AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ದಸರಾ ವೇಳೆ ಸೋಮಣ್ಣ ಆನೆ ರಂಪಾಟ: ಧಾರ್ಮಿಕ ವಿಧಿವಿಧಾನಗಳ ಮೊರೆ ಹೋದ ಅರ್ಚಕರು

ಶಿವಮೊಗ್ಗ ದಸರಾ ಮೆರವಣಿಗೆ ವೇಳೆ ಸೋಮಣ್ಣ ಆನೆಯ ರಂಪಾಟದಿಂದ ಉಂಟಾದ ಅಹಿತಕರ ಘಟನೆಗೆ ಪರಿಹಾರವಾಗಿ, ಶಿವಮೊಗ್ಗದ ಅರ್ಚಕರು ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮ ಆಯೋಜಿಸಿದ್ದಾರೆ. 5 ದಿನಗಳ ವಿಶೇಷ ಪೂಜೆಯು ಯಾವುದೇ ಅನಾಹುತಗಳು ಸಂಭವಿಸದಂತೆ ಶುದ್ಧೀಕರಣ ಮಾಡುವ ಉದ್ದೇಶ ಹೊಂದಲಾಗಿದೆ.

ಶಿವಮೊಗ್ಗ ದಸರಾ ವೇಳೆ ಸೋಮಣ್ಣ ಆನೆ ರಂಪಾಟ: ಧಾರ್ಮಿಕ ವಿಧಿವಿಧಾನಗಳ ಮೊರೆ ಹೋದ ಅರ್ಚಕರು
ಸೋಮಣ್ಣ ಆನೆ ರಂಪಾಟ, ಅರ್ಚಕರಿಂದ ಹೋಮ
ಬಸವರಾಜ್​ ಯರಗಣವಿ
| Edited By: |

Updated on: Nov 03, 2026 | 4:02 PM

Share

ಮುಖ್ಯಾಂಶಗಳು

  • ಶಿವಮೊಗ್ಗ ದಸರಾ ಮೆರವಣಿಗೆ ವೇಳೆ ಸೋಮಣ್ಣ ಆನೆ ರಂಪಾಟ
  • ಧಾರ್ಮಿಕ ವಿಧಿವಿಧಾನಗಳ ಮೊರೆ ಹೋದ ಶಿವಮೊಗ್ಗ ಅರ್ಚಕರು
  • 5 ದಿನಗಳ ವಿಶೇಷ ಪೂಜೆ, ಪುನಸ್ಕಾರ ಆಯೋಜನೆ

ಶಿವಮೊಗ್ಗ, ನವೆಂಬರ್​ 03: ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ನಡೆದ ಸೋಮಣ್ಣ ಆನೆ ಅವಘಡ ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಅವಾಂತರ ಕುರಿತು ಆಂತರಿಕ ತನಿಖೆ ಕೂಡ ನಡೆದಿದೆ. ಇದೆಲ್ಲದರ ಮಧ್ಯೆ ಇದೀಗ ಶಿವಮೊಗ್ಗದ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳ ಮೊರೆ ಹೋಗಿದ್ದಾರೆ. ಗುರು-ಹಿರಿಯರ ಮಾರ್ಗದರ್ಶನದಂತೆ ಪ್ರಾಯಶ್ಚಿತ್ತ ಹೋಮಕ್ಕೆ ಅರ್ಚಕರು ಮುಂದಾಗಿದ್ದಾರೆ.

ಪ್ರಾಯಶ್ಚಿತ್ತ ಹೋಮ: ವಿಶೇಷ ಪೂಜೆ ಆಯೋಜನೆ

ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ನಡೆದ ಆತಂಕಕಾರಿ ಘಟನೆ ಸಾಕಷ್ಟು ವಿಘ್ನಗಳಿಗೆ ಕಾರಣವಾಗಿತ್ತು. ಹೀಗಾಗಿ ಶಿವಮೊಗ್ಗದ ಅರ್ಚಕರು ಗುರು-ಹಿರಿಯರ ಮಾರ್ಗದರ್ಶನದಂತೆ ಪ್ರಾಯಶ್ಚಿತ್ತ ಹೋಮ ಮಾಡಲು ಮುಂದಾಗಿದ್ದಾರೆ. ಯಾವುದೇ ಅನಾಹುತಗಳು ಉಂಟಾಗದಂತೆ ವಿಶೇಷ ಪೂಜೆ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಚಾತುರ್ಯ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತಿದ್ದ ಆನೆ

ಶೃಂಗೇರಿ ಶ್ರೀಗಳ ಮಾರ್ಗದರ್ಶನದಂತೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಪ್ರಾಯಶ್ಚಿತ್ತ ಹೋಮ ಆಯೋಜನೆ ಮಾಡಲಾಗಿದೆ. ಇಂದು ಮುಂಜಾನೆಯಿಂದ ಪ್ರಾಯಶ್ಚಿತ್ತಾದಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಶ್ರೀ ವಿಶ್ವಕ್ಸೇನ ಪೂಜೆ, ನವಗ್ರಹ ಪೂಜೆ ಹಾಗೂ ಹೋಮ, ಪೂರ್ಣಾಹುತಿ, ಸಂಪ್ರೋಕ್ಷಣೆ ಪೂಜೆ ಮಾಡಲಾಗುತ್ತಿದೆ. ಒಟ್ಟು 5 ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತಿದೆ. ಕೊನೆಯ ದಿನ ಹಿತ್ತಾಳೆಯ ಗಜವಾಹನೋತ್ಸವ ಹಾಗೂ ಅಮ್ಮನವರ ತ್ರಿಶೂಲ ಇಟ್ಟು ಆನೆಯು ಚಲಿಸಿದ ರಸ್ತೆಯಲ್ಲಿ ಉತ್ಸವ ಮಾಡಲಾಗುತ್ತದೆ.

LIVE TV

ಘಟನೆ ಹಿನ್ನೆಲೆ 

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಪಳಗಿದ ಆನೆಗಳನ್ನು ಶಿವಮೊಗ್ಗ ನಗರಕ್ಕೆ ಕರೆತರಲಾಗಿತ್ತು. ಸಾಗರ, ಬಹದ್ದೂರು ಹಾಗೂ ಸೋಮಣ್ಣ ಆನೆಗಳು. ಕಳೆದ ಐದಾರು ವರ್ಷಗಳಿಂದ ಸಾಗರ ಆನೆ ಶಿವಮೊಗ್ಗದಲ್ಲಿ ಅಂಬಾರಿಯನ್ನು ಹೊರುತ್ತಿದ್ದ. ಆದರೆ ಸಾಗರ ಆನೆ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಸೋಮಣ್ಣ ಆನೆಗೆ ಕೊನೆ ಕ್ಷಣದಲ್ಲಿ ಬೆಳ್ಳಿಯ ಅಂಬಾರಿಯನ್ನು ಹೊರುವುದಕ್ಕೆ ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗ ದಸರಾ ಅಂಬಾರಿ ಆನೆ ಸೋಮಣ್ಣ ಭಯಗೊಂಡು ಓಡಿದ್ದೇಕೆ? ತನಿಖಾ ವರದಿಯಲ್ಲಿ ಅಚ್ಚರಿಯ ಸಂಗತಿಗಳು ಬಹಿರಂಗ

ಸೋಮಣ್ಣಗೆ ಕೇವಲ ನಗರದಲ್ಲಿ ಸುತ್ತಾಟದ ತಾಲೀಮು ಮಾತ್ರವಿತ್ತು. ಆದರೆ ಅಂಬಾರಿ ಹೊತ್ತು ಸಾಗುವ ತಾಲೀಮು ನೀಡಿರಲಿಲ್ಲ. ಹೀಗಾಗಿ ಸೋಮಣ್ಣ ಆನೆ ಕೋಟೆ ಆಂಜನೇಯ ದೇಗುಲದಿಂದ ಕೇವಲ 500 ಮೀಟರ್‌ ಮುಂದೆ ಹೋಗಿ ಮತ್ತು ಅಲ್ಲಿಯ ಜನಜಂಗುಳಿ ನೋಡಿ ವಾಪಸ್‌ ಓಡಿ ಬಂದಿತ್ತು. ವಾಪಸ್‌ ಬರುವಾಗ ಆನೆಯು ದೊಡ್ಡ ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ಅದೇ ಮಾರ್ಗವಾಗಿ ವಾಪಸ್‌ ಬಂದು ಸ್ವದೇಶಿ ಕಾಲೇಜ್‌ ಮುಂಭಾಗದ ಜಾಗಕ್ಕೆ ನುಗ್ಗಿದೆ. ನಂತರ ಅಲ್ಲಿಂದ ಮುಂದೆ ಕಿರಿದಾದ ಜಾಗದ ಮೂಲಕ ಕೋಟೆ ರಸ್ತೆಯ ಮೊದಲ ತಿರುವಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಆನೆಯ ಆವೇಶ ಡಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಬಸವರಾಜ್​ ಯರಗಣವಿ
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More