ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ; ಜೆಡಿಎಸ್ಗೆ ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ್ ಗುಡ್ ಬೈ
ಗಂಗಾವತಿ ಮಾಜಿ ಎಂಎಲ್ಸಿ, ಜೆಡಿಎಸ್ ಮುಖಂಡ ಹೆಚ್.ಆರ್.ಶ್ರೀನಾಥ್ ಆದಷ್ಟು ಬೇಗ ಕಾಂಗ್ರೆಸ್ ಸೇರಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿಯಾಗಿ ಹೆಚ್.ಆರ್.ಶ್ರೀನಾಥ್ ಕಾಂಗ್ರೆಸ್ ಸೇರುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಕೊಪ್ಪಳ: ಜೆಡಿಎಸ್ಗೆ ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ್ ಗುಡ್ಬೈ ಹೇಳಿದ್ದಾರೆ. ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೊಪ್ಪಳ ಜಿಲ್ಲಾ ಜೆಡಿಎಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಹೆಚ್.ಆರ್.ಶ್ರೀನಾಥ್ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಪತ್ರದ ಮೂಲಕ ನಾನು JDSಗೆ ಮನಃಪೂರ್ವಕವಾಗಿ ರಾಜೀನಾಮೆ ನೀಡ್ತಿದ್ದೆನೆ. ನನ್ನ ರಾಜೀನಾಮೆ ಪತ್ರ ಸ್ವೀಕರಿಸಲು ಕೋರುತ್ತೇನೆ ಎಂದು ಶ್ರೀನಾಥ್ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಾನು ಈಗಾಗಲೇ ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿದ್ದೇನೆ, ನಿನ್ನೆ ಮತ್ತು ಇಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಇನ್ನಿತರ ನಾಯಕರನ್ನು ಭೇಟಿ ಮಾಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾನು ಕಾಂಗ್ರೆಸ್ ಸೇರ್ತೀನಿ, ನಮ್ದು ಮೂಲ ಕಾಂಗ್ರೆಸ್ ಕುಟುಂಬ, ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೊಂದಿಗೆ ನಮ್ಮ ತಂದೆಯ ಒಡನಾಟ ಇತ್ತು. ಕಾಂಗ್ರೆಸ್ ನಲ್ಲಿ ನಮ್ಮ ತಂದೆ ಮುತ್ಸದ್ದಿ ರಾಜಕಾರಣಿ, ಹೀಗಾಗಿ ನಾನು ಮತ್ತೆ ಮರಳಿ ಗೂಡಿಗೆ ಬರೋದು ಸಂತೋಷವಾಗಿದೆ ಎಂದರು.
ವಿಧಾನಸಭೆ ಚುನಾವಣೆಗೆ 11 ತಿಂಗಳು ಬಾಕಿಯಿರುವ ಬೆನ್ನಲ್ಲೆ ಬಿಸಿಲು ನಾಡು ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಸದ್ದಿಲ್ಲದೇ ಬಿರುಸು ಪಡೆಯುತ್ತಿವೆ. ಅದರಲ್ಲಿಯೂ ಪಕ್ಷಾಂತರ ಪರ್ವ ಆರಂಭವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ತೆನೆ ಹೊತ್ತ ಮಹಿಳೆಯ ಪಕ್ಷದಲ್ಲಿರುವ ಹಲವು ಮುಖಂಡರು ಸದ್ದಿಲ್ಲದೇ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ರಾಜಕಾರಣಿ ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಪುತ್ರ ಎಚ್.ಆರ್.ಶ್ರೀನಾಥ ಜೆ.ಡಿ.ಎಸ್ ಗೆ ರಾಜೀನಾಮೆ ನೀಡಿದ್ದಾರೆ.ಅವರ ನೇತೃತ್ವದೊಂದಿಗೆ ಜೆಡಿಎಸ್‌ನಲ್ಲಿರುವ ಜಿಲ್ಲೆಯ ಮೂಲ ಕಾಂಗ್ರೆಸ್ಸಿಗರು ಮರಳಿ ಕೈ ಪಕ್ಷದತ್ತ ವಾಲುತ್ತಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ,ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆಸಿರುವ ಪ್ರಸ್ತುತ ಜೆಡಿಎಸ್‌ನಲ್ಲಿರುವ ಜಿಲ್ಲೆಯ ನಾಯಕರು ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಅದರಲ್ಲಿಯೂ ಕೆಲ ನಾಯಕರು ಮುಂದಿನ ವಿಧಾನಸಭಾ ಚುನಾವಣೆ ವೇಳೆ ಕೈ ಪಕ್ಷದ ಟಿಕೇಟ್ ನೀಡುವ ಖಾತ್ರಿ ಪಡಿಸಿಕೊಂಡೆ ಮರಳಿ ಕಾಂಗ್ರೆಸ್ ಸೇರುತ್ತಿರುವುದು ವಿಶೇಷ.ಇದನ್ನೂ ಓದಿ: Guwahati Rain: ಗುವಾಹಟಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ; ನಾಲ್ವರು ಕಾರ್ಮಿಕರು ಜೀವಂತ ಸಮಾಧಿ
ಯಾರೆಲ್ಲ ಸೇರಲಿದ್ದಾರೆ? ಮೊದಲ ಹಂತದಲ್ಲಿ ಎಚ್.ಆರ್.ಶ್ರೀನಾಥ, ಕರಿಯಣ್ಣ ಸಂಗಟಿ ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ಖಚಿತಪಡಿಸಿದ್ದಾರೆ. ಇನ್ನುಳಿದಂತೆ ಶೀಘ್ರದಲ್ಲೇ ಜಿಲ್ಲೆಯಲ್ಲಿರುವ ಮೂಲ ಕಾಂಗ್ರೆಸ್ಸಿಗರನ್ನು ಒಂದೇಡೆ ಸೇರಿ, ಅವರೆಲ್ಲರನ್ನು ಮರಳಿ ಪಕ್ಷಕ್ಕೆ ಆಹ್ವಾನಿಸಲಿದ್ದಾರೆ. ಗ್ರಾ.ಪಂ ಅಧ್ಯಕ್ಷರಿಂದ ಹಿಡಿದು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎಲ್ಲರನ್ನು ಮರಳಿ ಗೂಡಿಗೆ ಕರೆತರಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಈ ಕುರಿತಂತೆ ಚರ್ಚಿಸಲು ಪ್ರಸ್ತುತ ಬೇರೆ-ಬೇರೆ ಪಕ್ಷದಲ್ಲಿರುವ ಜಿಲ್ಲೆಯ ಹಲವು ಮುಖಂಡರೊಂದಿಗೆ ವಾರದೊಳಗೆ ಸಭೆ ಕೂಡ ನಿಗದಿಯಾಗಲಿದೆ.
ಕ್ಷೇತ್ರದಲ್ಲಿ ಸಂಚಲನ: ಕಳೆದ ವಿಧಾನಸಭಾ ಚುನಾವಣೆ ಮುನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಂಡೆದ್ದು ಪಕ್ಷದಿಂದ ಉಚ್ಛಾಟನೆಗೊಂಡು ಹೊರ ನಡೆದಿದ್ದ ಎಚ್.ಆರ್.ಶ್ರೀನಾಥ ಹಾಗೂ ಕರಿಯಣ್ಣ ಸಂಗಟಿ ಮರಳಿ ಕಾಂಗ್ರೆಸ್ ತೆಕ್ಕೆಗೆ ಆಗಮಿಸುತ್ತಿರುವುದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೈ ಟಿಕೆಟ್‌ಗೆ ಗುದ್ದಾಟ ಜೋರಾಗುವ ಲಕ್ಷಣ ಕಾಣತೊಡಗಿದೆ. ಕಳೆದ ಬಾರಿ ಇಲ್ಲಿ ಕರಿಯಣ್ಣ ಸಂಗಟಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಅಂದು ಅವರಿಗೆ ಎಚ್.ಆರ್.ಶ್ರೀನಾಥ ಸಾಥ್ ನೀಡಿದ್ದರು. ಆದರಿಂದು ಎಚ್.ಆರ್.ಶ್ರೀನಾಥ ಕೆ` ಟಿಕೇಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಮರಳಿ ಕರಿಯಣ್ಣ ಸಂಗಟಿ ಸಾಥ್ ನೀಡುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ, ಗಂಗಾವತಿ ವಿಧಾನಸಬಾ ಕ್ಷೇತ್ರ ಪ್ರಸ್ತುತ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅದರಲ್ಲಿಯೂ ಆಡಳಿತ ರೂಢ ಬಿಜೆಪಿ ಅಂಜನಾದ್ರಿ ವಿಷಯವನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಧುಮುಕೋ ಮುನ್ಸೂಚನೆ ದಟ್ಟವಾಗಿದೆ. ಇದನ್ನೂ ಓದಿ: ಟೀಮ್ ಇಂಡಿಯಾ ಪರ ಆಡಲು ನಾನು ಅರ್ಹನಲ್ಲ: ರಿಯಾನ್ ಪರಾಗ್ ಅಚ್ಚರಿಯ ಹೇಳಿಕೆ
ಆದರಿಲ್ಲಿ ಮುಸ್ಲಿಂ ಸಮುದಾಯದ ಇಕ್ಬಾಲ್ ಅನ್ಸಾರಿ ಕಳೆದ ಬಾರಿ ಕಾಂಗ್ರೆಸ್ ನಿಂದ ಪರಾಜಿತಗೊಂಡಿದ್ದಾರೆ. ಅಲ್ಲದೆ, ಇವರು ಕೂಡ ಮರಳಿ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಅಂಜನಾದ್ರಿ ದೇಶವ್ಯಾಪಿ ಚರ್ಚಿತವಾಗುತ್ತಿರುವುದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೈ ಟಿಕೇಟ್ ಇಕ್ಬಾಲ್ ಅನ್ಸಾರಿ ಬದಲಾಗಿ ಹಿಂದುಗಳಿಗೆ ನೀಡಿ ಎಂದು ಇತ್ತೀಚೆಗೆ ಗಂಗಾವತಿಗೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದಗೆ ಖುದ್ದು ಸ್ಥಳೀಯ ಮುಖಂಡರು ಆಗ್ರಹಿಸಿದ್ದರು. ಇದರ ಬೆನ್ನಲ್ಲೆ ಮೂಲ ಕಾಂಗ್ರೆಸ್ಸಿಗರು ಮರಳಿ ಗೂಡಿಗೆ ಸೇರುತ್ತಿರುವುದರಿಂದ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಉಚ್ಚಾಟನೆ ಮಾಡಿದವರನ್ನೆ ಭೇಟಿ ಮಾಡಿದ HR ಶ್ರೀನಾಥ್ ಎಸ್ HR ಶ್ರೀನಾಥ್ ಈ ಬಾರಿ ಗಂಗಾವತಿ ವಿಧಾನಸಬಾ ಕ್ಷೇತ್ರದ ಪ್ರಬಲ ಕೈ ಟಿಕಟ್ ಆಕಾಂಕ್ಷಿ.ಕಳೆದ ಬಾರಿ ಅನ್ಸಾರಿ ಜೊತೆ ಮುನಿಸಿಕೊಂಡು ಸಿದ್ದರಾಮಯ್ಯರನ್ನೆ ಎದುರು ಹಾಕಿಕೊಂಡು ಅನ್ಸಾರಿ ವಿರುದ್ಧ ತೊಡೆ ತಟ್ಟಿದ್ರು. ಚುನಾವಣೆಗೂ ಮುನ್ನ ಇಕ್ಬಾಲ್ ಅನ್ಸಾರಿ ನೆ ಈ ಬಾರಿ ಗಂಗಾವತಿ ಅಭ್ಯರ್ಥಿ ಎಂದು ಕಳೆದ ವಿಧಾನಸಭಾ ಚುಬಾವಣೆ ವೇಳೆ ಸಿದ್ದರಾಮಯ್ಯ ಭಾಷಣ ಮಾಡಿದ್ರು.ಇದನ್ನ ಶ್ರೀನಾಥ್ ನೇರಾ ನೇರ ವಿರೋಧಿಸಿ ಸಿದ್ದರಾಮಯ್ಯ ವಿರುದ್ದ ಕೆಂಡ ಕಾರಿದ್ರು.ಚುನಾವಣೆಯಲ್ಲಿ ಅನ್ಸಾರಿ ಸೋಲಬೇಕಾಯ್ತು.ಅವತ್ತು ಸಿದ್ದರಾಮಯ್ಯ ವಿರುದ್ದ ಮಾತಾಡಿದ್ದಕ್ಕೆ ಶ್ರೀನಾಥ್ ರನ್ನ ಉಚ್ಚಾಟನೆ ಮಾಡಲಾಗಿತ್ತು.ಇಂದು ಅದೇ ಶ್ರೀನಾಥ್ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ,ನಿನ್ನೆ ಡಿಕೆಶಿ ಇಂದು ಸಿದ್ದರಾಮಯ್ಯ ಭೇಟಿ ಮಾಡಿ,ಜೆಡಿ.ಎಸ್ ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಎಮ್ ಇಬ್ರಾಹಿಂ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷರಿಗೆ ರಾಜೀನಾಮೆ ಪತ್ತ ರವಾನೆ ಮಾಡಿದ್ದಾರೆ.ಕೆಲವೇ ದಿನಗಳಲ್ಲಿ HR ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆಯೋಗದು ಬಹುತೇಕ ಖಚಿತ.ಶ್ರೀನಾಥ್ ಯಾವಾಗ ಡಿಕೆ ಶಿವಕುಮಾರ್ ರನ್ನ ಭೇಟಿಯಾದ್ರೂ ಟಿವಿ9 ಕೂಡಾ ಜೆ.ಡಿಎಸ್ ಮತ್ತೊಂದು ವಿಕೆಟ್ ಪತನ ಎಂದು ಸುದ್ದಿ ಭಿತ್ತರಿಸಿತ್ತು,ಇದೀಗ ಟಿವಿ9 ವರದಿ ಕೂಡಾ ನಿಜವಾಗಿದೆ.
ಕೇವಲ ಗಂಗಾವತಿ ವಿಧಾನಸಭಾ ಕ್ಷೇತ್ರವಲ್ಲದೇ ಉಳಿದ ನಾಲ್ಕು ಕ್ಷೇತ್ರಗಳಲ್ಲಿರುವ ಮೂಲ ಕಾಂಗ್ರೆಸ್ಸಿಗರನ್ನು ಮರಳಿ ಕೈ ತೆಕ್ಕೆಗೆ ತರುವ ಪ್ರಯತ್ನ ಆರಂಭವಾಗಿದೆ. ಯಲಬುರ್ಗಾದಲ್ಲಿ ವೀರನಗೌಡ ಬಳೂಟಗಿ, ಬಸವಲಿಂಗಪ್ಪ ಜೊತೆ ಅವರ ಉಳಿದ ಕ್ಷೇತ್ರದಲ್ಲಿರುವ ಹಲವರನ್ನು ಮರಳಿ ಗೂಡಿಗೆ ಕರೆತರುವ ಪ್ರಯತ್ನ ನಡೆದಿದೆ.
ಉತ್ತರ ಕರ್ನಾಟಕ ಪಕ್ಷದ ವರಿಷ್ಠರು ಸಂಪೂರ್ಣ ನಿರ್ಲಕ್ಷ್ಯ ಮಾಡೋದರಿಂದ ಹಲವು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಈ ಹಿಂದೆ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ಪ್ರದೀಪಗೌಡ ಮಾಲೀಪಾಟಿಲ್ ಕಳೆದ ವರ್ಷ ಏಕಾಏಕಿ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಮಲ ಪಡೆಯತ್ತ ಮುಖ ಮಾಡಿದರು. ಪ್ರಸ್ತುತ ಕನಕಗಿರಿ ಪಕ್ಷದಲ್ಲಿರುವ ಹಲವು ಕಾರ್ಯಕರ್ತರು ವಾರದಿಂಚೆಗೆ ಎಎಪಿಯತ್ತ ತೆರಳಿದರು. ಇದೀಗ ಹಿರಿಯ ನಾಯಕರು ದಂಡು ಮರಳಿ ಕೈ ತೆಕ್ಕೆಯತ್ತ ವಾಲುತ್ತಿದೆ. ಇಷ್ಟೆಲ್ಲ ಬೆಳವಣಿಗೆ ನಡೆದರೂ ಜೆಡಿಎಸ್‌ನ ವರಿಷ್ಠರು ಮಾತ್ರ ಈ ಕಡೆ ಮುಖ ಮಾಡಿ, ಪಕ್ಷದಲ್ಲಿರುವ ಉಂಟಾಗಿರುವ ಗೊಂದಲ, ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿಲ್ಲ. ಜತೆಗೆ ಪಕ್ಷ ಸಂಘಟನೆಯೂ ಕುಸಿಯುತ್ತಿರುವುದರಿಂದ ತೆನೆ ಹೊತ್ತ ಮಹಿಳೆಯಲ್ಲಿ ಹೇಳುವವರು?ಕೇಳುವವರು ಇಲ್ಲಂದತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:38 pm, Tue, 14 June 22