AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಪಡೆದಿದ್ದ ಅಭ್ಯರ್ಥಿಗೆ ವಿಎಒ ಎಕ್ಸಾಂನಲ್ಲಿ 151 ಅಂಕ:ತನಿಖೆಗೆ ಕೆಇಎ ಆದೇಶ

ಕರ್ನಾಟಕದಲ್ಲಿ ಒಂದೊಂದೆ ಪರೀಕ್ಷಾ ಅಕ್ರಮಗಳು ಹೊರಬರುತ್ತಿವೆ. ಸದ್ಯ ಕೆಪಿಎಸ್​​ಸಿ ಪರೀಕ್ಷಾ ಅಕ್ರಮ ಕೋಲಾಹಲ ನಡುವೆ ಇದೀಗ ಕೆಇಎ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದು, ಅಭ್ಯರ್ಥಿಯೋರ್ವನ ವಿರುದ್ಧ ತನಿಖೆಗೆ ಕೆಇಎ ಆದೇಶಿಸಿದೆ. ಅಷ್ಟಕ್ಕೂ ಆಗಿದ್ದೇನು? ಅಭ್ಯರ್ಥಿ ವಿರುದ್ಧ ತನಿಖೆಗೆ ಆದೇಶಿಸಿದ್ಯಾಕೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಪಡೆದಿದ್ದ ಅಭ್ಯರ್ಥಿಗೆ ವಿಎಒ ಎಕ್ಸಾಂನಲ್ಲಿ 151 ಅಂಕ:ತನಿಖೆಗೆ ಕೆಇಎ ಆದೇಶ
KEA
ವಿನಯ್​ ಕಾಶಪ್ಪನವರ್​
| Edited By: |

Updated on:Oct 28, 2026 | 7:04 PM

Share

ಬೆಂಗಳೂರು/ಹಾವೇರಿ, (ಅಕ್ಟೋಬರ್ 28): ಕೆಪಿಎಸ್​​ಸಿ ನೇಮಕಾತಿ ಹಗರಣ ಪ್ರಕರಣ ಕೋಲಾಹಲ ಇನ್ನು ತಣ್ಣಗಾಗಿಲ್ಲ. ರಾಜಕೀಯ ನಾಯಕರ ಆರೋಪ ಪ್ರತ್ಯಾರೋಗಳ ನಡುವೆ ತನಿಖೆ, ಹೋರಾಟ, ಪ್ರತಿಭಟನೆಗಳು ಒಂದಡೆಯಾದರೆ, ಮತ್ತೊಂದೆಡೆ ಕೆಇಎ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಹೌದು…ಹಾವೇರಿ ಮೂಲದ ಅಭ್ಯರ್ಥಿಯೋರ್ವ ವಿಎಒ (ವಿಲೇಜ್ ಅಕೌಂಟ್) ಪರೀಕ್ಷೆಯಲ್ಲಿ ಪಡೆದ ಅಂಕಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಅಭ್ಯರ್ಥಿಯನ್ನು ತನಿಖೆ ಮಾಡುವಂತೆ ಕೆಇಎ ಆದೇಶಿಸಿದೆ. ಈ ಬಗ್ಗೆ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

ಹಾವೇರಿ ಜಿಲ್ಲೆಯ ಶಂಕರ ಬನ್ನೂರು ಎನ್ನುವ ಅಭ್ಯರ್ಥಿ ವಿಎಒ ಪರೀಕ್ಷೆಯಲ್ಲಿ 151 ಅಂಕ ಪಡೆದಿರುವುದು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾಕಂದ್ರೆ ಕೆಎಸ್ಆರ್‌ಪಿ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಅಭ್ಯರ್ಥಿ ಶಂಕರ ಬನ್ನೂರು ಅವರಿಗೆ ವಿಎಒ ಪರೀಕ್ಷೆಯಲ್ಲಿ 151 ಅಂಕ ಬಂದಿದೆ. ಈ ಸಂಬಂಧ ಸಾಮಾಜಿಕ ಜಾಲತಣದಲ್ಲಿ ಬೇರೆ ಬೇರೆ ರೀತಿಯಾಗಿ ಚರ್ಚೆ ಆಗುತ್ತಿದ್ದು, KEA ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ಕೆಲ ಅಂಕಗಳು, ಅಭ್ಯರ್ಥಿಗಳ ಫಲಿತಾಂಶಗಳನ್ನು ಮುಂದಿಟ್ಟು ಇವೆಲ್ಲಾ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅಭ್ಯರ್ಥಿಗಳು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಯಲು ಕೆಇಎ ಮಾಸ್ಟರ್ ಪ್ಲ್ಯಾನ್; ಇನ್ಮುಂದೆ ಟ್ರಿಪಲ್ ಒಎಂಆರ್ ಶೀಟ್ ವ್ಯವಸ್ಥೆ

ತನಿಖೆಗೆ ಆದೇಶಿಸಿದ ಕೆಇಎ

ಹಲವು ಆರೋಪಗಳು ಕೇಳಿಬರುತ್ತಿರುವುದರಿಂದ ಎಚ್ಚೆತ್ತುಕೊಂಡ ಕೆಇಎ, ವಿಎಒ ಪರೀಕ್ಷೆಯಲ್ಲಿ 151 ಅಂಕ ಪಡೆದ ಅಭ್ಯರ್ಥಿ ತನಿಖೆಗೆ ಆದೇಶ ಹೊರಡಿಸಿದೆ. ಪರೀಕ್ಷಾ ಅಕ್ರಮದ ಅನುಮಾನ ಹಿನ್ನೆಲೆ ಹಾವೇರಿ ಜಿಲ್ಲಾಧಿಕಾರಿಗೆ ಕೆಇಎ ಪತ್ರ ಬರೆದಿದ್ದು, ಅಭ್ಯರ್ಥಿ ಪರೀಕ್ಷೆ ಬರೆದಿದ್ದ ಶಿಗ್ಗಾವಿ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯ ಪರಿಶೀಲಿಸಿ ಸಮಗ್ರ ತನಿಖೆಗೆ ಸೂಚನೆ ನೀಡಿದೆ. ಒಂದು ವೇಳೆ ಪರೀಕ್ಷಾ ಕೇಂದ್ರದಲ್ಲಿ ಲೋಪ ಪತ್ತೆಯಾದರೆ ಪೊಲೀಸರಿಗೆ ದೂರು ನೀಡುವಂತೆಯೂ ಸೂಚಿಸಿದೆ.

ಇದೇ ವರ್ಷ ನಡೆದ ಪಿಯುಸಿ ಪರೀಕ್ಷೆಯಲ್ಲಿ ಶೇ.49 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ಅಭ್ಯರ್ಥಿ, KSRP ಪರೀಕ್ಷೆಯಲ್ಲಿ ಪಡೆದಿದ್ದು ಕೇವಲ 25 ಅಂಕ ಮಾತ್ರ. ಆದರೆ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕ ಪಡೆದಿರುವುದಾಗಿ ಉಲ್ಲೇಖಿಸಲಾಗಿದೆ. ವಿಲೇಜ್ ಅಕೌಂಟ್ ಹುದ್ದೆಗೆ 200 ಅಂಕಗಳಿಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಅಭ್ಯರ್ಥಿ 151 ಅಂಕಗಳಿಸಿದ್ದಾನೆ. ಪೋಲಿಸ್ ಕಾನ್ ಸ್ಟೇಬಲ್ ಹುದ್ದೆ 100 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ 25 ಅಂಕ ಗಳಿಸಿದ್ದಾನೆ.ಇಷ್ಟೊಂದು ವ್ಯತ್ಯಾಸ ಹೇಗೆ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಅನುಮಾನಕ್ಕೆ ಹಲವು ಕಾರಣ

ಶಂಕರ್ ಬನ್ನೂರು ಪಿಯುಸಿ ಪಾಸಾದ ವರ್ಷದಲ್ಲೂ ವ್ಯತ್ಯಾಸ ಕಂಡುಬಂದಿದೆ. ವಿಎಒ ಅರ್ಜಿಯಲ್ಲಿ 2013, ಕೆಎಸ್ಆರ್‌ಪಿ ಅರ್ಜಿಯಲ್ಲಿ 2026 ಎಂದು ದಾಖಲಾಗಿದೆ. ಹಾಗೇ 31ನೇ ವಯಸ್ಸಿನಲ್ಲಿ ಪಿಯುಸಿ ಪಾಸಾದ ಶಂಕರ್ ಬನ್ನೂರು ಅಂಕಗಳೇ ಈಗ ಅನುಮಾನಕ್ಕೆ ಕಾರಣವಾಗಿದೆ. 2026 ಸೆಪ್ಟೆಂಬರ್ 20ರಂದು ನಡೆದ KSRP ಪರೀಕ್ಷೆಯಲ್ಲಿ 100ಕ್ಕೆ ಕೇವಲ 25 ಅಂಕ, ಗೊತ್ತಿಲ್ಲದ ಪ್ರಶ್ನೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿ ಟಿಕ್ ಮಾಡಿದ್ದರು. 2026 ಅಕ್ಟೋಬರ್ 4ರಂದು ನಡೆದ VAO ಪರೀಕ್ಷೆಯಲ್ಲಿ ಮಾತ್ರ ಭರ್ಜರಿ ಅಂಕಗಳಿಕೆ ಮಾಡಿದ್ದಾರೆ.

200 ಅಂಕಗಳ VAO ಪರೀಕ್ಷೆಯಲ್ಲಿ 150ಕ್ಕೂ ಅಧಿಕ ಅಂಕ ಪಡೆದಿರುವ ಆರೋಪ ಕೇಳಿಬಂದಿದೆ. 500 ಹುದ್ದೆಗಳ ನೇಮಕಾತಿಗಾಗಿ ನಡೆದ VAO ಪರೀಕ್ಷೆಯ ಅಂಕಗಳೇ ಅಕ್ರಮದ ಆರೋಪಕ್ಕೆ ಕಾರಣವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ, ಮಧ್ಯಾಹ್ನದ ಪರೀಕ್ಷೆಗೂ ಒಬ್ಬರೇ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸಿದ್ದರು. ಎರಡೂ ಅವಧಿಯ ಪರೀಕ್ಷೆಗಳಿಗೆ ಒಂದೇ ಸಹಿ ಹಾಕಲಾಗಿದೆ. KSRP ಪರೀಕ್ಷೆಯಲ್ಲಿ ಕಡಿಮೆ ಅಂಕ.. VAO ಪರೀಕ್ಷೆಯಲ್ಲಿ 150ಕ್ಕೂ ಅಧಿಕ ಅಂಕ ಹೇಗೆ ಎಂದು ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಖಚಹರೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಯ ಹಾಜರಾತಿ ದೃಢವಾಗಿದ್ದು, ಒಎಂಆರ್‌ ಪರಿಶೀಲನೆಯೂ ನಡೆದಿದೆ. ಅಕ್ಟೋಬರ್ 5ರಂದು ಅಭ್ಯರ್ಥಿಯ ಒಎಂಆರ್‌ ಸ್ಕ್ಯಾನ್ ಮಾಡಿ ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ಮೂಲಕ ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಪಾರದರ್ಶಕ ತನಿಖೆಗೆ ಕೆಇಎ ಒತ್ತು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Wed, 28 October 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ