AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather Forecast: ಕರಾವಳಿಯಲ್ಲಿ ನಾಳೆಯೂ ವರ್ಷಧಾರೆ; ಹಲವೆಡೆ ಗಾಳಿ ಅಬ್ಬರದ ಎಚ್ಚರಿಕೆ

Monsoon 2026: ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಬಿರುಗಾಳಿಯ ಎಚ್ಚರಿಕೆ ನೀಡಿದೆ. ಈ ನಡುವೆ ಜುಲೈ 12ರಿಂದ ರಾಜ್ಯದಲ್ಲಿ ವರುಣಾರ್ಭಟ ಮತ್ತಷ್ಟು ತಗ್ಗಲಿದೆ. ಚಿಕ್ಕಮಗಳೂರಿನ ತೋಟದೂರಿನಲ್ಲಿ ನಿನ್ನೆ ರಾಜ್ಯದಲ್ಲೇ ಅತ್ಯಧಿಕ 82 ಮಿ.ಮೀ ಮಳೆಯಾಗಿದ್ದು, ಹಾಸನದ ಸಕಲೆಶಪುರದ ಹೊಗದಹಳ್ಳದಲ್ಲಿ 71.5 ಮಿ.ಮೀ ಮಳೆ ಸುರಿದಿದೆ ಎಂದು ಇಲಾಖೆ ತಿಳಿಸಿದೆ.

Karnataka Weather Forecast: ಕರಾವಳಿಯಲ್ಲಿ ನಾಳೆಯೂ ವರ್ಷಧಾರೆ; ಹಲವೆಡೆ ಗಾಳಿ ಅಬ್ಬರದ ಎಚ್ಚರಿಕೆ
ಸಾಂದರ್ಭಿಕ ಚಿತ್ರImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Jul 10, 2026 | 8:44 PM

Share

ಮುಖ್ಯಾಂಶಗಳು

  • ಜುಲೈ 12ರಿಂದ ರಾಜ್ಯದಲ್ಲಿ ವರುಣಾರ್ಭಟ ಮತ್ತಷ್ಟು ಇಳಿಕೆ
  • ಈ ನಡುವೆಯೂ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ
  • ಕಳಸದ ತೋಟದೂರಿನಲ್ಲಿ ನಿನ್ನೆ ಅತ್ಯಧಿಕ ವರ್ಷಧಾರೆ

ಬೆಂಗಳೂರು, ಜುಲೈ 10: ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗಂಟೆಗೆ 30–40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ವರ್ಷಧಾರೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 12ರಿಂದ ರಾಜ್ಯದಲ್ಲಿ ವರುಣಾರ್ಭಟ ಮತ್ತಷ್ಟು ತಗ್ಗಲಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ನಾಳೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

ಜುಲೈ 11ರಂದು ಎಲ್ಲೆಲ್ಲಿ ಮಳೆ?

ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಯೂ ಸಾಧಾರಣದಿಂದ ಮಳೆಯಾಗಬಹುದು ಎಂದು ಎಚ್ಚರಿಸಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಭಾರಿ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ; ಸಿಎಂ ಡಿಕೆ ಶಿವಕುಮಾರ್

ಕಳಸದ ತೋಟದೂರಿನಲ್ಲಿ ದಾಖಲೆಯ ಮಳೆ

ಚಿಕ್ಕಮಗಳೂರಿನ ಕಳಸದ ತೋಟದೂರಿನಲ್ಲಿ ನಿನ್ನೆ ರಾಜ್ಯದಲ್ಲಿಯೇ ಅತ್ಯಧಿಕ 82 ಮಿ.ಮೀ. ಮಳೆಯಾಗಿದೆ. ಉಳಿದಂತೆ ದಕ್ಷಿಣ ಕನ್ನಡದ ಪುತ್ತೂರಿನ ನೆಲ್ಯಾಡಿಯಲ್ಲಿ 75.5 ಮಿ.ಮೀ, ಹಾಸನದ ಸಕಲೆಶಪುರದ ಹೊಗದಹಳ್ಳದಲ್ಲಿ 71.5 ಮಿ.ಮೀ, ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ 71 ಮಿ.ಮೀ, ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 50 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಗರಬಸ್ತಿಕೇರಿಯಲ್ಲಿ 43 ಮಿ.ಮೀ, ಉಡುಪಿಯ ಕುಂದಾಪುರದ ಹೊಸಂಗಡಿಯಲ್ಲಿ 38 ಮಿ.ಮೀ, ಬೆಂಗಳೂರು ಗ್ರಾಮಾಂತರದ ದೇವನಳ್ಳಿಯ ಕೋರಮಂಗಲದಲ್ಲಿ 36 ಮಿ.ಮೀ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:49 pm, Fri, 10 July 26

Follow Us
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk