ತುಂಗಭದ್ರೆಗೆ ಹರಿದು ಬರ್ತಿದೆ ಭಾರೀ ಪ್ರಮಾಣದ ನೀರು: ಒಂದೇ ವಾರದಲ್ಲಿ ಎಷ್ಟು ಸಂಗ್ರಹವಾಗಿದೆ ಗೊತ್ತಾ?
ಕಳೆದ ಕೆಲದಿನಗಳಿಂದ ತುಂಗಭದ್ರಾ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ ಒಂದೇ ವಾರದಲ್ಲಿ ಡ್ಯಾಂಗೆ ಹತ್ತು ಟಿಎಂಸಿ ನೀರು ಸಂಗ್ರಹವಾಗಿದ್ದು, ಈ ಭಾಗದ ಜನರ ಸಂತಸ ಇಮ್ಮಡಿಗೊಳಿಸಿದೆ. ಕೊಪ್ಪಳ, ರಾಯಚೂರು, ವಿಜಯನಗರ, ರಾಯಚೂರು ಜಿಲ್ಲೆಯ ಜನರ ಸಂತಸ ಹೆಚ್ಚಾಗುತ್ತದೆ.
ಕೊಪ್ಪಳ, ಜುಲೈ 08: ಅದು ನಾಲ್ಕು ಜಿಲ್ಲೆಯ ಜನರಿಗೆ ಜೀವನಾಡಿಯಾಗಿರುವ ಜಲಾಶಯ. ಆ ಜಲಾಶಯ ತುಂಬಿದರೆ ಮಾತ್ರ ನಾಲ್ಕು ಜಿಲ್ಲೆಯ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಬಲಬರುತ್ತದೆ. ಆದರೆ ಕಳೆದ ವರ್ಷ ಬರಗಾಲದಿಂದ ಬರಿದಾಗಿದ್ದ ಡ್ಯಾಂಗೆ ಇದೀಗ ಜೀವಕಳೆ ಬಂದಿದೆ. ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ (Tungabhadra) ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಒಂದೇ ವಾರದಲ್ಲಿ ಡ್ಯಾಂಗೆ ಹದಿನಾಲ್ಕು ಟಿಎಂಸಿ ನೀರು ಬಿಡಲಾಗಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ, ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. 105.788 ಟಿಎಂಸಿ ನೀರು ಸಂಗ್ರಹ ಸಾಮಾರ್ಥವಿರುವ ತುಂಗಭದ್ರಾ ಜಲಾಶಯ ತುಂಬಿದ್ರೆ ಕೊಪ್ಪಳ, ರಾಯಚೂರು, ವಿಜಯನಗರ, ರಾಯಚೂರು ಜಿಲ್ಲೆಯ ಜನರ ಸಂತಸ ಹೆಚ್ಚಾಗುತ್ತದೆ. ಈ ಡ್ಯಾಂ ಮೇಲೆಯೇ ನಾಲ್ಕು ಜಿಲ್ಲೆಯ ಬಹುತೇಕ ಜನರು ಅವಲಂಬಿತರಾಗಿದ್ದಾರೆ. ಡ್ಯಾಂ ತುಂಬಿದ್ರೆ ಈ ಭಾಗದ ಜನರ ಸಂತಸ ಹೆಚ್ಚಾಗುತ್ತದೆ. ಡ್ಯಾಂ ತುಂಬದೇ ಇದ್ರೆ ಜನರಿಗೆ ಸಂಕಷ್ಟ ಆರಂಭವಾಗುತ್ತದೆ.
ಇದನ್ನೂ ಓದಿ: 24 ಗಂಟೆಯಲ್ಲಿ ತುಂಗಭದ್ರೆಗೆ ಹರಿದುಬಂತು ಬರೋಬ್ಬರಿ 4 ಟಿಎಂಸಿ ನೀರು, ರೈತರು ಫುಲ್ ಖುಷ್
ಕಳೆದ ವರ್ಷ ಬರಗಾಲದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿರಲಿಲ್ಲ. ಹೀಗಾಗಿ ಎರಡನೇ ಬೆಳೆಗೆ ಕೂಡ ಡ್ಯಾಂ ನೀರು ಬಿಟ್ಟಿರಲಿಲ್ಲ. ಕುಡಿಯುವ ನೀರಿಗೆ ಕೂಡ ಅನೇಕ ಕಡೆ ತೊಂದರೆಯಾಗಿತ್ತು. ಆದರೆ ಈ ಬಾರಿ ಕೂಡ ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆದರೂ ಕೂಡ ತುಂಗಭದ್ರಾ ಜಲಾಶಯಕ್ಕೆ ಇದೀಗ ಜೀವಕಳೆ ಬಂದಿದೆ.
ಕಳೆದ ಕೆಲದಿನಗಳಿಂದ ತುಂಗಭದ್ರಾ ನದಿ ಪಾತ್ರದಲ್ಲಿ, ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ ಒಂದೇ ವಾರದಲ್ಲಿ ಡ್ಯಾಂಗೆ ಹತ್ತು ಟಿಎಂಸಿ ನೀರು ಸಂಗ್ರಹವಾಗಿದ್ದು, ಈ ಭಾಗದ ಜನರ ಸಂತಸ ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: ಬಿಸಿಲನಾಡು ಕೊಪ್ಪಳದಲ್ಲಿ ಮಲೆನಾಡ ಅನುಭವ! ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಕಪೀಲತೀರ್ಥ ಜಲಪಾತ
ಕಳೆದ ಹತ್ತು ದಿನಗಳಿಂದ ಡ್ಯಾಂಗೆ ಅಪಾರ ಪ್ರಮಾಣದು ನೀರು ಹರಿದು ಬರ್ತಿದೆ. ಮಲೆನಾಡಿನಲ್ಲಿ ಉತ್ತಮ ಮಳಯಾಗಿದ್ದರಿಂದ ಪ್ರತಿನಿತ್ಯ ತುಂಗಭದ್ರಾ ಜಲಾಶಯಕ್ಕೆ 30ರಿಂದ 50 ಸಾವಿರ ಕ್ಯೂಸೆಕ್ವರಗೆ ನೀರು ಹರಿದು ಬರುತ್ತಿದೆ. ಹೀಗಾಗಿ ಜುಲೈ 1 ರಂದು 6.78 ಟಿಎಂಸಿ ನೀರು ಮಾತ್ರ ಡ್ಯಾಂ ನಲ್ಲಿತ್ತು. ಆದರೆ ಜುಲೈ 8 ರಂದು ಬೆಳಿಗ್ಗೆವರಗೆ ಡ್ಯಾಂ ನಲ್ಲಿ ಬರೋಬ್ಬರಿ 20.851 ಟಿಎಂಸಿ ನೀರು ಸಂಗ್ರಹವಾಗಿದೆ. ವಿಶೇಷ ಅಂದರೆ ಕಳೆದ ವರ್ಷ ಇದೇ ದಿನಕ್ಕೆ ಡ್ಯಾಂ ನಲ್ಲಿ ಕೇವಲ 3.81 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಆದರೆ ಈ ಬಾರಿ ಪ್ರತಿದಿನ ಒಂದರಿಂದ ಒಂದುವರೆ ಟಿಎಂಸಿ ನೀರು ಡ್ಯಾಂಗೆ ಹರಿದು ಬರುತ್ತಿದೆ. ಇದೇ ರೀತಿ ಇನ್ನು ಕೆಲ ದಿನಗಳವರಗೆ ನೀರಿನ ಒಳ ಹರಿವು ಬಂದ್ರೆ ಮಾತ್ರ ಡ್ಯಾಂ ತುಂಬಲಿದೆ.
ಸದ್ಯ ಬರಿದಾಗಿದ್ದ ಡ್ಯಾಂ ಗೆ ಇದೀಗ ಜೀವಕಳೆ ಬಂದಿದೆ. ಆದರೆ ಡ್ಯಾಂ ತುಂಬಬೇಕಾದ್ರೆ ಇನ್ನು ಅನೇಕ ದಿನಗಳ ಕಾಲ ನಿರಂತರವಾಗಿ ಮಳೆಯಾಗಬೇಕು. ನೀರು ಹರಿದು ಬರಬೇಕು. ತುಂಗಭದ್ರಾ ಜಲಾಶಯದ ಕೆಳಭಾಗದ ಜನರು ಡ್ಯಾಂ ತುಂಬಲಿ, ನಮ್ಮ ಬಾಳು ಹಸನಾಗಲಿ ಅನ್ನೋ ಆಶಾ ಭಾವನೆಯನ್ನು ಹೊಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.