ವೈದ್ಯಕೀಯ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಬ್ಲಾಕ್‌ಮೇಲ್: ರಾಯಚೂರಿನಲ್ಲಿ ಮೂವರು ಖತರ್ನಾಕ್ ಸುಲಿಗೆಕೋರರ ಬಂಧನ!
ರಾಯಚೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರ ಫೋಟೋ, ವಿಡಿಯೋ ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ಸುಲಿಗೆಕೋರರ ಗ್ಯಾಂಗ್ ಅನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ. ಆನ್‌ಲೈನ್ ಪೇಮೆಂಟ್ ಭಯದಿಂದ ಪೆಟ್ರೋಲ್ ಬಂಕ್‌ಗಳ ಮೂಲಕ ನಗದು ಹಣ ಪಡೆಯುತ್ತಿದ್ದ ಇವರ ಕಿರಾತಕ ಆಟವನ್ನು ಪೊಲೀಸರು ಕೊನೆಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಖ್ಯಾಂಶಗಳು
- ರಾಯಚೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಮೂವರು ಸುಲಿಗೆಕೋರರ ಬಂಧನ.
- ಯುವಕ-ಯುವತಿಯರ ಫೋಟೋ ತೆಗೆದು ಹಣಕ್ಕಾಗಿ ಬೈಕ್ ಕೀ ಕಸಿದು ಟಾರ್ಚರ್.
- ಫೋನ್ ಪೇ ಭಯದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾಶ್ ಪಡೆಯುತ್ತಿದ್ದ ಗ್ಯಾಂಗ್.
ರಾಯಚೂರು, ಸೆಪ್ಟೆಂಬರ್ 09: ನಗರದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನೇ ಗುರಿಯಾಗಿಸಿಕೊಂಡು ಫೋಟೋ, ವಿಡಿಯೋಗಳ ಮೂಲಕ ಬ್ಲಾಕ್‌ಮೇಲ್ ಮಾಡುತ್ತಿದ್ದ ಮೂವರು ಸುಲಿಗೆಕೋರರ ಗ್ಯಾಂಗ್ ಅನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡೆದಿದ್ದೇನು?
ಇತ್ತೀಚೆಗೆ ರಾತ್ರಿ ವೇಳೆ ಡಾಬಾಗೆ ಸ್ನೇಹಿತೆಯೊಂದಿಗೆ ಊಟಕ್ಕೆ ಹೋಗಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಈ ಗ್ಯಾಂಗ್ ಫಾಲೋ ಮಾಡಿತ್ತು. ವಿದ್ಯಾರ್ಥಿಗಳ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಂಡು ಕಿರಿಕ್ ತೆಗೆದ ಆರೋಪಿಗಳು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಬೈಕ್ ಕೀ ಕಸಿದುಕೊಂಡು ಕಿರುಕುಳ ನೀಡಿದ್ದ ಗ್ಯಾಂಗ್, ಆರಂಭದಲ್ಲಿ 30 ಸಾವಿರ ರೂ. ನಗದು ಪಡೆದು, ನಂತರ ಮತ್ತಷ್ಟು ಹಣಕ್ಕಾಗಿ ಪೀಡಿಸಿತ್ತು.
ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?
ಆನ್‌ಲೈನ್ ಹಾಗೂ ಫೋನ್ ಪೇ ಮೂಲಕ ಹಣ ಪಡೆದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿದ್ದ ಆರೋಪಿಗಳು, ಕೇವಲ ನಗದು ರೂಪದಲ್ಲಿ ಮಾತ್ರ ಹಣ ಪಡೆಯುತ್ತಿದ್ದರು. ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕಾನ್ ಮಾಡಿಸಿ ವಿದ್ಯಾರ್ಥಿಗಳಿಂದ ನಗದು ಹಣ ಪಡೆಯುತ್ತಿದ್ದ ಇವರ ಖತರ್ನಾಕ್ ಆಟ ಕೊನೆಗೂ ಬಯಲಾಗಿದೆ. ರಾತ್ರಿ ವೇಳೆ ವಾಕಿಂಗ್ ಹೋಗುವ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಜೋಡಿಗಳನ್ನು ಬೆದರಿಸುತ್ತಿದ್ದ ಈ ಜಾಲದ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




