AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಪಕ್ಕಾ, ಇದರಲ್ಲಿ ಎರೆಡು ಮಾತಿಲ್ಲ: ಸಚಿವ ಸುನೀಲ್ ಕುಮಾರ್

ಬಿಜೆಪಿ ಸರ್ಕಾರ ಬಂದ ಮೇಲೆ 6 ಲಕ್ಷ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮತ್ತೆ ಹೊಸದಾಗಿ ಐಪಿ ಸೆಕ್ಟರ್​ಗಳಿಗೆ ವಿದ್ಯುತ್ ಸಂಪರ್ಕ ನೀಡುವುದರ ಕುರಿತು ಚರ್ಚಿಸಲಾಗಿದೆ.

ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಪಕ್ಕಾ, ಇದರಲ್ಲಿ ಎರೆಡು ಮಾತಿಲ್ಲ: ಸಚಿವ ಸುನೀಲ್ ಕುಮಾರ್
ಸಚಿವ ಸುನೀಲ್ ಕುಮಾರ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 26, 2022 | 8:49 PM

Share

ಮೈಸೂರು: ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಪಕ್ಕಾ, ಇದರಲ್ಲಿ ಎರೆಡು ಮಾತಿಲ್ಲ. ನಾನು ವಿಧಾನಸಭೆಯಲ್ಲೆ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದು ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ಬಳಿಕ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಸರ್ಕಾರ ಬಂದ ಮೇಲೆ 6 ಲಕ್ಷ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮತ್ತೆ ಹೊಸದಾಗಿ ಐಪಿ ಸೆಕ್ಟರ್​ಗಳಿಗೆ ವಿದ್ಯುತ್ ಸಂಪರ್ಕ ನೀಡುವುದರ ಕುರಿತು ಚರ್ಚಿಸಲಾಗಿದೆ. 2005ರಲ್ಲಿ ಅವತ್ತಿನ ಸರ್ಕಾರ ಕಲ್ಲಿದ್ದಲಿನ ದರ ಹೊಂದಾಣಿಕೆಯನ್ನ ಮಾಡಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕು. ಹಾಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ರಾಜ್ಯದಲ್ಲಿ ವಿದ್ಯುತ್ ದರ ಬಗ್ಗೆ ಒಮ್ಮೆ ಹೆಚ್ಚಾದ್ದಾರೆ ಮತ್ತೊಮ್ಮೆ ದರ ಕಡಿಮೆಯಾಗಲಿದೆ. ನಮ್ಮ ಸರ್ಕಾರ ಬಂದಾಗಲಾಗಲಿ ಅಥವಾ ನಾನು ಸಚಿವನಾದ ಮೇಲೆ ಈ ನೀತಿ ಜಾರಿಗೆ ಬಂದಿಲ್ಲ. ಕಳೆದ 7 ವರ್ಷಗಳಿಂದ ಈ ಪರಿಷ್ಕರಣೆ ನಡೆಯುತ್ತಲೇ ಇದೆ ಎಂದು ಹೇಳಿದರು.

ವಿದ್ಯುತ್ ದರ ಹೆಚ್ಚಳ ಅನಿವಾರ್ಯ: ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್

ಎಫ್​ಎಸಿ ಬೆಲೆ ಹೆಚ್ಚಾದರೆ ವಿದ್ಯುತ್ ದರ (electricity rates) ಹೆಚ್ಚಳ ಅನಿವಾರ್ಯ. ಉತ್ಪಾದನೆ ವೆಚ್ಚ ಹೆಚ್ಚಾದರೆ ವಿದ್ಯುತ್ ದರ ಏರಿಸಬೇಕಾಗುತ್ತೆ ಎಂದು ಟಿವಿ9ಗೆ ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್ ಹೇಳಿಕೆ ನೀಡಿದರು. ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಹೆಚ್ಚಾಗಿದೆ. ವಿದ್ಯುತ್​ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿದೆ. ಖರೀದಿ ವೇಳೆ ದರ ಕಡಿಮೆ ಇದ್ದರೆ KERCಗೆ ಪ್ರಸ್ತಾವನೆ ಸಲ್ಲಿಸಲ್ಲ. ಕಲ್ಲಿದ್ದಲು ಇತರೆ ಕಚ್ಚಾ ಸಾಮಾಗ್ರಿ ಏರಿಕೆಯಾದ್ರೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಉತ್ಪಾದನೆ ದರ ಕಡಿಮೆಯಾದರೆ ವಿದ್ಯುತ್ ದರ ಕಡಿಮೆ ಆಗಬಹುದು. ಇಲ್ಲವಾದರೆ ಹಾಗೇ ಮುಂದುವರಿಯಲೂಬಹುದು. ಇದನ್ನ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸುತ್ತೆ ಎಂದು ನಾಗಾರ್ಜುನ್ ತಿಳಿಸಿದರು.

ವಿದ್ಯುತ್ ದರ ಏರಿಕೆಗೆ ಹೋಟೆಲ್ ಮಾಲೀಕರ ಸಂಘ ವಿರೋಧ

ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪ್ರತಿ ಯೂನಿಟ್​ಗೆ 43 ಪೈಸೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರ ಮುಂದಿನ ವರ್ಷ ಏಪ್ರಿಲ್​ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ. ಈಗಾಗಲೇ ವಿದ್ಯುತ್ ಮೇಲಿನ ತೆರಿಗೆ ಶೇ‌ಕಡಾ 9ರಷ್ಟು ಇದೆ. ಇದನ್ನು ಶೇಕಡಾ 4ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಈ ಸಂಬಂಧ ಮುಂದಿನ ವಾರ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮಾಹಿತಿ ನೀಡಲಾಗಿದೆ.

ಈ ವರ್ಷ ಏಪ್ರಿಲ್​ನಲ್ಲಿ ಬೆಸ್ಕಾಂ ವಿದ್ಯುತ್ ದರ ಹೆಚ್ಚಿಸಿತ್ತು. ಪ್ರತಿ ಯೂನಿಟ್​ಗೆ 35 ಪೈಸೆ ಏರಿಕೆ ಮಾಡಿದ್ದ ಬೆಸ್ಕಾಂ, ಕೊರೊನಾ ಬಳಿಕ ಈಗಷ್ಟೇ ಹೋಟೆಲ್​​ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ವಿದ್ಯುತ್​ ದರ ಮತ್ತೆ ಏರಿಸಿದರೆ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:44 pm, Mon, 26 September 22