ಕ್ರಿಸ್ಮಸ್ ದಿನವೇ ಕನಕಪುರದ ಸಿದ್ಧೇಶ್ವರ ಬೆಟ್ಟದಲ್ಲಿರುವ ಉದ್ಭವ ಲಿಂಗವನ್ನು ಕೆಡವಿದ ಕಿಡಿಗೇಡಿಗಳು
ಕ್ರಿಸ್ಮಸ್ ದಿನವೇ ಕಿಡಿಗೇಡಿಗಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ಧೇಶ್ವರ ಬೆಟ್ಟದಲ್ಲಿನ ಉದ್ಭವ ಲಿಂಗವನ್ನು ಭಗ್ನಗೊಳಿಸಿದ್ದಾರೆ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಪೊಲೀಸರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.
ರಾಮನಗರ, (ಡಿಸೆಂಬರ್ 25): ಜಿಲ್ಲೆ ಕನಕಪುರ (Kanakapura) ತಾಲೂಕಿನ ಸಿದ್ಧೇಶ್ವರ ಬೆಟ್ಟದಲ್ಲಿನ ಉದ್ಭವ ಲಿಂಗವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಕ್ರಿಸ್ಮಸ್ ದಿನವೇ ಬೈಕಿನಲ್ಲಿ ಬಂದು ದೇವಸ್ಥಾನ ನುಗ್ಗಿ ಉದ್ಭವ ಲಿಂಗ (linga statue) ಕೆಡವಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಬಗ್ಗೆ ಪೊಲಿಸರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.
ಬೆಟ್ಟದಲ್ಲಿ ಯುವಕ ನಾಪತ್ತೆ
ಸ್ನೇಹಿತನ ಜೊತೆ ಸಾವನದುರ್ಗ ಚಾರಣ ಏರಿದ್ದ ಯುವಕನೋರ್ವ ನಾಪತ್ತೆಯಾಗಿದ್ದಾನೆ, ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟದಲ್ಲಿ ಯುವಕ ಕಾಣೆಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಗಗನ್ (30) ಕಾಣೆಯಾಗಿರೋ ಯುವಕ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಗಗನ್, ನಿನ್ನೆ(ಡಿಸೆಂಬರ್ 24) ರಜೆ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತನ ಜೊತೆ ಮಧ್ಯಾಹ್ನ 3 ಕ್ಕೆ ಚಾರಣ ಏರಿದ್ದ. ಆದ್ರೆ, ಗಗನ್ ಏಕಾಏಕಿ ಕಾಣೆಯಾಗಿದ್ದಾನೆ. ಇನ್ನು ಗಗನ್ ಕಾಣೆಯಾಗುತ್ತಿದ್ದಂತೆಯೇ ಸ್ನೇಹಿತರು ಬೆಟ್ಟ ಇಳಿದು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಪೊಲೀಸರು, ಅರಣ್ಯಾಧಿಕಾರಿಗಳು ಡ್ರೋಣ್ ಬಳಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ 24 ಗಂಟೆಗಳಿಂದ ಸ್ಥಳದಲ್ಲೇ ಬೀಡುಬಿಟ್ಟಿ ಗಗನ್ಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಇನ್ನು ಈ ಬಗ್ಗೆ ಮಾಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.