AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಮೇಲೆ 21 FIR ಇದೆ, ಇನ್ನೊಂದು ಕೇಸ್​​ ಹಾಕಿದರೂ ಹೆದರಲ್ಲ’: ಗೃಹ ಸಚಿವ ಪ್ರಿಯಾಂಕ್​​ ಖರ್ಗೆಗೆ ಪ್ರತಾಪ್​​ ಸಿಂಹ ಸವಾಲು

ಗಣೇಶೋತ್ಸವ ಮೆರವಣಿಗೆ ವಿಚಾರ ಸಂಬಂಧ ಟಿ.ನರಸೀಪುರ ಪಿಐ ನೀಡಿದ್ದ ಹೇಳಿಕೆಯೀಗ ರಾಜಕೀಯ ನಾಯಕರ ವಾಕ್ಸಮರಕ್ಕೆ ನಾಂದಿ ಹಾಡಿದೆ. ಪೊಲೀಸ್​​ ಅಧಿಕಾರಿ ಹೇಳಿಕೆ ಬೆನ್ನಲ್ಲೇ ಠಾಣೆಗೆ ನುಗ್ಗುವ ಮಾತಾಡಿದ್ದ ಮಾಜಿ ಸಂಸದ ಪ್ರತಾಪ್​​ ಸಿಂಹ ವಿರುದ್ಧ ಕಿಡಿನ ಕಾರಿದ್ದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ, ಠಾಣೆಗೆ ನುಗ್ಗಿದ್ರೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಎಚ್ಚರಿಕೆ ನೀಡಿದ್ದರು. ಆದರೆ ಅವವರ ಈ ಹೇಳಿಕೆಗೆ ಪ್ರತಾಪ್​​ ಸಿಂಹ ಕೌಂಟರ್​​ ನೀಡಿದ್ದು, ವಿಜೃಂಭಣೆಯ ಗಣೇಶೋತ್ಸವಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದಿದ್ದಾರೆ.

'ನನ್ನ ಮೇಲೆ 21 FIR ಇದೆ, ಇನ್ನೊಂದು ಕೇಸ್​​ ಹಾಕಿದರೂ ಹೆದರಲ್ಲ': ಗೃಹ ಸಚಿವ ಪ್ರಿಯಾಂಕ್​​ ಖರ್ಗೆಗೆ ಪ್ರತಾಪ್​​ ಸಿಂಹ ಸವಾಲು
ಗೃಹ ಸಚಿವ ಪ್ರಿಯಾಂಕ್​​ ಖರ್ಗೆಗೆ ಪ್ರತಾಪ್​​ ಸಿಂಹ ಸವಾಲುImage Credit source: Tv9 Kannada
ರಾಮ್​, ಮೈಸೂರು
| Edited By: |

Updated on:Sep 13, 2026 | 12:12 PM

Share

ಬೆಂಗಳೂರು, ಸೆಪ್ಟೆಂಬರ್​​ 13: ಗಣಪತಿ ಕೂರಿಸುವ ಯುವಕರಿಗೆ ಟಿ.ನರಸೀಪುರ ಪಿಐ ಧಮ್ಕಿ ಆರೋಪ ವಿಚಾರ ಸಂಬಂಧ ಪೊಲೀಸ್​​ ಠಾಣೆಗೆ ನುಗ್ಗುತ್ತೇವೆ ಎಂಬ ಪ್ರತಾಪ್​​ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ, ಠಾಣೆಗೆ ನುಗ್ಗಿದ ಬಳಿಕ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಗೃಹ ಸಚಿವರಿಗೇ ಖಡಕ್​​ ತಿರುಗೇಟು ನೀಡಿರುವ ಮಾಜಿ ಸಂಸದ, ನನ್ನ ಮೇಲೆ 21 FIR ಇದೆ, ಇನ್ನೊಂದು ಕೇಸ್​​ ಹಾಕಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ವಿಜೃಂಭಣೆಯ ಗಣೇಶೋತ್ಸವಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದಿದ್ದಾರೆ.

‘ಪ್ರಿಯಾಂಕ್​ ಖರ್ಗೆ ಪರಪ್ಪನ ಅಗ್ರಹಾರ ಸೇರುವ ಸ್ಥಿತಿಯಲ್ಲಿದ್ದಾರೆ’

ಇದೇ ವೇಳೆ ಪ್ರಿಯಾಂಕ್​​ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಾಪ್​​ ಸಿಂಹ, ಕುಮಾರಸ್ವಾಮಿ KPSC ಹಗರಣದ ಬಗ್ಗೆ ಮಾತಾಡಿದ್ಮೇಲೆ ಪ್ರಿಯಾಂಕ್​ ಖರ್ಗೆ ಪರಪ್ಪನ ಅಗ್ರಹಾರ ಸೇರುವ ಸ್ಥಿತಿಯಲ್ಲಿದ್ದಾರೆ. ಪ್ರಿಯಾಂಕ್​​ ಕನಸಿನಲ್ಲಿ ಬರೀ ಪರಪ್ಪನ ಅಗ್ರಹಾರವೇ ಬರ್ತಿದೆ ಎದು ವ್ಯಂಗ್ಯವಾಡಿದ್ದಾರೆ. ಟಿ.ನರಸೀಪುರ ಇನ್ಸ್​ಪೆಕ್ಟರ್ ಧನಂಜಯ್​ ಯುವಕರ ಮೇಲೆ ದರ್ಪದ ಮಾತಾಡಿ ಧಮ್ಕಿ ಹಾಕಿದ್ದಾರೆ. ಕೇಸ್ ಹಾಕುವ ಭಯ ಟಿ.ನರಸೀಪುರದ ಜನರಿಗಿದ್ದು, ಧನಂಜಯ್​​ಗೆ ಕ್ಲಾಸ್​ ತೆಗೆದುಕೊಳ್ಳಲು ಟಿ.ನರಸೀಪುರಕ್ಕೆ ಅಶೋಕ್​ ಬರ್ತಿದ್ದಾರೆ ಎಂದೂ ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ:  “ಹೇಳಲ್ಲ, ಮಾಡಿ ತೋರಿಸ್ತೀನಿ”: ಮಸೀದಿ ಬಳಿ ಗಣೇಶ ಮೆರವಣಿಗೆ, ಪಟಾಕಿ ಹೊಡೆಯುವಂತಿಲ್ಲ ಎಂದ ಇನ್ಸ್‌ಪೆಕ್ಟರ್ ಧನಂಜಯ್

ಪೊಲೀಸ್​​ ಠಾಣೆಗೆ ನುಗ್ಗುತ್ತೇವೆ ಎಂಬ ಪ್ರತಾಪ್​​ ಸಿಂಹ ಹೇಳಿಕೆ ಸಂಬಂಧ ಎಕ್ಸ್​​ ಪೋಸ್ಟ್​​ ಮಾಡಿದ್ದ ಪ್ರಿಯಾಂಕ್​​ ಖರ್ಗೆ, ಮೈಸೂರಿನ ಕಡೆಯ ಪೇಟೆ ರೌಡಿಯೊಬ್ಬ ಪೊಲೀಸರನ್ನ ಬೆದರಿಸುವ ಮಾತಾಡಿದ್ದಾನೆ. ಠಾಣೆಗೆ ನುಗ್ತೇನೆ ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ಬಳಿಕ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುತ್ತೆ. ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದ್ರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳನ್ನು ಸಹಿಸುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕಸಿಯುವುದಕ್ಕೆ ಬಿಡುವುದಿಲ್ಲ. ಅಸ್ತಿತ್ವ ಕಳೆದುಕೊಂಡ ಕತ್ತಲೆ ಜಗತ್ತಿನ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನ ಕರೆಸಿ ಅಸಂಬದ್ಧ ಹೇಳಿಕೆ ನೀಡುತ್ತಾ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಾಪ್​ ಸಿಂಹಗೆ ಪರೋಕ್ಷವಾಗಿ ಎಚ್ಚರಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:10 pm, Sun, 13 September 26

Follow Us
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್