ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ಕೇಸ್​​: ಸ್ಥಳಕ್ಕೆ ಆರ್​ ಅಶೋಕ್ ಭೇಟಿ, ಅಧಿಕಾರಿಗೆ ಕ್ಲಾಸ್​​

ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣ ಹಿನ್ನಲೆ ಗ್ರಾಮದ ಆಲೆಮನೆಗೆ ವಿಪಕ್ಷ ನಾಯಕ ಆರ್.ಅಶೋಕ್ ಇಂದು ಭೇಟಿ ನೀಡಿದ್ದಾರೆ. ಜಮೀನಿನ ಮಾಲೀಕನ ಮೇಲೆ ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಆಲೆಮನೆ ಯಾಕೆ ಸೀಜ್ ಮಾಡಿಲ್ಲ. ರಾಜ್ಯದ ಜನರು ಕೇಳುತ್ತಿದ್ದಾರೆಂದು ಎಂದು ಡಿಹೆಚ್‌ಒ ಡಾ.ಮೋಹನ್​ಗೆ ತರಾಟೆ ತೆಗೆದುಕೊಂಡಿದ್ದಾರೆ.

Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on:Dec 16, 2023 | 3:04 PM

ಮಂಡ್ಯ, ಡಿಸೆಂಬರ್​​​ 16: ತಾಲೂಕಿನ ಹಾಡ್ಯ ಗ್ರಾಮದಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣ ಹಿನ್ನಲೆ ಹಾಡ್ಯ ಗ್ರಾಮದ ಆಲೆಮನೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಇಂದು ಭೇಟಿ ನೀಡಿದ್ದು, ಡಿಹೆಚ್‌ಒ ಡಾ.ಮೋಹನ್​ಗೆ ತರಾಟೆ ತೆಗೆದುಕೊಂಡಿದ್ದಾರೆ. ಜಮೀನಿನ ಮಾಲೀಕನ ಮೇಲೆ ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಆಲೆಮನೆ ಯಾಕೆ ಸೀಜ್ ಮಾಡಿಲ್ಲ, ಜಮೀನಿನ ಗುರುತು ಯಾಕೆ ಮಾಡಿಲ್ಲ. ರಾಜ್ಯದ ಜನರು ಕೇಳುತ್ತಿದ್ದಾರೆಂದು ತರಾಟೆ ತೆಗೆದುಕೊಂಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರೂಣ ಲಿಂಗ ಪತ್ತೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ. ಆಲೆಮನೆ ಯತಾಪ್ರಕಾರ ನಡೆಯುತ್ತಿದೆ. ಮಹಜರ್ ಮಾಡಿ ಸರ್ಕಾರದ ಸೀಲ್ ಹಾಕಬೇಕಿತ್ತು. ಆದರೆ ಈ ಜಾಗದಲ್ಲಿ ಏನು ಕ್ರಮ ಆಗಿಲ್ಲ. ಸಾಕ್ಷಿಗಳು ಇಲ್ಲಿ ನಾಶ ಆಗಿದೆ. ಕೋರ್ಟ್‌ಗೆ ಬೇಕಾದ ಎವಿಡೆನ್ಸ್ ಏನು ಸಿಗಲ್ಲ‌ ಇಲ್ಲಿ. ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ಕೃತ್ಯಕ್ಕೆ ಬಳಸಿರುವ ಯಾವುದೇ ವಸ್ತು ಇಲ್ಲಿ ಇಲ್ಲ, ಎಲ್ಲಾ‌ ಕ್ಲೀನ್ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಭ್ರೂಣಲಿಂಗ ಹತ್ಯೆ ಕೇಸ್​: ಸ್ಯ್ಕಾನಿಂಗ್ ಸೆಂಟರ್​ಗೆ ಬೀಗ ಜಡಿದ ಅಧಿಕಾರಿಗಳು

ವೈದ್ಯರು ವರ್ಷಕ್ಕೆ 600-700 ಭ್ರೂಣ ಹತ್ಯೆ ಮಾಡುತ್ತಿದ್ದರು. ಈ ದಂಧೆಯಿಂದ ಕೋಟಿ ಕೋಟಿ ರೂ. ಹಣ ಸಂಪಾದಿಸಿದ್ದಾರೆ. ವ್ಯವಸ್ಥಿತವಾದ ಜಾಲದ ಹಿಂದೆ ಕೆಲಸ ಮಾಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಲಿಂಗಾನುಪಾತ ಹೆಚ್ಚಾಗಿದೆ. 20 ವರ್ಷ ಕಳೆದರೆ 60-70 ಲಕ್ಷ ಹೆಣ್ಣು ಮಕ್ಕಳು ಕಡಿಮೆ ಆಗುತ್ತಾರೆ. ಅಧಿಕಾರಿಗಳು ನಾನು ಬಂದಿದ್ದೇನೆ ಎಂದು ಬಂದಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲ. ಸಿಐಡಿ ತನಿಖೆ ಮಾಡುತ್ತಾರೆ ಅಂತಾರೆ. ರಾಜ್ಯಾದ್ಯಂತ ಸುದ್ದಿಯಾದರೂ ಆಲೆಮನೆ ಸೀಜ್ ಆಗಿಲ್ಲ. ಹೀಗಾದರೆ ಜನಗಳಿಗೆ ಹೇಗೆ ನಂಬಿಕೆ ಬರುತ್ತದೆ. ಸರ್ಕಾರದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಅಂತಾರೆ. ಕ್ರಮ ಆಗಿದ್ದರೆ ಹೊಸಕೋಟೆಯಲ್ಲಿ ಯಾಕೆ ನಡೆಯುತ್ತಿತ್ತು? ಸರ್ಕಾರದ ಕೇರ್ ಲೆಸ್ ಇಂದ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭ್ರೂಣ ಪತ್ತೆ, ಹತ್ಯೆ ಪ್ರಕರಣ; ಮೈಸೂರಿನಲ್ಲಿ ವೈದ್ಯಕೀಯ ಪ್ರಮಾಣಪತ್ರ ಇಲ್ಲದ 14 ಕ್ಲಿನಿಕ್‌ಗಳಿಗೆ ಬೀಗ

ಕೃತ್ಯ ಬೆಳಕಿಗೆ ಬಂದ ಮೇಲೆ ಸರ್ಕಾರ ಏನು ಕ್ರಮ‌ ತೆಗೆದುಕೊಂಡಿಲ್ಲ. ಸಿಐಡಿ ಅಧಿಕಾರಿಗಳು ಯಾವ ಊರು ಅಂತ ನನ್ನ ಕೇಳುತ್ತಾರೆ. ಆರೋಗ್ಯ ಇಲಾಖೆಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಾರೆ. ಅಧಿಕಾರಿಗಳು, ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಮುಚ್ಚಿರುವ ಆಲೆಮನೆಯಲ್ಲಿ ಕೃತ್ಯ ನಡೆಯುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರು. ಆದರೆ ಇಲ್ಲಿ ಎಲ್ಲವೂ ಯಥಾಸ್ಥಿತಿ ಇದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Sat, 16 December 23