AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ ಆನೆಗೆ ಅಂಬಾರಿ ಹೊರುವ ಲಕ್: ಜಂಬೂ ಸವಾರಿ ಕ್ಯಾಪ್ಟನ್ ಕುತೂಹಲಕ್ಕೆ ತೆರೆ

Captain Prashantha Elephant: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂ ಸವಾರಿ ಕ್ಯಾಪ್ಟನ್ ಕುತೂಹಲಕ್ಕೆ ತೆರೆ ಬಿದ್ದಿದೆ. 54 ವರ್ಷದ ಬಲಿಷ್ಠ ಪ್ರಶಾಂತ ಆನೆಗೆ ಈ ಜವಾಬ್ದಾರಿ ನೀಡಲಾಗಿದೆ. ಈ ಕುರಿತಾಗಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗುವ ದುಬಾರೆ ವೀರನ ಮಾಹಿತಿ ಇಲ್ಲಿದೆ.

ಪ್ರಶಾಂತ ಆನೆಗೆ ಅಂಬಾರಿ ಹೊರುವ ಲಕ್: ಜಂಬೂ ಸವಾರಿ ಕ್ಯಾಪ್ಟನ್ ಕುತೂಹಲಕ್ಕೆ ತೆರೆ
ಪ್ರಶಾಂತ ಆನೆ
ರಾಮ್​, ಮೈಸೂರು
| Edited By: |

Updated on:Oct 14, 2026 | 4:34 PM

Share

ಮೈಸೂರು, ಅಕ್ಟೋಬರ್​​ 14: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಂಭ್ರಮ ಕಳೆಗಟ್ಟಿದೆ. ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಜನರು ಕಾಯುತ್ತಿದ್ದಾರೆ. ಅದರಲ್ಲೂ ಈ ಭಾರಿ  ಅಂಬಾರಿ ಹೊರುವ ಆನೆ ಯಾವುದಾಗಬಹುದು ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. 54 ವರ್ಷದ ಪ್ರಶಾಂತ ಈ ಭಾರಿ ಅಂಬಾರಿ ಹೊತ್ತು ಸಾಗಲಿದ್ದಾನೆ. ಈ ಕುರಿತಾಗಿ ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ದುಬಾರೆ ವೀರ ಪ್ರಶಾಂತ​ ಆನೆ ಮೊದಲ ಬಾರಿಗೆ 750 ಕೆ.ಜೆ ಚಿನ್ನದ ಅಂಬಾರಿ ಹೊತ್ತು ಸಹಸ್ರಾರು ಜನರ ಮಧ್ಯೆ ಹೆಜ್ಜೆ ಹಾಕಲಿದ್ದಾನೆ.

ಪ್ರಶಾಂತ ಆನೆಯ ರೋಚಕ ಸಂಗತಿಗಳು

ಪ್ರಶಾಂತ ಕೊಡಗು ಜಿಲ್ಲೆಯ ಕುಶಾಲನಗರ ಬಳಿಯ ದುಬಾರೆ ಶಿಬಿರದ ಆನೆ. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಪ್ರಶಾಂತ ಆನೆಯ ಎತ್ತರ 2.61 ಮೀಟರ್, ಉದ್ದ 3.46 ಮೀಟರ್‌. ಅತ್ಯಂತ ಬಲಿಷ್ಠವಾಗಿರುವ ಪ್ರಶಾಂತ ಅಂದಾಜು 5100 ತೂಕ ಹೊಂದಿದ್ದಾನೆ.

18 ವರ್ಷಗಳಿಂದಲೂ ದಸರಾ ಮಹೋತ್ಸವದಲ್ಲಿ ಪ್ರಶಾಂತ ಆನೆ ಭಾಗಿ

ಇನ್ನು ಜೆ.ಎ.ಚಿನ್ನಪ್ಪ ಪ್ರಶಾಂತ ಆನೆಯ ಮಾವುತ, ಚಂದ್ರ ಎನ್ನುವವರು ಕಾವಾಡಿಗರಾಗಿದ್ದಾರೆ. ದುಬಾರೆಯ ಈ ಪ್ರಶಾಂತ ಆನೆ ಕಳೆದ 18 ವರ್ಷಗಳಿಂದಲೂ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ. ಅದರಂತೆ ಈ ಭಾರಿ ಕೂಡ ಭಾಗಿಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಅದೃಷ್ಟ ಪ್ರಶಾಂತನಿಗೆ ಒಲಿದು ಬಂದಿದೆ.

LIVE TV

ಇದನ್ನೂ ಓದಿ: ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್! ಜನರ ಆಕ್ರೋಶ

ಇತ್ತೀಚೆಗೆ ಚಿನ್ನದ ಅಂಬಾರಿ ಹೊರುವ ಕಾಯಕದಿಂದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ನಿವೃತ್ತಿ ನೀಡಲಾಗಿತ್ತು. ಆ ಬಳಿಕ ದಸರಾ ಜಂಬೂಸವಾರಿಯ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿತ್ತು. ಧನಂಜಯ, ಪ್ರಶಾಂತ, ಏಕಲವ್ಯ, ಮಹೇಂದ್ರ ಹಾಗೂ ಸುಗ್ರೀವ ಆನೆಗಳು ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ರೇಸ್‌ನಲ್ಲಿದ್ದವು. ಆದರೆ ಇತ್ತೀಚೆಗೆ ತಾಲೀಮು ವೇಳೆ ಮರದ ಅಂಬಾರಿ ಹೊತ್ತು ಸಾಗಿದ್ದ ಮಹೇಂದ್ರ ಅರ್ಧ ದಾರಿಯಲ್ಲೇ ನಿಂತು ಬಿಟ್ಟಿದ್ದ. ಹೀಗಾಗಿ ಆತನನ್ನು ಕ್ಯಾಪ್ಟನ್ ರೇಸ್​ನಿಂದ ಕೈಬಿಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Wed, 14 October 26

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More