ರಾತ್ರೋರಾತ್ರಿ ಕನ್ನಡ ಶಾಲೆ ಮೇಲೆ ಪುಡಿ ರೌಡಿಗಳ ಅಟ್ಟಹಾಸ: ಶಾಲಾ ಕೈದೋಟದಲ್ಲಿ ಗಾಂಧೀಜಿ, ಸರಸ್ವತಿ ವಿಗ್ರಹಗಳು ಧ್ವಂಸ
harogolige primary school: ಈ ಶಾಲೆಯು ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜ್ಞಾನ ದಾಹವನ್ನು ನೀಗಿಸುತ್ತಿರುವ ಈ ಶಾಲೆಯಾಗಿದೆ. ಆಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಕೈಲಾದ ಮಟ್ಟಿಗೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ, ಕೈತೋಟ, ಸರಸ್ವತಿ ದೇವಿ, ಮಹಾತ್ಮ ಗಾಂಧೀಜಿ ಮತ್ತು ವಿವೇಕಾನಂದರ ವಿಗ್ರಹಗಳನ್ನು ಸ್ಥಾಪಿಸಿ ಮಕ್ಕಳಿಗೆ ದೇಶಾಭಿಮಾನ ಮೂಡುವಲ್ಲಿ ಅವಿರತವಾಗಿ ಶ್ರಮವಹಿಸುತ್ತಿದ್ದರು.
ಶಿವಮೊಗ್ಗ: ಕಲೆ ಮತ್ತು ಸಾಂಸ್ಕೃತಿಕ ಜಿಲ್ಲೆ ಶಿವಮೊಗ್ಗದಲ್ಲಿ ಪ್ರಜ್ಞಾವಂತ ಮಂದಿ ತಲೆತಗ್ಗಿಸುವಂತಹ ದಾರುಣ ಘಟನೆ ನನನೆ ರಾತ್ರಿ ನಡೆದಿದೆ. ಕನ್ನಡ ಶಾಲೆಯ ಮೇಲೆ ಪುಡಿ ರೌಡಿಗಳು ಅಟ್ಟಹಾಸಗೈದಿದ್ದು ಶಾಲಾ ಕೈದೋಟದಲ್ಲಿ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ. ತೀರ್ಥಹಳ್ಳಿ (therthahalli) ತಾಲೂಕಿನ ಹಾರೊಗೊಳಿಗೆ ಪ್ರಾಥಮಿಕ ಶಾಲೆಯ (harogolige primary school) ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು (miscreants), ಶಾಲಾ ಹಿಂಭಾಗದಲ್ಲಿರುವ ಕೈತೋಟವನ್ನು ನಾಶಪಡಿಸಿದ್ದಾರೆ (vandalise).
ಈ ಶಾಲೆಯು ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜ್ಞಾನ ದಾಹವನ್ನು ನೀಗಿಸುತ್ತಿರುವ ಈ ಶಾಲೆಯಾಗಿದೆ. ಆಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಕೈಲಾದ ಮಟ್ಟಿಗೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ, ಕೈತೋಟ, ಸರಸ್ವತಿ ದೇವಿ, ಮಹಾತ್ಮ ಗಾಂಧೀಜಿ ಮತ್ತು ವಿವೇಕಾನಂದರ ವಿಗ್ರಹಗಳನ್ನು ಸ್ಥಾಪಿಸಿ ಮಕ್ಕಳಿಗೆ ದೇಶಾಭಿಮಾನ ಮೂಡುವಲ್ಲಿ ಅವಿರತವಾಗಿ ಶ್ರಮವಹಿಸುತ್ತಿದ್ದರು. ಶಾಲಾ ಉಪಾಧ್ಯಾಯರುಗಳು ಮಕ್ಕಳಿಗೆ ಕೈತೋಟದ ಅರಿವನ್ನು ಮೂಡಿಸಿದ್ದರು.
ಆದರೆ ಕೆಲ ಕಿಡಿಗೇಡಿಗಳು ದುಷ್ಕೃತ್ಯದ ಫಲವಾಗಿ ಹಾರೊಗೊಳಿಗೆ ಶಾಲಾ ಆವರಣದಲ್ಲಿ ಈಗ ಆತಂಕದ ಛಾಯೆ ಮೂಡಿದೆ. ಇಂತಹ ದುಷ್ಕೃತ್ಯಕ್ಕೆ ಹಾರೊಗೊಳಿಗೆ ಮತ್ತು ಅದರ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವೆ ಕಾರಣವೆಂದು ಹೇಳಲಾಗುತ್ತಿದೆ. ರಾತ್ರಿ ಹೊತ್ತು ಕುಡಿದು ಗಲಾಟೆ ಮಾಡುವುದು ಹಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಂತಹ ದುಷ್ಕೃತ್ಯವನ್ನು ಎಸಗಿದ ದುಷ್ಕರ್ಮಿಗಳ ವಿರುದ್ಧ ಹಾರೊಗೊಳಿಗೆ ಗ್ರಾಮ ಪಂಚಾಯಿತಿ ಮತ್ತು ಶಾಲಾ ಮಂಡಳಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
Also Read: ಇದು ಯಾವ ಸಿಗ್ನಲ್ಲೋ ಮಾರಾಯಾ!? 2021ರಲ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಚಿತ್ರ ಘಟನೆಗಳ ರಿವೈಂಡ್ ಮಾಡೋಣಾ ಬನ್ನೀ