ದಕ್ಷಿಣ ಒಳನಾಡು ಪ್ರದೇಶಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲಗಳಲ್ಲೂ ಭಾರಿ ಮಳೆಯಾಗಲಿದೆ. ಗಾಳಿ ವೇಗವು ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬೀಸಲಿದೆ. ಹಾಗೇ ಮುಂದಿನ ಮೂರು ದಿನ ಅಂದರೆ 19, 20 ಮತ್ತು 31 ರಂದು ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಆದಾಗ್ಯೂ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದೆ. ಜೂನ್ 1 ರಿಂದ ಜುಲೈ 16 ರ ನಡುವೆ ಬಾಗಲಕೋಟೆ ಜಿಲ್ಲೆಯಲ್ಲಿ ಶೇ 62 ರಷ್ಟು ಮಳೆ ಕೊರತೆಯಾಗಿದೆ. ಇನ್ನು ರಾಜ್ಯದ 20 ಜಿಲ್ಲೆಗಳಲ್ಲಿ ಶೇ 59 ರಷ್ಟು ಮಳೆ ಕೊರತೆಯಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ನಗರ ಸೇರಿದಂತೆ 10 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ