ಧರ್ಮೇಗೌಡರ ನಿಧನ; ಕಳಚಿತು ಸಹಕಾರ ಚಳವಳಿಯ ಮತ್ತೊಂದು ಕೊಂಡಿ

ವಿಧಾನ ಪರಿಷತ್​ ಉಪಸಭಾಪತಿ ಎಸ್​.ಎಲ್.ಧರ್ಮೇಗೌಡರ ರಾಜಕಾರಣದ ಶೈಲಿ ಮತ್ತು ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಈ ಬರಹದಲ್ಲಿ ನೆನಪಿಸಿಕೊಂಡಿದ್ದಾರೆ.

ಧರ್ಮೇಗೌಡರ ನಿಧನ; ಕಳಚಿತು ಸಹಕಾರ ಚಳವಳಿಯ ಮತ್ತೊಂದು ಕೊಂಡಿ
ಎಸ್​.ಎಲ್.ಧರ್ಮೇಗೌಡ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 29, 2020 | 3:18 PM

ವಿಧಾನ ಪರಿಷತ್​ ಉಪಸಭಾಪತಿ ಎಸ್​.ಎಲ್.ಧರ್ಮೇಗೌಡರ ರಾಜಕಾರಣದ ಶೈಲಿ ಮತ್ತು ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಈ ಬರಹದಲ್ಲಿ ನೆನಪಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ತನಕ ರಾಜಕಾರಣದ ಹಲವು ಸ್ತರಗಳ ಅನುಭವವಿದ್ದ ಅಪರೂಪದ ರಾಜಕಾರಿಣಿ ಎಸ್​.ಎಲ್.ಧರ್ಮೇಗೌಡ. ಹುಟ್ಟುಹಬ್ಬವಾದ ಕೇವಲ 13 ದಿನಗಳ ನಂತರ ಈ ಜಗತ್ತಿನಿಂದ ದೂರವಾಗಿದ್ದಾರೆ. ಧರ್ಮೇಗೌಡರ ರಾಜಕಾರಣದ ಶೈಲಿ ಮತ್ತು ಜನಪ್ರಿಯತೆ ಅರ್ಥವಾಗಬೇಕಾದರೆ ಕಡೂರು-ತರೀಕೆರೆ ತಾಲ್ಲೂಕುಗಳ ಹಳ್ಳಿಗಳಲ್ಲಿ ತಿರುಗಾಡಬೇಕು.

ಧರ್ಮೇಗೌಡರ ರಾಜಕಾರಣದ ಶೈಲಿ ಬಹುತೇಕ ಅವರ ತಂದೆ ಎಸ್​.ಆರ್​.ಲಕ್ಷ್ಮಯ್ಯ ಬದುಕಿನ ಮಾದರಿಯನ್ನೇ ಹೋಲುತ್ತದೆ. ಹಳ್ಳಿಗಳಲ್ಲಿ ಕಾರ್ಯಕರ್ತರು-ಬೆಂಬಲಿಗರ ಸಂಘಟನೆ, ಸಹಕಾರ ಕ್ಷೇತ್ರದಲ್ಲಿ ಆಳವಾಗಿ ಬೇರುಬಿಡುವ ಪ್ರಯತ್ನ, ಜೊತೆಯವರ ಕಷ್ಟಸುಖಕ್ಕೆ ಸ್ಪಂದಿಸುತ್ತಿದ್ದ ರೀತಿ, ದೇವೇಗೌಡರಿಗೆ ಅಚಲ ನಿಷ್ಠೆ.. ಹೀಗೆ ಧರ್ಮೇಗೌಡರ ರಾಜಕೀಯ ಬದುಕಿನ ಮೇಲೆ ಅಪ್ಪನ ಛಾಯೆ ಎದ್ದು ಕಾಣುವಂತಿತ್ತು.

ಇದನ್ನೂ ಓದಿ: ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು ತಾಲ್ಲೂಕು ತರಪನಹಳ್ಳಿಯಲ್ಲಿ ಜನತಾ ಪರಿವಾರದ ಧುರೀಣ ಎಸ್.ಆರ್.ಲಕ್ಷ್ಮಯ್ಯ ಮತ್ತು ಕೃಷ್ಣಮ್ಮ ದಂಪತಿ ಪುತ್ರನಾಗಿ ಡಿಸೆಂಬರ್ 16, 1955ರಂದು ಧರ್ಮೇಗೌಡ ಜನಿಸಿದರು. ಶಿಕ್ಷಕರಾಗಿದ್ದ ಎಸ್​.ಆರ್.ಲಕ್ಷ್ಮಯ್ಯ ತಾಲ್ಲೂಕು ಅಭಿವೃದ್ಧಿ ಮಂಡಳಿ (ಡಿಟಿಪಿ) ಮೂಲಕ ರಾಜಕಾರಣ ಪ್ರವೇಶಿಸಿದರು. 1985 ಮತ್ತು 1994ಲ್ಲಿ ಬೀರೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.

ಧರ್ಮೇಗೌಡರು ಬಿಳೇಕಲ್ಲಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಕ್ರಿಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಹಾಲು ಸೊಸೈಟಿಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಕಾರ್ಯಚಟುವಟಿಕೆ ಆರಂಭಿಸಿದರು. ಇತರ ಜಿಲ್ಲೆಗಳಿಗೆ ಹೋಲಿಸಿದ ಹೈನುಗಾರಿಕೆಯಲ್ಲಿ ಹಿಂದುಳಿದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರಿಗೆ ಹಸು ಸಾಕಾಣಿಕೆಯೂ ಜೀವನಕ್ಕೆ ಸದೃಢ ಉಪ ಆದಾಯ ಆಗಬಹುದು ಎಂದು ತೋರಿಸಿಕೊಟ್ಟವರು ಧರ್ಮೇಗೌಡ.

ವ್ಯವಸಾಯ ಸೇವಾ ಸಹಕಾರ ಸಂಘಗಳ (ವಿಎಸ್​ಎಸ್​ಎನ್) ಕಾರ್ಯನಿರ್ವಹಣೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ (ಡಿಸಿಸಿ) ಅಧ್ಯರಾಗುವವರೆಗೆ ಬೆಳೆದರು. ಅಲ್ಲಿಗೇ ಸೀಮಿತರಾಗದೆ ಅಪೆಕ್ಸ್​ ಬ್ಯಾಂಕ್​ ಅಧ್ಯಕ್ಷ ಗಾದಿಯಲ್ಲಿಯೂ ಕೆಲ ವರ್ಷ ಕೆಲಸ ಮಾಡಿದ್ದರು.

ಲಿಂಗದಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿ ಧರ್ಮೇಗೌಡರು ಕೆಲಸ ಮಾಡಿದ ರೀತಿಯನ್ನು ಅಲ್ಲಿನ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 2004ರಲ್ಲಿ ಬೀರೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ನಂತರದ ದಿನಗಳಲ್ಲಿ ಈ ಕ್ಷೇತ್ರವೇ ರದ್ದಾಯಿತು. ಚಿಕ್ಕಮಗಳೂರು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಫಲ ನೀಡಲಿಲ್ಲ.

2013ರಲ್ಲಿ ಸಿ.ಟಿ.ರವಿ ವಿರುದ್ಧ ಸೋಲನುಭವಿಸಿದ್ದರು. 2018ರ ಚುನಾವಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮೇಗೌಡರ ಸ್ಪರ್ಧಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರೇ ಒತ್ತಾಯಿಸಿದ್ದರು. ಆದರೆ ಧರ್ಮೇಗೌಡರು ಹಿಂದೆ ಸರಿದರು. ಜೆಡಿಎಸ್​ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಂದ ವಿಧಾನಪರಿಷತ್​ಗೆ ನಾಮನಿರ್ದೇಶನಗೊಂಡರು, ಉಪಸಭಾಪತಿಯೂ ಆದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಮತ್ತು ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಧರ್ಮೇಗೌಡರ ಛಾಪು ಇತ್ತು. ಯಾವುದೇ ಅನುಕೂಲಗಳು ಮೊದಲು ತಮ್ಮ ಕ್ಷೇತ್ರದ ಜನರಿಗೆ ಸಿಗಬೇಕೆಂಬ ಕಾಳಜಿಯಿಂದ ಕೆಲಸ ಮಾಡುತ್ತಿದ್ದುದು ಇದಕ್ಕೆ ಕಾರಣ. ಪರಿಸರದ ಬಗ್ಗೆಯೂ ಅವರಿಗೆ ಕಾಳಜಿಯಿತ್ತು. ಕಡೂರು-ಚಿಕ್ಕಮಗಳೂರು ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಆರಂಭವಾಗುವ ಮೊದಲು ಮರಗಳನ್ನು ಕಡಿಯುವ ಬಗ್ಗೆ ಆಕ್ಷೇಪಿಸಿದ್ದರು. ಹಲವು ಭಾಷಣಗಳಲ್ಲಿ ಗುಡ್ಡ, ಕಾಡು, ಮರ, ಪರಿಸರದ ಬಗ್ಗೆ ಪ್ರಸ್ತಾಪಿಸುತ್ತಿದ್ದರು.

‘ಮರಗಳಿದ್ರೆ ರೈತರ ಬದುಕು ಚೆನ್ನಾಗಿರೋಕೆ ಸಾಧ್ಯ. ಮರ ಕಡಿಯುವ ಮೊದಲು ಸಾವಿರ ಸಲ ಯೋಚಿಸಬೇಕು’ ಎಂದು ಹಲವು ಸಲ ವೇದಿಕೆಯ ಮೇಲಿ ಭಾಷಣಗಳಲ್ಲಿ, ಖಾಸಗಿಯಾಗಿ ಆಪ್ತರ ಜೊತೆಗೆ ನಡೆಸುತ್ತಿದ್ದ ಮಾತುಕತೆಗಳಲ್ಲಿ ಕಿವಿಮಾತು ಹೇಳುತ್ತಿದ್ದರು. ಮರಗಳನ್ನು ಕಡಿಯದಂತೆ ಮನವೊಲಿಸಲು ಯತ್ನಿಸುತ್ತಿದ್ದರು.

ಸಹಕಾರ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನಸೌಧದಲ್ಲಿ ರೈತರ ಬಗ್ಗೆ ದನಿ ಎತ್ತುತ್ತಿದ್ದ ಧರ್ಮೇಗೌಡ ಅಷ್ಟಕ್ಕೇ ಸೀಮಿತರಾದವರಲ್ಲ. ಸ್ವತಃ ಪ್ರಗತಿಪರ ಕೃಷಿಕರಾಗಿದ್ದರು. ಎಮ್ಮೆದೊಡ್ಡಿಯಲ್ಲಿ ಅವರ ತೋಟವೂ ಕಳೆಕಳೆಯಾಗಿತ್ತು. ಧರ್ಮೇಗೌಡರ ಸಾವಿನಿಂದ ರಾಜ್ಯ ರಾಜಕಾರಣದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹೆಚ್ಚೇನೂ ಹೇಳಲಾರೆ. ಆದರೆ ಧರ್ಮೇಗೌಡರಂತೆ ಸಹಕಾರ ಕ್ಷೇತ್ರದ ಒಳಹೊರಗು ಬಲ್ಲವರು ಈ ತಲೆಮಾರಿನಲ್ಲಿ ಅಪರೂಪ. ಕಾಯ್ದೆ-ಕಾನೂನುಗಳು ಸಾವಿರ ಇರುತ್ತವೆ. ಅದನ್ನು ರೈತರ ಪರವಾಗಿ ಅರ್ಥೈಸುವ ಸಾಮರ್ಥ್ಯ ಧರ್ಮೇಗೌಡರಿಗೆ ಇತ್ತು. ಈ ವಿಷಯದಲ್ಲಿಯಂತೂ ರಾಜ್ಯಕ್ಕೆ ನಷ್ಟವೇ ಸರಿ.

ಚಿಕ್ಕಮಗಳೂರು ಜಿಲ್ಲಾ ರಾಜಕಾರಣದಲ್ಲಿಯೂ ಜೆಡಿಎಸ್​ಗೆ ಮುಖವಾಗಿದ್ದವರು ಧರ್ಮೇಗೌಡ. ತಂತ್ರಗಾರಿಕೆಯಲ್ಲಿ ಭೋಜೇಗೌಡರು ಚುರುಕು, ಆದರೆ ಜನರನ್ನು ಸಂಭಾಳಿಸಲು, ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗಲು ಧರ್ಮೇಗೌಡರೇ ಜೆಡಿಎಸ್​ಗೆ ಆಧಾರವಾಗಿದ್ದವರು. ಕುಮಾರಸ್ವಾಮಿ-ದೇವೇಗೌಡರ ಪ್ರವಾಸವೋ, ಪಕ್ಷದ ವತಿಯಿಂದ ನಡೆಯಬೇಕಾದ ಚಳವಳಿ-ಹೋರಾಟಗಳೋ ಇದ್ದಾಗ ಧರ್ಮೇಗೌಡರು ಮುಂದೆ ನಿಂತು ಎಲ್ಲವನ್ನೂ ವ್ಯವಸ್ಥೆ ಮಾಡುತ್ತಿದ್ದರು.

ಈ ಕಾಲದ ರಾಜಕಾರಣದಲ್ಲಿ ಅತ್ಯಂತ ಅಪರೂಪ ಎನಿಸಿರುವ ಪಕ್ಷನಿಷ್ಠೆಯನ್ನು ಅಪ್ಪನ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಧರ್ಮೇಗೌಡರ ಸಾವು ಜೆಡಿಎಸ್​ ಪಾಲಿಗೆ ನಿರ್ವಾತವನ್ನೇ ಸೃಷ್ಟಿಸಿದೆ. ಗ್ರಾಮ ಪಂಚಾಯಿತಿ ರಾಜಕೀಯದಿಂದ ವಿಧಾನಪರಿಷತ್​ ಉಪಸಭಾಪತಿ ಆಗುವವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವ ಇದ್ದವರು ಧರ್ಮೇಗೌಡ. ಗೆಲುವಿನ ಸಿಹಿಯಷ್ಟೇ, ಸೋಲಿನ ಕಹಿಯನ್ನೂ ಉಂಡು ರಾಜಕೀಯ ಜೀವನ ರೂಪಿಸಿಕೊಂಡರು. ಅಂಥವರ ಬದುಕು ಹೀಗೆ ದುರಂತ ಅಂತ್ಯ ಕಾಣಬಾರದಿತ್ತು.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಧರ್ಮೇಗೌಡ!

ಧರ್ಮೇಗೌಡ ಆತ್ಮಹತ್ಯೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿ ಟಿ ರವಿ ಹೇಳಿದ್ದೇನು?

ನನ್ನ ಸ್ನೇಹಿತ ನನ್ನನ್ನು ಅಗಲಿ ಹೋಗಿದ್ದಾರೆ.. ಇದು ರಾಜಕಾರಣದ ಕೊಲೆ: ಭಾವುಕರಾದ ಹೆಚ್.ಡಿ. ಕುಮಾರಸ್ವಾಮಿ

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ