ವಿದ್ಯಾರ್ಥಿಯ ಬೈಕ್ ಕ್ರೇಜ್; ಬೈಕ್ಗೂ ಬರ್ತಡೇ, ಕೇಕ್ ಕತ್ತರಿಸಿ ಗೆಳೆಯರಿಗೆ ಬಿಂದಾಸ್ ಪಾರ್ಟಿ
ಯಮಹಾ Rx ಬೈಕ್ ಕ್ರೇಜ್ ಇದ್ದ ವಿದ್ಯಾರ್ಥಿಯೊಬ್ಬ ಬೈಕ್ ಗೆ ಹುಟ್ಟುಹಬ್ಬ ಆಚರಿಸಿದ್ದಾನೆ. ಬೈಕ್ ಮೂಲಕವೇ ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕೊಪ್ಪಳ: ಅನೇಕರು ತಮ್ಮ ವಾಹನಗಳನ್ನು ಬಾಳ ಸಂಗಾತಿಯಂತೆ ಟ್ರೀಟ್ ಮಾಡ್ತಾರೆ. ವಾಹನದ ಅಂದ,ಚೆಂದದ ಬಗ್ಗೆ ಕಾಳಜಿವಹಿಸುತ್ತಾರೆ. ತಮ್ಮ ವಾಹನದ ಜೊತೆ ಒಂದು ಇಮೋಷನಲ್ ಬೊಂಡಿಂಗ್ ಬೆಳೆಸಿಕೊಂಡಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವಿದ್ಯಾರ್ಥಿ ಬೈಕ್ ಮೂಲಕವೇ ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿದ್ದಾರೆ.
ಯಮಹಾ Rx ಬೈಕ್ ಕ್ರೇಜ್ ಇದ್ದ ವಿದ್ಯಾರ್ಥಿಯೊಬ್ಬ ಬೈಕ್ ಗೆ ಹುಟ್ಟುಹಬ್ಬ ಆಚರಿಸಿದ್ದಾನೆ. ಬೈಕ್ ಮೂಲಕವೇ ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ವಿದ್ಯಾರ್ಥಿ ವಿರೇಶ ವಿಭಿನ್ನವಾಗಿ ಬೈಕ್ ಕ್ರೇಜ್ ಎಂಥದ್ದು ಅನ್ನೋದನ್ನ ತೋರಿಸಿದ್ದಾನೆ. ವಿರೇಶ್ ಯಮಹಾ ಆರ್ ಎಕ್ಸ್ ಬೈಕ್ ಖರೀದಿ ಮಾಡಿ ನಿನ್ನೆಗೆ ಒಂದು ವರ್ಷ ಆಗಿದ್ದರಿಂದ ಸೆಲೆಬ್ರೇಷನ್ ಮಾಡಿದ್ದಾನೆ. ಒಟ್ಟು 50 ಸಾವಿರ ರೂಪಾಯಿ ಕೊಟ್ಟು ಬೈಕ್ ಖರೀದಿ ಮಾಡಿದ್ದ ವಿರೇಶ ಪ್ಯಾರ ಮೆಡಿಕಲ್ ಓದುತ್ತಿದ್ದಾನೆ. ತನ್ನ ಸೆಕೆಂಡ್ ಹ್ಯಾಂಡ್ ಬೈಕ್ ಗೆ ಡಾರ್ಲಿಂಗ್ ಅಂತಾ ಹೆಸರಿಟ್ಟಿರೋ ವಿರೇಶ, ಬೈಕ್ ನಿಂದಲೇ ಕೇಕ್ ಕಟ್ ಮಾಡಿಸಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಇನ್ನು ಬೈಕ್ ತನ್ನ ಕಡೆ ಬಂದು ಒಂದು ವರ್ಷ ಆಗಿದ್ದರಿಂದ ಸ್ನೇಹಿತರಿಗೆ ಬಿಂದಾಸ್ ಪಾರ್ಟಿ ಕೂಡ ಕೊಟ್ಟಿದ್ದಾನೆ.
Published On - 4:25 pm, Sun, 7 August 22