PSI ಹಗರಣದಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ: ಟಿವಿ 9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ದರ್ಶನ್ ಗೌಡ ಬಂಧನವಾಗಿದ್ದು, ಈ ಕುರಿತಾಗಿ ಟಿವಿ 9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ರಾಮನಗರ: ಪಿಎಸ್‌ಐ ಹಗರಣದಲ್ಲಿ ಏನು ಸತ್ಯ ಇದೆ ಅದನ್ನು ತಿಳಿಸಿದ್ದೇವೆ. ದರ್ಶನ್ಗೌಡಗೆ ನೋಟಿಸ್ ಕೊಟ್ಟಿದ್ದರು ವಿಚಾರಣೆ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ಸಚಿವರ ಪ್ರಭಾವದಿಂದ ಬಿಟ್ಟಿದ್ದರು. ಮತ್ತೆ ವಿಚಾರಣೆ ಮಾಡಿ ಅವರನ್ನ ಕರೆದುಕೊಂಡು ಹೋಗಿದ್ದಾರೆ. ಬರೀ ಇದು ಒಂದೇ ಅಲ್ಲ ನಮ್ಮ ಬಳಿ ಸಾಕಷ್ಟು ಮಾಹಿತಿಯಿದೆ. PSI ಹಗರಣದಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರಾಮನಗರದಲ್ಲಿ ಟಿವಿ 9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಹಗರಣಕ್ಕೆ ಕಾರಣ ಕರ್ತರಾದವರ ವಿರುದ್ಧ ಕೇಸ್ ಹಾಕಬೇಕು. ಸರ್ಕಾರ ಕೇಸ್ ಹಾಕದಿದ್ದರೆ ನಾವು ಸುದ್ದಿಗೋಷ್ಠಿ ನಡೆಸುತ್ತೇವೆ. ಮುಖ್ಯಮಂತ್ರಿಗಳು ಯಾರನ್ನು ರಕ್ಷಣೆ ಮಾಡಬೇಕು ಮಾಡಲಿ, ನೋಡೋಣ ಆಮೇಲೆ ಮಾತನಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ದರ್ಶನ್ ಗೌಡ ಬಂಧನ
ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಮೋಸ್ಟ್ ಕಾಂಟ್ರುವರ್ಷಿಯಲ್ ವ್ಯಕ್ತಿ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಗೌಡ ರಾಮನಗರ ಜಿಲ್ಲೆಯ ಮಾಗಡಿ ಮೂಲದವರು. ಪೊಲೀಸರ ವಿಚಾರಣೆ ವೇಳೆ ದರ್ಶನ್ ಗೌಡ ಸಚಿವ ಅಶ್ವತ್ಥ್ ಹೆಸರು ಹೇಳಿದ್ದ. ಸಚಿವರ ಹೆಸರು ಹೇಳಿದ ಬಳಿಕ ಸಿಐಡಿಯವರು ಬಿಟ್ಟುಕಳಿಸಿದ್ದಕ್ಕೆ ಕಾಂಗ್ರೆಸ್ನವರು ಸಚಿವ ಅಶ್ವತ್ಥ್, ಸಹೋದರ ಸತೀಶ್ ವಿರುದ್ಧ ಆರೋಪಿಸಿದ್ದರು. ನಿನ್ನೆ ದರ್ಶನ್‌ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಅಧಿಕೃತವಾಗಿ ಬಂಧಿಸಿದ್ದಾರೆ. ಯಲಹಂಕ ನ್ಯೂಟೌನ್ ಕೇಸ್ ಸಂಬಂಧ ದರ್ಶನ್ ಗೌಡ ಅರೆಸ್ಟ್ ಆಗಿದ್ದು, ಹೊಸದಾಗಿ 3 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೌಡ, ಹರೀಶ್, ಮೋಹನ್‌ನನ್ನು ಬಂಧಿತರು. ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳ ಬಂಧನ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Hawala Transactions: ಅಕ್ರಮ ಹಣ ವರ್ಗಾವಣೆ: ಸಚಿವ ಸತ್ಯೇಂದ್ರ ಜೈನ್ ನಿವಾಸ ಸೇರಿ 7 ಕಡೆ ಇಡಿ ದಾಳಿ
ನಿನ್ನೆ ವಿಚಾರಣೆಗಾಗಿ ನನ್ನ ಮಗನನ್ನು ಕರೆದೊಯ್ದಿದ್ದರು ಎಂದು ಟಿವಿ 9ಗೆ ಬಂಧಿತ ದರ್ಶನ್‌ಗೌಡ ತಂದೆ ವೆಂಕಟೇಶ್ ಮಾಹಿತಿ ನೀಡಿದರು. ಕುಣಿಗಲ್ ಸಮೀಪ ವಶಕ್ಕೆ ಪಡೆದು ಮಗನನ್ನು ಕರೆದೊಯ್ದಿದ್ರು. ವಿಚಾರಣೆ ನಡೆಯಲಿ, ನನ್ನ ಪುತ್ರ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:32 pm, Mon, 6 June 22