ಶಾಲಾ ಆಡಳಿತ ಮಂಡಳಿಯ ಸದಸ್ಯನಿಂದ ಬಾಲಕನ ಮೇಲೆ ಮನ ಬಂದಂತೆ ಹಲ್ಲೆ, ಆಸ್ಪತ್ರೆ ಸೇರಿದ ಬಾಲಕ
ಶಾಲಾ ಆಡಳಿತ ಮಂಡಳಿ ಸದಸ್ಯ ಕಿಶೋರ್ ಬೆಂಚಿನ ಮೇಲೆ ಬಾಲಕನನ್ನು ಮಲಗಿಸಿ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ದೊಣ್ಣೆ ಪೆಟ್ಟು ತಿಂದ ಬಾಲಕ ಅಸ್ವಸ್ಥಗೊಂಡಿದ್ದು ಬಾಲಕನಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಡಿಕೇರಿ: 3ನೇ ತರಗತಿಯ ಬಾಲಕನ ಮೇಲೆ ಶಾಲಾ ಆಡಳಿತ ಮಂಡಳಿಯ ಸದಸ್ಯ ದೊಣ್ಣೆಯಿಂದ ಹಲ್ಲೆ ನಡೆಸಿರುವ ಅಮಾನುಷ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಬಾಲಕನನ್ನು ಬೆಂಚ್ ಮೇಲೆ ಮಲಗಿಸಿ ದೊಣ್ಣೆಯಿಂದ ಮನಬಂದಂತೆ ಹಲ್ಲೆ ಮಾಡಲಾಗಿದೆ.
ಶಾಲಾ ಆಡಳಿತ ಮಂಡಳಿ ಸದಸ್ಯ ಕಿಶೋರ್ ಬೆಂಚಿನ ಮೇಲೆ ಬಾಲಕನನ್ನು ಮಲಗಿಸಿ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ದೊಣ್ಣೆ ಪೆಟ್ಟು ತಿಂದ ಬಾಲಕ ಅಸ್ವಸ್ಥಗೊಂಡಿದ್ದು ಬಾಲಕನಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಕಿಶೋರ್ ವರ್ತನೆಗೆ ಪೋಷಕರು ಆಕ್ರೋಶ ಹೊರ ಹಾಕಿದ್ದು ಕಿಶೋರ್ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ ನಡೆಸಿ ಪೋಷಕರಿಗೆ ತಿಳಿಸಬಾರದೆಂದು ಬೆದರಿಕೆ ಕಿಶೋರ್ 3ನೇ ತರಗತಿಯ ಬಾಲಕನ ಮೇಲೆ ಹಲ್ಲೆ ನಡೆಸಿ ಬಳಿಕ ಹಲ್ಲೆ ನಡೆಸಿದ ವಿಷಯವನ್ನು ಪೋಷಕರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದನಂತೆ. ಈ ಹಿಂದೆ ಕೂಡ ಹಲವು ಮಕ್ಕಳ ಮೇಲೆ ಇದೇ ರೀತಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಹಣ ಕೇಳಿದಕ್ಕೆ ಮಹಿಳೆ ಮೇಲೆ ಹಲ್ಲೆ ಬೆಂಗಳೂರು: ಮದುವೆ ಮನೆಯಲ್ಲಿ ತೊಡಿಸಿದ ಬಳೆ ಬಿಲ್ಲು ಕೇಳಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ತೋಣಚಿನಕುಪ್ಪೆ ಗ್ರಾಮದ ಸಂತೋಷ್ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ.
ಮದುವೆ ಮನೆಯಲ್ಲಿ ಬಳೆ ಶಾಸ್ತ್ರದ ವೇಳೆ ತೊಡಿಸಿದ ಬಳೆ ಹಣ ಕೇಳಿದಕ್ಕೆ ಸಂತೋಷ್ ಎಂಬುವವರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಪದ್ಮಮ್ಮ(50) ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದುವರೆ ವರ್ಷದ ಹಿಂದೆ ಪದ್ಮಮ್ಮ ಮನೆಯ ಪಕ್ಕದ ಮನೆಯಲ್ಲಿರುವ ಸಂತೋಷ್ ಮದುವೆ ಸಂದರ್ಭದಲ್ಲಿ, ಪದ್ಮಮ್ಮ ಮದುವೆ ಹೆಣ್ಣಿಗೆ ಹಾಗೂ ಮದುವೆಗೆ ಬಂದವರಿಗೆ ಬಳೆ ಶಾಸ್ತ್ರದ ವೇಳೆ ಬಳೆ ತೊಡಿಸಿದ್ದರು. ಒಟ್ಟು 3ಸಾವಿರದ ಬಿಲ್ ಆಗಿತ್ತು. ಮದುವೆ ದಿನವೇ ಒಂದು ಸಾವಿರ ಹಣ ಕೊಟ್ಟು ಉಳಿದ ಹಣ ಕೊಡುವುದಾಗಿ ಹೇಳಿ ಸುಮ್ಮನಾಗಿದ್ರು. ಹೀಗಾಗಿ ಉಳಿದ 2 ಸಾವಿರ ಹಣಕ್ಕಾಗಿ ಪದ್ಮಮ್ಮ ಆಗಾಗಾ ಸಂತೋಷ್ ಬಳಿ ಕೇಳುತ್ತಿದ್ದರು. ಆದ್ರೆ ಕೊಡುವುದಾಗಿ ಕೇಳಿ ಸಂತೋಷ್ ಸುಮ್ಮನಾಗಿದ್ದ.
ಅದರಂತೆ ಎರಡು ದಿನ ಹಿಂದೆ ರಾತ್ರಿ 9 ಗಂಟೆ ಸುಮಾರಿಗೆ ಪದ್ಮಮ್ಮ ಮತ್ತೆ ಸಂತೋಷ್ ಬಳಿ ಬಾಕಿ ಹಣ ಕೊಡುವುದಾಗಿ ಕೇಳಿದ್ದಾರೆ. ಖರ್ಚುಗೆ ಹಣವಿಲ್ಲ ಸ್ವಲ್ಪ ಹಣವಾದ್ರು ಕೊಡಿ ಅಂತ ಕೇಳಿದ್ದಕ್ಕೆ ಸಂತೋಷ್, ಜನರೆದುರು ಮರ್ಯಾದೆ ಹೋಯಿತೆಂದು ರೊಟ್ಟಿ ಹೆಂಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪದ್ಮಮ್ಮ ದೂರು ದಾಖಲಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಿಂದಿಯಲ್ಲಿ ‘ಕೆಜಿಎಫ್’ ವರ್ಸಸ್ ‘ಪುಷ್ಪ’; ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಗೆದ್ದಿದ್ದು ಯಾರು?