AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಜನಾದ್ರಿಯಲ್ಲಿ ಪೂಜಾ ವಿವಾದ: ಕೋರ್ಟ್​ ಆದೇಶದಂತೆ ಪೂಜೆಗೆ ಬಂದ ಅರ್ಚಕ ಬಾಬಾ ವಿರುದ್ಧ ಕೇಸ್ ಬುಕ್

ಕೊಪ್ಪಳದ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಪೂಜಾ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿದೆ. ಹೀಗಿರುವಾಗ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಜನಾದ್ರಿಯಲ್ಲಿ ಪೂಜಾ ವಿವಾದ: ಕೋರ್ಟ್​ ಆದೇಶದಂತೆ ಪೂಜೆಗೆ ಬಂದ ಅರ್ಚಕ ಬಾಬಾ ವಿರುದ್ಧ ಕೇಸ್ ಬುಕ್
ಅರ್ಚಕ ವಿದ್ಯಾದಾಸ್ ಬಾಬಾImage Credit source: tv9 kannada
ಶಿವಕುಮಾರ್ ಪತ್ತಾರ್
| Edited By: |

Updated on: Oct 14, 2026 | 3:28 PM

Share

ಮುಖ್ಯಾಂಶಗಳು

  • ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ದೂರು ದಾಖಲು
  • ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಬಾಬಾ ಅಡ್ಡಿ
  • ಗಂಗಾವತಿ ತಹಶೀಲ್ದಾರ್ ವಿನಾಯಕ್ ಅವರಿಂದ ದೂರು

ಕೊಪ್ಪಳ, ಅಕ್ಟೋಬರ್​​ 14: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಗಂಗಾವತಿ ತಹಶೀಲ್ದಾರ್ ವಿನಾಯಕ್ ನೀಡಿದ ದೂರಿನನ್ವಯ ಕೇಸ್ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ?

ಅರ್ಚಕ ವಿದ್ಯಾದಾಸ್ ಬಾಬಾ ಶಾಂತಿಯುತವಾಗಿ ಪೂಜೆ ಮಾಡಲು ಹೈಕೋರ್ಟ್ ಆದೇಶದಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯವು ಪೂಜೆ ಮಾಡಲು ಹಾಗೂ ಒಂದು ಕೋಣೆ ಉಪಯೋಗಿಸಲು ಮಾತ್ರ ಆದೇಶ ನೀಡಿದೆ. ಜೊತೆಗೆ ವಿದ್ಯಾದಾಸ್ ಬಾಬಾ ಅವರು ಯಾವದೇ ಅನ್ಯಚಟುವಟಿಕೆ ಮಾಡುವಂತಿಲ್ಲ.

ಇದನ್ನೂ ಓದಿ: ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅಂಜನಾದ್ರಿ ಬೆಟ್ಟದಲ್ಲಿ ಮಹತ್ವದ ಬೆಳವಣಿಗೆ: ಮುಜರಾಯಿ ಸಿಬ್ಬಂದಿ ಹೊರಕ್ಕೆ, 8 ಕಟ್ಟಡಗಳಿಗೆ ಬೀಗ

ಇನ್ನು ಜೂನ್​​ 13ರ ಸಂಜೆ 4-30 ಗಂಟೆ ಸುಮಾರಿಗೆ ಆಂಜನಾದ್ರಿ ಬೆಟ್ಟದ ಸಿಬ್ಬಂದಿ ವೆಂಕಟೇಶ್​​ ನನಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ‘ವಿದ್ಯಾದಾಸ್ ಬಾಬ ಅವರು ನಮಗೆ ಕಾರ್ಯಲಯದಿಂದ ನಮ್ಮನ್ನು ಹೊರಗಡೆ ಹಾಕಿ ಬೀಗ ಹಾಕಿದ್ದು, ಹಾಗೂ ಇತರೆ ಎಲ್ಲಾ ರೂಮ್​ಗಳಿಗೆ ಬೀಗ ಹಾಕಿದ್ದಾರೆ. ನಮ್ಮ ಮಾತು ಕೇಳುತ್ತಿಲ್ಲ, ನಿಮಗೂ, ಅಂಜನಾದ್ರಿ ಬೆಟ್ಟಕ್ಕೆ ಸಂಬಂಧ ಇರವುದಿಲ್ಲ ಎಂದು ಕೂಗಾಡುತ್ತಿದ್ದಾರೆ. ನೀವು ಕೂಡಲೇ ಬನ್ನಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿ ರವಿಕುಮಾರ ನಾಯ್ಕವಾಡಿ, ಮಹೇಶ ದಾಲಾಲ್, ಚನ್ನಪ್ಪ ಭೇಟಿ ನೀಡಿದ್ದೇವೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

LIVE TV

ಸಿಬ್ಬಂದಿಯನ್ನ ಕಾರ್ಯಾಲಯದಿಂದ ಹೊರಹಾಕಿದ ಬಾಬಾ

‘ಸಿಬ್ಬಂದಿ ಮತ್ತು ಇತರರನ್ನು ವಿಚಾರಣೆ ಮಾಡಲಾಗಿದ್ದು, ಇವರು ತಿಳಿಸಿದ್ದನೆಂದರೆ ಸಂಜೆ 4-15 ಗಂಟೆ ಸುಮಾರಿಗೆ ನಾವು ನಮ್ಮ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯಾದಾಸ್ ಬಾಬಾ ಏಕಾಏಕಿ ಪ್ರವೇಶಿಸಿ ಕೆಲಸ ಮಾಡದಂತೆ ತಕರಾರು ಮಾಡಿದ್ದು, ಜೊತೆಗೆ ಕಾರ್ಯಾಲಯದಿಂದ ಹೊರಗಡೆ ಹಾಕಿ ಬೀಗ ಹಾಕಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ನಾನೇ ಅಂಜನಾದ್ರಿ ಬೆಟ್ಟಕ್ಕೆ ವಾರಸುದಾರ ಎಂದ ಬಾಬಾ

‘ನಂತರ ನಾನು ಮತ್ತು ಸಿಬ್ಬಂದಿ ವಿದ್ಯಾದಾಸ್ ಬಾಬಾ ಅವರಿಗೆ ಕಾರ್ಯಾಲಯದ ಬೀಗ ತೆಗೆಯಲು ಹೇಳಿದಾಗ ಅವರು ನ್ಯಾಯಾಲಯದಲ್ಲಿ ನನ್ನ ಪರವಾಗಿ ಆದೇಶವಾಗಿದೆ. ನಾನೇ ಅಂಜನಾದ್ರಿ ಬೆಟ್ಟಕ್ಕೆ ವಾರಸುದಾರ, ನಿಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಇಲ್ಲಿಂದ ಹೊರಟು ಹೋಗಿ’ ಎಂದಿದ್ದಾರೆ. ‘ಜೊತೆಗೆ ಕಾರ್ಯಾಲಯದಲ್ಲಿ ಹೋಗದಂತೆ ತಡೆದು ಕರ್ತವ್ಯ ನಿರ್ವಹಿಸದಂತೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾನೆ. ಹೀಗಾಗಿ ವಿದ್ಯಾದಾಸ್ ಬಾಬಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More