AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವಣ್ಣ ವಿರುದ್ಧ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ: 100ಕ್ಕೂ ಹೆಚ್ಚು ಸಾಕ್ಷ್ಯಗಳು ಸಂಗ್ರಹ

ಕೆಆರ್​ ನಗರ ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ಹೆಚ್​​ಡಿ ರೇವಣ್ಣಗೆ ಜೈಲುಶಿಕ್ಷೆಯಾಗಿತ್ತು. ಕಿಡ್ನ್ಯಾಪ್ ಸಂತ್ರಸ್ತೆಯ ದೂರಿನ ಮೇಲೆ ರೇವಣ್ಣ ವಿರುದ್ಧ ಕೇಸ್‌ ದಾಖಲಾಗಿತ್ತು. 10 ದಿನ ಜೈಲು ಅನುಭವಿಸಿ ಹೊರ ಬಂದಿದ್ದರು. ಸದ್ಯ ಪ್ರಕರಣ ಬಹುತೇಕ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ರೇವಣ್ಣ ವಿರುದ್ಧ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ: 100ಕ್ಕೂ ಹೆಚ್ಚು ಸಾಕ್ಷ್ಯಗಳು ಸಂಗ್ರಹ
ರೇವಣ್ಣ ವಿರುದ್ಧ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ: 100ಕ್ಕೂ ಹೆಚ್ಚು ಸಾಕ್ಷ್ಯಗಳು ಸಂಗ್ರಹ
ಗಂಗಾಧರ​ ಬ. ಸಾಬೋಜಿ
|

Updated on:Jun 28, 2024 | 10:47 PM

Share

ಬೆಂಗಳೂರು, ಜೂನ್​ 28: ಮಾಜಿ ಸಚಿವ ಹೆಚ್​​ಡಿ ರೇವಣ್ಣ(HD Revanna)  ವಿರುದ್ಧದ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದ (Kidnap Case) ತನಿಖೆ ಅಂತಿಮ ಹಂತಕ್ಕೆ ತಲುಪ್ಪಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ತಯಾರಿ ನಡೆಸಿದೆ. ಸಂತ್ರಸ್ತೆ ಕಿಡ್ನ್ಯಾಪ್ ಸಂಬಂಧ ರೇವಣ್ಣ ಸೇರಿ ಎಂಟು ಜನರನ್ನು ಎಸ್​ಐಟಿ ಬಂಧಿಸಿತ್ತು. ಕೆಆರ್​ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಎಸ್ಐಟಿಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಅಧಿಕಾರಿಗಳು ತನಿಖೆ ನಡೆಸಿದ್ದರು. ಸದ್ಯ ಅಂತಿಮ ಹಂತಕ್ಕೆ ಬಂದಿದೆ.

ಸದ್ಯ ಪ್ರಕರಣ ಸಂಬಂಧ ಬಹುತೇಕ ತನಿಖೆ ಪೂರ್ಣಗೊಂಡಿದ್ದು, ಸುಮಾರು 25 ಕಡೆ ಸ್ಥಳ ಮಹಜರು ಮಾಡಿದ್ದರು. ಜೊತೆಗೆ ಸಾಕ್ಷಿಗಳ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳು, ಡಿಜಿಟಲ್ ಸಾಕ್ಷ್ಯಗಳು ಸಂಗ್ರಹಿಸಲಾಗಿದೆ. ಆ ಮೂಲಕ 100 ಕ್ಕೂ ಹೆಚ್ಚು ಸಾಕ್ಷ್ಯಗಳ ಸಂಗ್ರಹ ಮಾಡಲಾಗಿದೆ.

ಇದನ್ನೂ ಓದಿ: ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಚ್​ಡಿ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್​

ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಎಸ್ಐಟಿ ತಂಡ ಸಿದ್ದತೆ ನಡೆಸಿದೆ. ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ‌ರನ್ನೂ ವಿಚಾರಣೆ ಮಾಡಲಾಗಿತ್ತು. ಭವಾನಿ ರೇವಣ್ಣ‌ ಬಂಧನಕ್ಕೆ ಎಸ್ಐಟಿ ವಾರೆಂಟ್ ಪಡೆದಿತ್ತು. ಬಳಿಕ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಸದ್ಯ ಅವರ ಹೇಳಿಕೆಯನ್ನು ಎಸ್ಐಟಿಯಿಂದ ದಾಖಲಿಸಲಾಗಿದೆ.

ಕಿಡ್ನ್ಯಾಪ್ ಸಂತ್ರಸ್ತೆಯ ದೂರಿನ ಮೇಲೆ ರೇವಣ್ಣ ವಿರುದ್ಧ ಕೇಸ್‌ ದಾಖಲಾಗಿತ್ತು. 10 ದಿನ ಜೈಲು ಅನುಭವಿಸಿ ಹೆಚ್​ಡಿ ರೇವಣ್ಣ ಈಗ ಹೊರ ಬಂದಿದ್ದರು. 3 ದಿನ ಪೊಲೀಸ್ ಕಸ್ಟಡಿ ಮತ್ತು 6 ದಿನ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು. ಪತ್ನಿ ಭವಾನಿ ರೇವಣ್ಣ ವಿರುದ್ಧ ಮೈಸೂರು ಜಿಲ್ಲೆ ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಣ್ತಮ್ಮಾಸ್: ಕ್ವಾರಂಟೈನ್ ಬ್ಯಾರಕ್​ನಲ್ಲಿ ರೇವಣ್ಣ ಸನ್ಸ್

ಭವಾನಿ ರೇವಣ್ಣ ಸೂಚನೆ ಮೇರೆಗೆ ಕಾರು ಚಾಲಕ ಅಜಿತ್‌, ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದ ಆರೋಪವಿತ್ತು. ಕಿಡ್ನ್ಯಾಪ್ ಬಗ್ಗೆ K.R.ನಗರ ಠಾಣೆಯಲ್ಲಿ ದೂರು ಸಂತ್ರಸ್ತೆ ಮಗ ದೂರು ನೀಡಿದ್ದರು. ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್ ಮೆಟ್ಟಿಲೇರಿದ್ದ ಭವಾನಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ, ಕೆ.ಆರ್​.ನಗರ ಮತ್ತು ಹಾಸನಕ್ಕೆ ಹೋಗುವಂತಿಲ್ಲ ಅಂತಾ ಷರತ್ತು ವಿಧಿಸಿ ಭವಾನಿಗೆ ಬೇಲ್ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:38 pm, Fri, 28 June 24

Follow Us
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ