ಕಾಂಗ್ರೆಸ್ ಸರ್ಕಾರದ ಬೇಜವ್ದಾರಿ ಆಡಳಿತಕ್ಕೆ ಕರ್ನಾಟಕ ಆಹುತಿ: ಉಚಿತ ಹೆಸರಲ್ಲಿ ಜನರ ಜೇಬಿಗೆ ಕನ್ನ; ಜೋಶಿ ವಾಗ್ದಾಳಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ 'ಉಚಿತ ಗ್ಯಾರಂಟಿ' ಯೋಜನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮವಾಗಿ ಬಸ್ ಟಿಕೆಟ್ ಹಾಗೂ ಹಾಲಿನ ದರಗಳು ಗಣನೀಯವಾಗಿ ಏರಿಕೆ ಮಾಡಲಾಗಿದೆ. ಇದು ಜನರ ಜೇಬಿಗೆ ಕತ್ತರಿ ಹಾಕಿ, ರಾಜ್ಯವನ್ನು ಆರ್ಥಿಕ ಪತನದತ್ತ ಕೊಂಡೊಯ್ಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಮುಖ್ಯಾಂಶಗಳು
- ಕೆಟ್ಟ ಉದಾಹರಣೆಯ ಕರ್ನಾಟಕ ಕಾಂಗ್ರೆಸ್ ಸರ್ಕಾರ
- ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪ್ರಗತಿ ಸಂಪೂರ್ಣ ಶೂನ್ಯ
- ಎಕ್ಸ್ ಖಾತೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ
ಬೆಂಗಳೂರು, ನವೆಂಬರ್ 04: ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸಾರಿಗೆ ಬಸ್ ಟಿಕೆಟ್ ದರವನ್ನ ಏರಿಕೆ ಮಾಡಲಾಗಿದೆ. ಟಿಕೆಟ್ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ನಾಳೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಸದ್ಯ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ‘ಕಾಂಗ್ರೆಸ್ ಸರ್ಕಾರದ ಬೇಜವ್ದಾರಿ ಆಡಳಿತಕ್ಕೆ ಕರ್ನಾಟಕ ಆಹುತಿ, ಉಚಿತ ಹೆಸರಲ್ಲಿ ಜನರ ಜೇಬಿಗೆ ಕನ್ನ’ ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ
ಈ ಕುರಿತಾಗಿ ಟ್ವೀಟ್ ಮಾಡಿರುವ ಸಚಿವ ಪ್ರಲ್ಹಾದ್ ಜೋಶಿ, ‘ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು, ಆರ್ಥಿಕ ಪತನದತ್ತ ಕೊಂಡೊಯ್ದು, ದುರಾಡಳಿತದಿಂದ ಮೆರೆದು, ರಾಜ್ಯದ ಹಿತವನ್ನು ಹದಗೆಡಿಸಿದ ಕೆಟ್ಟ ಉದಾಹರಣೆಯ ಕರ್ನಾಟಕ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪ್ರಗತಿ ಸಂಪೂರ್ಣವಾಗಿ ಶೂನ್ಯವಾಗಿಸಿದೆ. ‘ಆಡಳಿತ ಎಂದರೆ ಬೊಕ್ಕಸ ಭರ್ತಿ ಮಾಡಿ ಬೆಳೆಸುವುದು’ ಎಂಬುದನ್ನು ಮರೆತು, ಅಸಂಘಟಿತ ಮತ್ತು ಅವೈಜ್ಞಾನಿಕ ಉಚಿತ ಭರವಸೆಗಳ ಮೂಲಕ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ಹಾಗೂ ಆರ್ಥಿಕತೆಯನ್ನು ತಮ್ಮ ದುರುದ್ದೇಶಕ್ಕಾಗಿ ಮುಳುಗಿಸಿದೆ’ ಎಂದು ಕಿರಿಕಾರಿದ್ದಾರೆ.
ಪ್ರಲ್ಹಾದ್ ಜೋಶಿ ಟ್ವೀಟ್
ಕಾಂಗ್ರೆಸ್ ಸರ್ಕಾರದ ಬೇಜವ್ದಾರಿ ಆಡಳಿತಕ್ಕೆ ಕರ್ನಾಟಕ ಆಹುತಿ: ಉಚಿತ ಹೆಸರಲ್ಲಿ ಜನರ ಜೇಬಿಗೆ ಕನ್ನ!
ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು, ಆರ್ಥಿಕ ಪತನದತ್ತ ಕೊಂಡೊಯ್ದು, ದುರಾಡಳಿತದಿಂದ ಮೆರೆದು, ರಾಜ್ಯದ ಹಿತವನ್ನು ಹದಗೆಡಿಸಿದ ಕೆಟ್ಟ ಉದಾಹರಣೆಯ ಕರ್ನಾಟಕ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪ್ರಗತಿ ಸಂಪೂರ್ಣವಾಗಿ ಶೂನ್ಯವಾಗಿಸಿದೆ. ‘ಆಡಳಿತ ಎಂದರೆ ಬೊಕ್ಕಸ ಭರ್ತಿ ಮಾಡಿ ಬೆಳೆಸುವುದು’ ಎಂಬುದನ್ನು ಮರೆತು, ಅಸಂಘಟಿತ ಮತ್ತು ಅವೈಜ್ಞಾನಿಕ ಉಚಿತ ಭರವಸೆಗಳ ಮೂಲಕ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ಹಾಗೂ ಆರ್ಥಿಕತೆಯನ್ನು ತಮ್ಮ ದುರುದ್ದೇಶಕ್ಕಾಗಿ ಮುಳುಗಿಸಿದೆ.
ಮೊದಲು “ಉಚಿತ ಪ್ರಯಾಣ” ಎಂದು ಆರ್ಭಟಿಸಿ ಪ್ರಚಾರ ಗಿಟ್ಟಿಸಿಕೊಂಡ ಸರ್ಕಾರ, ಇಂದು KSRTC, BMTC ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳನ್ನು ಸಂಪೂರ್ಣವಾಗಿ ಆರ್ಥಿಕ ದಿವಾಳಿತನಕ್ಕೆ ತಳ್ಳಿದೆ.
– ಸಾರಿಗೆ ಸಂಸ್ಥೆಗಳ ಬಳಿ ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ! – ಉಚಿತ ಗ್ಯಾರಂಟಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು, ನಿಗಮಗಳನ್ನು ನಷ್ಟದ ಕೂಪಕ್ಕೆ ತಳ್ಳಲಾಗಿದೆ. – ಹಿಂದೆ ಲಾಭದಲ್ಲಿದ್ದ ಹಾಗೂ ಯಶಸ್ವಿಯಾಗಿ ನಡೆಯುತ್ತಿದ್ದ ನಮ್ಮ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಗಳು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೂರುವರೆ ವರ್ಷಗಳಲ್ಲೇ ಸಂಪೂರ್ಣ ನಷ್ಟದಲ್ಲಿ ಮುಳುಗಿಹೋಗಿವೆ.
ಈ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು, ಈಗ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಭಾರಿ ಪ್ರಮಾಣದ ಬಸ್ ಟಿಕೆಟ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಚಾವಟಿ ಏಟು ನೀಡಿ, ಸಂತೋಷದಲ್ಲಿ ಕಾಂಗ್ರೆಸ್ ಸರ್ಕಾರ ತೇಲುತ್ತಿದೆ.
ಕೆಎಂಎಫ್ ನಂದಿನಿ ಹಾಲು ಮೊಸರು ಇತಿಹಾಸದಲ್ಲೇ ಕಾಣದ ಅತಿ ದೊಡ್ಡ ಪ್ರೈಸ್ ಹೈಕ್ ಮಾಡಲಾಯಿತು. ಇದೀಗ ಬಡವರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪ್ರತಿದಿನ ಬಳಸುವ ಬಸ್ ಟಿಕೆಟ್ ದರಗಳನ್ನು ಅತಿರೇಕವಾಗಿ ಹೆಚ್ಚಿಸಲಾಗಿದೆ. ಒಂದೆಡೆ ‘ಉಚಿತ’ ಎಂದು ಹೇಳಿ ಇನ್ನೊಂದೆಡೆ ದೈನಂದಿನ ಅತ್ಯಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಸಿ ಜನರ ಜೇಬಿನಿಂದ ಹತ್ತು ಪಟ್ಟು ದಂಡ ವಸೂಲಿ ಮಾಡುವುದು ಯಾವ ಸೀಮೆಯ ಗ್ಯಾರಂಟಿ?
#CongressFailsKarnataka
— Pralhad Joshi (@JoshiPralhad) November 4, 2026
‘ಮೊದಲು “ಉಚಿತ ಪ್ರಯಾಣ” ಎಂದು ಆರ್ಭಟಿಸಿ ಪ್ರಚಾರ ಗಿಟ್ಟಿಸಿಕೊಂಡ ಸರ್ಕಾರ, ಇಂದು KSRTC, BMTC ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳನ್ನು ಸಂಪೂರ್ಣವಾಗಿ ಆರ್ಥಿಕ ದಿವಾಳಿತನಕ್ಕೆ ತಳ್ಳಿದೆ. ಸಾರಿಗೆ ಸಂಸ್ಥೆಗಳ ಬಳಿ ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉಚಿತ ಗ್ಯಾರಂಟಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ ಬಾಕಿ ಉಳಿಸಿಕೊಂಡು, ನಿಗಮಗಳನ್ನು ನಷ್ಟದ ಕೂಪಕ್ಕೆ ತಳ್ಳಲಾಗಿದೆ. ಹಿಂದೆ ಲಾಭದಲ್ಲಿದ್ದ ಹಾಗೂ ಯಶಸ್ವಿಯಾಗಿ ನಡೆಯುತ್ತಿದ್ದ ನಮ್ಮ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಗಳು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೂರುವರೆ ವರ್ಷಗಳಲ್ಲೇ ಸಂಪೂರ್ಣ ನಷ್ಟದಲ್ಲಿ ಮುಳುಗಿಹೋಗಿವೆ’ ಎಂದಿದ್ದಾರೆ.
ಇದನ್ನೂ ಓದಿ: ಸಾರಿಗೆ ಬಸ್ಗಳ ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ
‘ಈ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು, ಈಗ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಭಾರಿ ಪ್ರಮಾಣದ ಬಸ್ ಟಿಕೆಟ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಚಾವಟಿ ಏಟು ನೀಡಿ, ಸಂತೋಷದಲ್ಲಿ ಕಾಂಗ್ರೆಸ್ ಸರ್ಕಾರ ತೇಲುತ್ತಿದೆ.’
ಜನರಿಂದ ದಂಡ ವಸೂಲಿ ಮಾಡುವುದು ಯಾವ ಸೀಮೆಯ ಗ್ಯಾರಂಟಿ?
‘ಕೆಎಂಎಫ್ ನಂದಿನಿ ಹಾಲು ಮೊಸರು ಇತಿಹಾಸದಲ್ಲೇ ಕಾಣದ ಅತಿ ದೊಡ್ಡ ಪ್ರೈಸ್ ಹೈಕ್ ಮಾಡಲಾಯಿತು. ಇದೀಗ ಬಡವರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪ್ರತಿದಿನ ಬಳಸುವ ಬಸ್ ಟಿಕೆಟ್ ದರಗಳನ್ನು ಅತಿರೇಕವಾಗಿ ಹೆಚ್ಚಿಸಲಾಗಿದೆ. ಒಂದೆಡೆ ‘ಉಚಿತ’ ಎಂದು ಹೇಳಿ ಇನ್ನೊಂದೆಡೆ ದೈನಂದಿನ ಅತ್ಯಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಸಿ ಜನರ ಜೇಬಿನಿಂದ ಹತ್ತು ಪಟ್ಟು ದಂಡ ವಸೂಲಿ ಮಾಡುವುದು ಯಾವ ಸೀಮೆಯ ಗ್ಯಾರಂಟಿ’ ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Wed, 4 November 26




